ಬ್ರೇಕಿಂಗ್ ನ್ಯೂಸ್
18-11-21 05:15 pm Mangaluru correspondent ಕ್ರೈಂ
ಮಂಗಳೂರು, ನ.18: ನೀರಿನ ಮೀಟರ್ ರೀಡಿಂಗ್ ಮಾಡುವವರು ಎಂದು ಹೇಳಿ ಮನೆಗೆ ಬಂದಿದ್ದ ಇಬ್ಬರು ಮನೆಯಲ್ಲಿದ್ದ ವೃದ್ಧ ಮಹಿಳೆಯನ್ನು ಯಾಮಾರಿಸಿ, ಕಪಾಟಿನಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ಕದ್ದೊಯ್ದ ಘಟನೆ ಉರ್ವಾದಲ್ಲಿ ನಡೆದಿದೆ.
ಉರ್ವಾ ಸ್ಟೋರ್ ಬಳಿಯ ದಡ್ಡಲ್ ಕಾಡ್ ಎಂಬಲ್ಲಿ ಘಟನೆ ನಡೆದಿದೆ. ಮೀರಾ ಪೈ ಎಂಬವರ ಮನೆಗೆ ನ.16ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಇಬ್ಬರು ಬಂದಿದ್ದು ನಾವು ಮಹಾನಗರ ಪಾಲಿಕೆಯಿಂದ ಬಂದಿದ್ದಾಗಿ ಹೇಳಿದ್ದಾರೆ. ನಿಮ್ಮ ನೀರಿನ ಮೀಟರ್ ರೀಡಿಂಗ್ ಮಾಡಬೇಕು, ನೀರಿನ ಸಂಪ್ ಚೆಕ್ ಮಾಡಬೇಕೆಂದು ಹೇಳಿ ಅಧಿಕಾರಿಗಳ ಸೋಗಿನಲ್ಲಿ ಪರಿಶೀಲನೆ ಮಾಡಿದ್ದಾರೆ.
ಆನಂತರ, ಮಹಿಳೆಯ ಜೊತೆಗೆ ಮನೆಯ ಟೆರೇಸಿಗೆ ತೆರಳಿದ್ದ ಇಬ್ಬರು ಅಲ್ಲಿರುವ ನೀರಿನ ಟಾಂಕಿಯನ್ನು ಪರಿಶೀಲನೆ ನಡೆಸಿದ್ದು, ಮನೆ ಹಿಂಭಾಗದಲ್ಲಿ ಗಲೀಜು ಮಾಡದಂತೆ ಹೇಳಿದ್ದಾರೆ. ಈ ವೇಳೆ, ಪರಿಸರದ ನಿವಾಸಿಗಳು ಕೂಡ ಬಂದಿದ್ದು, ನೀವು ಮಹಾನಗರ ಪಾಲಿಕೆಯವರು ಅನ್ನುವುದಕ್ಕೆ ಯಾವ ದಾಖಲೆಯಿದೆ ಎಂದು ಹೇಳಿ ಕೇಳಿದ್ದಾರೆ. ಅದು ಬೈಕಿನಲ್ಲಿದೆ ಎಂದು ಕೊಡುತ್ತೇವೆಂದು ಹೇಳಿ, ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು.
ಸಂಜೆ ವೇಳೆಗೆ, ಮನೆಯ ಒಳಗಿನ ಕಪಾಟಿನಲ್ಲಿ ಚೆಕ್ ಮಾಡಿದಾಗ, 68 ಗ್ರಾಮ್ ಚಿನ್ನಾಭರಣ ಮತ್ತು 71 ಸಾವಿರ ರೂ. ನಗದು ಹಣ ಕಳವಾಗಿತ್ತು. ಇದರ ಬಗ್ಗೆ 70 ವರ್ಷದ ಮೀರಾ ಪೈ ಉರ್ವಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮೀಟರ್ ರೀಡಿಂಗ್ ಎಂದು ಹೇಳಿ ಇಬ್ಬರು ಅಜ್ಜಿಯ ಜೊತೆಗೆ ಮಾತನಾಡುತ್ತಿದ್ದರೆ, ಇನ್ನೊಬ್ಬ ವ್ಯಕ್ತಿ ಮನೆಯ ಒಳಗೆ ಹೋಗಿದ್ದ ಅನ್ನುವುದನ್ನು ಪತ್ತೆ ಮಾಡಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಅದರ ಆಧಾರದಲ್ಲಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
Mangalore Robbery in Urwa store, Burglars enter home loot cash and gold.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm