ಬ್ರೇಕಿಂಗ್ ನ್ಯೂಸ್
20-11-21 10:29 pm Mangaluru Correspondent ಕ್ರೈಂ
ಬಂಟ್ವಾಳ, ನ.20: ರಸ್ತೆಯ ವಿಚಾರದಲ್ಲಿ ಎರಡು ಮನೆಗಳ ಮಧ್ಯೆ ಜಾಗದ ತಕರಾರು ಇದ್ದರೂ, ಮಧ್ಯಪ್ರವೇಶ ಮಾಡಿದ ದಲಿತ ಸಂಘಟನೆಯ ನಾಯಕರು ಮೇಲ್ವರ್ಗದ ಪರವಾಗಿ ವಕಾಲತ್ತು ವಹಿಸಿದ್ದಲ್ಲದೆ ದಲಿತ ಮಹಿಳೆಯನ್ನೇ ಕತ್ತು ಹಿಡಿದು ತಳ್ಳಿ ಹಲ್ಲೆಗೈದ ಘಟನೆ ತಾಲೂಕಿನ ವಾಮದಪದವು ಬಳಿಯ ಬಸ್ತಿಕೋಡಿ ಎಂಬಲ್ಲಿ ನಡೆದಿದೆ.
ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಬಸ್ತಿಕೋಡಿ ಪಂಚಾಯತಿಗೆ ಒಳಪಟ್ಟ ಕೊಡಂಬೆಟ್ಟಿನ ಆಲೆಪ್ಪಾಡಿ ಎಂಬಲ್ಲಿ ಘಟನೆ ನಡೆದಿದೆ. ಹಲ್ಲೆಗೊಳಗಾದ ಶಾಂತ (55) ಎಂಬ ಮಹಿಳೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯ ಮನೆಯವರಿಗೂ, ನೆರೆಮನೆಯ ನವೀನ್ ಪೂಜಾರಿ ಎಂಬವರ ಮಧ್ಯೆ ಜಾಗದ ತಕರಾರು ಇತ್ತು. ಕಳೆದ ಕೆಲವು ವರ್ಷಗಳಿಂದ ನವೀನ್ ಪೂಜಾರಿ ಮನೆಯವರು ಮಹಿಳೆಯ ಮನೆಯವರಿಗೆ ಸೇರಿದ್ದ ಜಾಗದಲ್ಲಿ ಹೋಗಿ ಬರುತ್ತಿದ್ದರು. ಆದರೆ, ಇತ್ತೀಚೆಗೆ ಸದ್ರಿ ಜಾಗವನ್ನು ಪೋರ್ಜರಿ ದಾಖಲೆ ಸೃಷ್ಟಿಸಿ, ತಮ್ಮ ಹೆಸರಿಗೆ ಮಾಡಿಸಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಮಹಿಳೆಯ ಮನೆಯವರು ಆಕ್ಷೇಪ ತೆಗೆದಿದ್ದರು. ಅಲ್ಲದೆ, ಸ್ಥಳೀಯ ಪಂಚಾಯತ್ ಸೇರಿದಂತೆ ವಿವಿಧ ಕಡೆ ದೂರನ್ನೂ ನೀಡಿದ್ದರು. ಅಲ್ಲದೆ, ನವೀನ್ ಮನೆಯವರು ಹೋಗಿ ಬರುತ್ತಿದ್ದ ಜಾಗಕ್ಕೆ ಅಡ್ಡಲಾಗಿ ಬೇಲಿ ಹಾಕಿದ್ದರು.
ಇದರಿಂದ ಎರಡೂ ಮನೆಯವರಿಗೆ ಜಟಾಪಟಿ ನಡೆದಿತ್ತು. ನ.18ರಂದು ಮಧ್ಯಾಹ್ನ ನವೀನ್ ಮನೆಯವರು ಏಕಾಏಕಿ ಜೆಸಿಬಿ ತಂದು ಬೇಲಿಯನ್ನು ಕಿತ್ತೆಸೆದು ರಸ್ತೆ ಮಾಡಿದ್ದಾರೆ. ಈ ವೇಳೆ, ಜೆಸಿಬಿ ಕಾಮಗಾರಿ ತಡೆಯಲು ಹೋಗಿದ್ದ ಮಹಿಳೆಯ ಮೇಲೆ ದಲಿತ ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಜನಾರ್ದನ ಚೆಂಡ್ತಿಮಾರ್, ಚಂದ್ರಶೇಖರ ಕುಕ್ಕಿಮಾರ್, ಉಮೇಶ್ ಕುಮಾರ್ ಎಂಬವರ ನೇತೃತ್ವದಲ್ಲಿ ದೈಹಿಕ ಹಲ್ಲೆ ನಡೆಸಲಾಗಿದೆ.
ಐದಾರು ಮಂದಿ ಏಕಾಏಕಿ ದಾಳಿ ನಡೆಸಿದ್ದರಿಂದ ಆಘಾತಕ್ಕೆ ಒಳಗಾದ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಳಿಕ ವಾಮದಪದವು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದ್ದರಿಂದ ಆಕೆಯ ಮಕ್ಕಳು ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಹಲ್ಲೆ ಯತ್ನ ಕೇಸು ದಾಖಲಿಸಿ ಆರೋಪಿಗಳ ಪರ ನಿಂತಿದ್ದಾರೆಂದು ದೂರಲಾಗಿದೆ. ಜಾಗದಲ್ಲಿ ಬೆಳೆಸಿದ್ದ ಬಾಳೆ ಇನ್ನಿತರ ಕೃಷಿಯನ್ನು ಕಿತ್ತುಹಾಕಿ, ಅಲ್ಲಿ ರಸ್ತೆ ಮಾಡಲಾಗಿದೆ. ಅಲ್ಲದೆ, ದಲಿತ ಸಂಘಟನೆ ಎಂದು ಹೇಳಿಕೊಂಡು ತಿರುಗಾಡುವ ಮಂದಿಯೇ ಎದುರು ಮನೆಯ ನವೀನ್ ಪೂಜಾರಿ ಜೊತೆ ಸೇರಿಕೊಂಡು ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಮಹಿಳೆಯ ಪುತ್ರ ನವೀನ್ ಆರೋಪಿಸಿದ್ದಾರೆ.
Bantwa, Vamadapadavu Dalit Woman assaulted by Dalit community members and goons over a property dispute, woman hospitalised.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm