ಬ್ರೇಕಿಂಗ್ ನ್ಯೂಸ್
21-11-21 02:24 pm HK News Desk ಕ್ರೈಂ
ಮಂಡ್ಯ, ನ.21: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖಾಸಗಿ ರೈಸ್ ಮಿಲ್ಲಿಗೆ ತಂದು, ಅಲ್ಲಿ ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು ಮಾಡುತ್ತಿದ್ದ ಭಾರೀ ದೊಡ್ಡ ಜಾಲವನ್ನು ಮಂಡ್ಯ ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ.
ಮಂಡ್ಯ ನಗರದ ತಹಸೀಲ್ದಾರ್ ಚಂದ್ರಶೇಖರ್ ಖಚಿತ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ಪೊಲೀಸರೊಂದಿಗೆ ದಾಳಿ ನಡೆಸಿದ್ದು, ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪತ್ತೆ ಮಾಡಿದ್ದಾರೆ. ಮಂಡ್ಯ ಪೇಟೆಯ ಬಾಲಾಜಿ ರೈಸ್ ಮಿಲ್ ನಲ್ಲಿ ಈ ರೀತಿಯ ಭಾರೀ ಅಕ್ರಮ ಬೆಳಕಿಗೆ ಬಂದಿದ್ದು ಬಡವರಿಗೆ ಪಡಿತರ ಅಂಗಡಿಯಲ್ಲಿ ಪೂರೈಸಲಾಗುವ ಅಕ್ಕಿಯನ್ನು ನೇರವಾಗಿ ರೈಸ್ ಮಿಲ್ಲಿಗೆ ತರುತ್ತಿರುವುದು ಕಂಡುಬಂದಿದೆ.
ಮೂರು ಕಂಟೈನರ್ ಲಾರಿಗಳಲ್ಲಿ ಕೇಂದ್ರ ಸರಕಾರದ ಸೀಲ್ ಹಾಕಿರುವ ಗೋಣಿಗಳಲ್ಲಿ ಅಕ್ಕಿ ಮೂಟೆ ಕಂಡುಬಂದಿದ್ದು, ಆಂಧ್ರಪ್ರದೇಶದ ಲಾರಿಗಳಲ್ಲಿ ಅಕ್ಕಿಯನ್ನು ತರಲಾಗಿತ್ತು. ರಾತ್ರೋರಾತ್ರಿ ಅಧಿಕಾರಿಗಳು ಪೊಲೀಸರ ಜೊತೆಗೆ ದಾಳಿ ನಡೆಸುತ್ತಿದ್ದಂತೆ, ಅಲ್ಲಿದ್ದ ಸಿಬಂದಿ, ರೈಸ್ ಮಿಲ್ ಮ್ಯಾನೇಜರ್ ಓಡಿ ತಪ್ಪಿಸಿಕೊಂಡಿದ್ದಾರೆ. ಅಕ್ಕಿ ಮೂಟೆಗಳ ಸಹಿತ ಲಾರಿಗಳನ್ನು ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ. ಅಲ್ಲದೆ, ರೈಸ್ ಮಿಲ್ಲನ್ನು ಪೂರ್ತಿಯಾಗಿ ಸೀಜ್ ಮಾಡಿದ್ದಾರೆ. ಆಂಧ್ರದಿಂದ ತರಲಾಗಿದ್ದ ಅಕ್ಕಿ ಗೋಣಿಯಲ್ಲಿ AP STATE CIVIL SUPPLIES CO. Ltd. Vijayawada, Sponsored By Govt of India ಎಂದು ಬರೆಯಲಾಗಿತ್ತು.
ಅಲ್ಲದೆ, ರೈಸ್ ಮಿಲ್ ಒಳಗೆ ವಿವಿಧ ಮಾದರಿಯ 12ಕ್ಕೂ ಹೆಚ್ಚು ಬ್ರಾಂಡಿನ ಚೀಲಗಳು ಪತ್ತೆಯಾಗಿವೆ. ಉತ್ತರ ಭಾರತ ಸೇರಿದಂತೆ ಹೊರ ದೇಶಕ್ಕೂ ಇಲ್ಲಿಂದ ಅಕ್ಕಿಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಅಕ್ಕಿಯನ್ನು ಪಾಲಿಶ್ ಮಾಡಿ, ಮತ್ತಷ್ಟು ಬಿಳಿಯಾಗಿಸಿ ಯಾವುದೇ ಪರವಾನಗಿ ಭಾರತದ ಅಕ್ಕಿ ಎಂದು ವಿದೇಶಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಆಫ್ರಿಕಾ, ಮಲೇಶ್ಯಾ, ಅರಬ್ ರಾಷ್ಟ್ರಗಳಿಗೆ ಇಲ್ಲಿಂದ ಅಕ್ಕಿಯನ್ನು ಪೂರೈಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
AFRI KING ಬ್ರಾಂಡಿನಲ್ಲಿ ಇಂಡಿಯನ್ ವೈಟ್ ರೈಸ್ ಹೆಸರಿನ ಚೀಲದಲ್ಲಿ ಟನ್ ಗಟ್ಟಲೆ ಅಕ್ಕಿಯನ್ನು ಮೂಟೆ ಮಾಡಲಾಗಿತ್ತು. ಅದನ್ನು ಲಾರಿಯಲ್ಲಿ ಬೇರೆಡೆಗೆ ಸಾಗಿಸಲು ಯೋಜನೆ ಹಾಕಲಾಗಿತ್ತು. Thaj Mahal ಬ್ರಾಂಡಿನಲ್ಲಿ PJS Gold ಎಂದು ಬರೆದಿರುವ 25 ಕೇಜಿ, 50 ಕೇಜಿಯ ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿವೆ. ಕೆಲವು ಗೋಣಿಗಳಲ್ಲಿ ಆಫ್ರಿಕಾ, ಅರಬ್ ರಾಷ್ಟ್ರಗಳು, ಮಲೇಶ್ಯಾ ಎಂದು ಬರೆದಿದ್ದು, ಅಲ್ಲಿನ ರಾಷ್ಟ್ರಗಳಲ್ಲಿ ಭಾರತದ ಅಕ್ಕಿಯೆಂದು ಮಾರಾಟ ಮಾಡುತ್ತಿರುವ ಅಂಶ ಬಯಲಾಗಿದೆ. ಕೆಲವು ಗೋಣಿ ಚೀಲಗಳಲ್ಲಿ ಅರೇಬಿಕ್ ಭಾಷೆಯಲ್ಲಿ ಅಸಫಾ ಬರೆದಿದ್ದು, ಇಂಗ್ಲಿಷ್ ನಲ್ಲಿ ತಾಜ್, ಇಂಡಿಯನ್, ಪಾವನಿ ಇತ್ಯಾದಿ ಹೆಸರುಗಳನ್ನು ಕೊಟ್ಟು ಹೊಸ ಹೊಸ ಬ್ರಾಂಡ್ ಮಾಡಿದ್ದು ಕಂಡುಬಂದಿದೆ.
ಪಡಿತರ ಅಕ್ಕಿಯನ್ನು ನೇರವಾಗಿ ಇಲ್ಲಿಗೆ ತಂದು, ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡುವ ಉದ್ದೇಶದಿಂದ ಅಕ್ಕಿಯನ್ನು ಮಾರ್ಪಾಡು ಮಾಡಲಾಗುತ್ತಿದೆ ಅನ್ನುವ ಅಂಶ ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದ್ದು, ಆಹಾರ ಇಲಾಖೆಯ ಆಯುಕ್ತರು ಬಂದು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಹಸೀಲ್ದಾರ್ ಚಂದ್ರಶೇಖರ್ ತಿಳಿಸಿದ್ದಾರೆ.
Polished rice exported to Abroad illegally racket busted by Mandya Tahsildar thousand quintal rice seized
02-01-25 07:42 pm
HK News Desk
ನ್ಯೂ ಇಯರ್ ದಿನವೇ ಬೆಂಗಳೂರಿನ ಯಮಹಾ ಬೈಕ್ ಶೋರೂಂನಲ್ಲ...
02-01-25 02:44 pm
ಹಾಸನ ; ಕೆರೆ ಬಳಿ ನ್ಯೂ ಇಯರ್ ಪಾರ್ಟಿ, ಮುಳುಗಿ ಇಬ್ಬ...
01-01-25 11:03 pm
Hassan Drunkards Office: ನಿತ್ಯ ದುಡಿ.. ಸತ್ಯ ನು...
31-12-24 10:06 pm
Honnavara Accident, Mangalore: ಹೊಸ ವರ್ಷಾಚರಣೆಯ...
31-12-24 05:47 pm
02-01-25 06:20 pm
HK News Desk
ಅಮೆರಿಕದಲ್ಲಿ ಭೀಕರ ಅಪಘಾತ ; ನ್ಯೂ ಇಯರ್ ಸಂಭ್ರಮದಲ್...
02-01-25 12:02 pm
ಯೆಮನ್ ದೇಶದಲ್ಲಿ ಕೇರಳ ಮೂಲದ ನರ್ಸ್ ಗೆ ಮರಣದಂಡನೆ ;...
01-01-25 08:21 pm
ಕೊರಿಯಾ ಬಳಿಕ ಮತ್ತೊಂದು ಭೀಕರ ದುರಂತ ; ಆಫ್ರಿಕಾದಲ್ಲ...
31-12-24 11:57 am
ಬಿಹಾರದಲ್ಲಿ ಸಿಎಂ ನಿತೀಶ್ ವಿರುದ್ಧ ಬೀದಿಗಿಳಿದ ವಿದ್...
30-12-24 11:14 pm
02-01-25 09:26 pm
Mangalore Correspondent
Anil Lobo, MCC Bank, Robert Rosario, Mangalor...
02-01-25 03:16 pm
ರಾಜ್ಯದಲ್ಲಿ ತೆಂಗಿನಕಾಯಿ ಇಳುವರಿ ಕುಸಿತ ; ದರ ವಿಪರೀ...
02-01-25 02:09 pm
Veddavyas Kamath, Mangalore: ಡೆತ್ ನೋಟ್ ಬರೆದಿಟ...
01-01-25 10:16 pm
MP Brijesh Chowta, ESI Hospital in Mangalore:...
01-01-25 09:55 pm
31-12-24 11:32 am
Bangalore Correspondent
Online Fraud, Stock Market, Mangalore: ಯೂಟ್ಯೂ...
29-12-24 10:50 pm
Mangalore online game suicide: ಜಾಬ್ ಆಫರ್ ಲಿಂಕ...
28-12-24 04:26 pm
Bangalore Digital Arrest, Japanese, Crime: ಬೆ...
26-12-24 07:41 pm
Fake Gold Loan, Mangalore Samaja seva sahakar...
25-12-24 02:41 pm