ಬ್ರೇಕಿಂಗ್ ನ್ಯೂಸ್
17-11-21 02:13 pm Mangaluru Correspondent ಕ್ರೈಂ
ಮಂಗಳೂರು, ನ.17: ಹ್ಯಾಕರ್ ಶ್ರೀಕಿ ರಾಜ್ಯ ಮತ್ತು ಕೇಂದ್ರ ಸರಕಾರದ ಹಣಕಾಸು ಖಾತೆಗಳನ್ನು ಹ್ಯಾಕ್ ಮಾಡಿ, ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದರೆ, ಇತ್ತ ಕೇಂದ್ರ ಸರಕಾರದ ಅಧೀನ ಸಂಸ್ಥೆ ಎಂಆರ್ ಪಿಎಲ್ ಕಂಪನಿಯ ಆಡಳಿತ ನಿರ್ದೇಶಕರ ಇ-ಮೈಲ್ ಐಡಿಯನ್ನೇ ದುಷ್ಕರ್ಮಿಯೊಬ್ಬ ಹ್ಯಾಕ್ ಮಾಡಿ, ವಂಚನೆಗೆ ಯತ್ನಿಸಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಎಂಆರ್ ಪಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಅವರ ಇ-ಮೇಲ್ ಐಡಿಯನ್ನು ನ.13ರಂದು ಹ್ಯಾಕ್ ಮಾಡಿದ್ದು, ಸಂಜೆ ನಾಲ್ಕರಿಂದ 5 ಗಂಟೆಯ ಮಧ್ಯೆ edirector@gmail.com ಎಂಬ ಖಾತೆಯ ಹೆಸರಲ್ಲಿ ಎಂಆರ್ ಪಿಎಲ್ ಕಂಪನಿಯ 350ಕ್ಕೂ ಹೆಚ್ಚು ಸಿಬಂದಿಗಳಿಗೆ ಮೈಲ್ ಸಂದೇಶ ಹೋಗಿತ್ತು. ಅಲ್ಲದೆ, ಎಲ್ಲರಿಗೂ ತಮ್ಮ ವಾಟ್ಸಪ್ ನಂಬರ್ ಗಳನ್ನು ಕಳುಹಿಸುವಂತೆ ಸಂದೇಶದಲ್ಲಿ ಹೇಳಲಾಗಿತ್ತು.
ಆಡಳಿತ ನಿರ್ದೇಶಕರ ಮೈಲ್ ಎಂದು ನಂಬಿದ್ದ ಸಿಬಂದಿ ತಮ್ಮ ವಾಟ್ಸಪ್ ನಂಬರನ್ನು ಅವರಿಗೆ ಮೈಲ್ ಮಾಡಿದ್ದಾರೆ. ಇದೇ ವೇಳೆ, ಒಬ್ಬರು ಸಿಬಂದಿ ನೇರವಾಗಿ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಅವರಲ್ಲಿಯೇ ಈ ಬಗ್ಗೆ ಮಾಹಿತಿ ಕೇಳಿದ್ದಾರೆ. ಕೂಡಲೇ ವೆಂಕಟೇಶ್ ಪ್ರತಿಕ್ರಿಯಿಸಿದ್ದು, ತಾನೇನೂ ಆ ರೀತಿಯ ಮೆಸೇಜ್ ಕಳಿಸಿಲ್ಲ ಎಂದು ತಿಳಿಸಿದ್ದಾರೆ. ಅದರೊಂದಿಗೆ, ಮೈಲ್ ಐಡಿಯನ್ನು ಯಾರೋ ಹ್ಯಾಕ್ ಮಾಡಿರುವುದು ಮತ್ತು ನಕಲಿ ಐಡಿ ಸೃಷ್ಟಿಸಿ ಸಿಬಂದಿಯ ಐಡಿ ಜೊತೆ ವ್ಯವಹರಿಸಿರುವುದು ಗೊತ್ತಾಗಿದೆ. ಅಷ್ಟರಲ್ಲಿಯೇ 141 ಮಂದಿ ಮೈಲ್ ಐಡಿಗೆ ಪ್ರತಿಕ್ರಿಯಿಸಿ, ತಮ್ಮ ಮೊಬೈಲ್ ನಂಬರನ್ನು ಕಳಿಸಿಕೊಟ್ಟಿದ್ದರು.
ನಕಲಿ ಐಡಿಯನ್ನು ಕ್ರಿಯೇಟ್ ಮಾಡಿ, ಇಮೇಲ್ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ಎಂಆರ್ ಪಿಎಲ್ ಸಂಸ್ಥೆಯ ಅಷ್ಟೂ ಸಿಬಂದಿಗಳ ಮೈಲ್ ಐಡಿ ತಿಳಿಯಬೇಕಿದ್ದರೆ, ಅವರ ಐಡಿಯನ್ನೇ ಹ್ಯಾಕ್ ಮಾಡಿರುವ ಸಾಧ್ಯತೆಯಿದೆ. ಇದಲ್ಲದೆ, ವಾಟ್ಸಪ್ ನಂಬರಿನಲ್ಲಿಯೂ ವೆಂಕಟೇಶ್ ಅವರದ್ದೇ ಫೋಟೋವನ್ನು ಹಾಕ್ಕೊಂಡಿದ್ದು, ಅದರಲ್ಲಿ ಸಿಬಂದಿ ಜೊತೆ ವ್ಯವಹರಿಸಲು ಆರಂಭಿಸಿದ್ದ.
ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಂಆರ್ ಪಿಎಲ್ ಭದ್ರತಾ ವಿಭಾಗದ ಮ್ಯಾನೇಜರ್ ದೂರು ನೀಡಿದ್ದಾರೆ. ಕೆಲವು ಸಿಬಂದಿಗಳಿಗೆ 9600411596 ನಂಬರಿನಿಂದ ವಾಟ್ಸಪ್ ಸಂದೇಶಗಳು ಬಂದಿದ್ದವು. ವಾಟ್ಸಪ್ ಡಿಪಿಯಲ್ಲಿ ವೆಂಕಟೇಶ್ ಫೋಟೋ ಹಾಕಿದ್ದರಿಂದ ಸಿಬಂದಿ ಸಹಜವಾಗೇ ನಂಬಿದ್ದರು. ಯಾರೋ ಅಪರಿಚಿತ ವ್ಯಕ್ತಿಗಳು, ನಕಲಿ ಇಮೇಲ್ ಐಡಿ ರಚಿಸಿ, ವ್ಯವಸ್ಥಾಪಕ ನಿರ್ದೇಶಕರ ಹೆಸರಲ್ಲಿ ವಂಚನೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಂಗಳೂರು ಸೈಬರ್ ಕ್ರೈಮ್ ಪೊಲೀಸರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
Mangalore fraudsters create fake Email ID of MRPL Director, send mail to 361 employees asking phones number out of which 141 employees have shared their Whatsapp number. An FIR has been registered at the Cybercrime Police station in Mangalore.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm