ಬ್ರೇಕಿಂಗ್ ನ್ಯೂಸ್
21-11-21 04:02 pm HK News Desk ಕ್ರೈಂ
ಯಾದಗಿರಿ, ನ.21: ದೇವರ ಪ್ರಸಾದ ಎಂದು ಹೇಳಿ ಪತಿಗೆ ನೀರಿನಲ್ಲಿ ನಿದ್ದೆ ಮಾತ್ರೆ ಕೊಟ್ಟು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಕೊಲ್ಲಲು ಯತ್ನಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಪತಿ ನಿದ್ದೆಗೆ ಜಾರಿದಾಗ, ಕೂಡಲೇ ಪ್ರಿಯತಮನನ್ನು ಮನೆಗೆ ಕರೆಸಿಕೊಂಡು ಇಬ್ಬರೂ ಸೇರಿ ಪತಿರಾಯನ ಮುಖಕ್ಕೆ ತಲೆದಿಂಬು ಇಟ್ಟು ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಆದರೆ, ಮುಖಕ್ಕೆ ಬಟ್ಟೆ ಮುತ್ತಿಕೊಳ್ಳುತ್ತಲೇ ಎಚ್ಚೆತ್ತ ಪತಿರಾಯ, ಪತ್ನಿಯ ಸಂಚನ್ನು ವಿಫಲಗೊಳಿಸಿದ್ದಾನೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪತಿ ವಿಶ್ವನಾಥ ರೆಡ್ಡಿ ಪತ್ನಿಯ ಕೊಲೆ ಸಂಚಿನಿಂದ ಪಾರಾಗಿದ್ದಾನೆ.
ಪತ್ನಿ ಚಂದ್ರಕಲಾಗೆ ತನ್ನ ತಂಗಿಯ ಗಂಡ ಬಸನಗೌಡನ ಜೊತೆ ಅಕ್ರಮ ಸಂಬಂಧ ಇತ್ತು. ಈ ಬಗ್ಗೆ ಪತಿಗೆ ತಿಳಿಯದಂತೆ ನೋಡಿಕೊಂಡಿದ್ದ ಚಂದ್ರಕಲಾ, ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಮುಗಿಸಲು ಸಂಚು ಹೂಡಿದ್ದಾಳೆ. ಇತ್ತೀಚೆಗೆ ವಿಶ್ವನಾಥ ರೆಡ್ಡಿ ಉಕ್ಕಿನಾಳ ಗ್ರಾಮದ ಬಸವೇಶ್ವರ ಜಾತ್ರೆಗೆ ತೆರಳಿದ್ದ ವೇಳೆ ಭೇಟಿಯಾಗಿದ್ದ ಬಸನಗೌಡ, ನಿಮ್ಮ ಪುತ್ರನಿಗೆ ಆರಾಮ ಇಲ್ಲ ಎಂದು ತಿಳಿದೆ. ಇದರಲ್ಲಿ ಔಷಧಿ ಇದೆಯೆಂದು ಹೇಳಿ ಒಂದು ಕಟ್ಟನ್ನು ಕೊಟ್ಟಿದ್ದ. ಆದರೆ, ಅದರಲ್ಲಿ ನಿದ್ದೆ ಮಾತ್ರೆಯನ್ನು ಕೊಟ್ಟು ಕಳುಹಿಸಿದ್ದ ಬಸನಗೌಡ, ವಿಶ್ವನಾಥ ರೆಡ್ಡಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ.
ಪತ್ನಿ ಚಂದ್ರಕಲಾ ನೀರಿನಲ್ಲಿ ನಿದ್ದೆ ಮಾತ್ರೆ ಬೆರಸಿ, ದೇವರ ಪ್ರಸಾದವೆಂದು ಹೇಳಿ ಪತಿಗೆ ಕುಡಿಸಿದ್ದಳು. ಮೊದಲೇ ಸ್ಕೆಚ್ ಹಾಕಿದಂತೆ, ಬಸನಗೌಡನ ಜೊತೆ ಸೇರಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಆದರೆ ನಡುವೆ ಎಚ್ಚೆತ್ತ ಪತಿ ವಿಶ್ವನಾಥ ರೆಡ್ಡಿ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ಪತ್ನಿಯ ಕಿರಾತಕ ಬುದ್ಧಿಯನ್ನು ಬಯಲು ಮಾಡಿದ್ದಾನೆ. ಆನಂತರ, ವಿಶ್ವನಾಥ ರೆಡ್ಡಿಯ ಕುಟುಂಬಸ್ಥರು ಸೇರಿ ಬಸನಗೌಡನಿಗೆ ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೆ, ಪೊಲೀಸರಿಗೆ ಹೇಳಿ ಇಬ್ಬರನ್ನೂ ಅವರ ವಶಕ್ಕೆ ಒಪ್ಪಿಸಿದ್ದಾರೆ. ಇಬ್ಬರ ಮೊಬೈಲ್ ಚೆಕ್ ಮಾಡಿದಾಗ, ಬಸನಗೌಡ ಮಾತನಾಡಿದ್ದ ಆಡಿಯೋ ಲಭ್ಯವಾಗಿದ್ದು, ಕೊಲೆಗೆ ಸ್ಕೆಚ್ ಹಾಕಿದ್ದು ಬಯಲಾಗಿದೆ. ಕೆಂಭಾವಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.
Yadagiri Wife tries to kill Husband by poisoning him to hide the illicit affair.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
11-01-26 12:56 pm
Mangaluru Staffer
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm