ಬ್ರೇಕಿಂಗ್ ನ್ಯೂಸ್
21-11-21 09:54 pm HK News Desk ಕ್ರೈಂ
ತಿರುಚ್ಚಿ, ನ.21: ಆಡು ಕಳ್ಳರನ್ನು ಬೆನ್ನಟ್ಟಿ ಹೋಗಿದ್ದ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಕಳ್ಳರು ಮಚ್ಚಿನಲ್ಲಿ ಕಡಿದು ಕೊಲೆಗೈದ ಘಟನೆ ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಕಿರಾನೂರು ಎಂಬಲ್ಲಿ ನಡೆದಿದೆ.
ನವಲಪಟ್ಟು ಠಾಣೆಯ ಎಸ್ಐ ಭೂಮಿನಾಥನ್ (55) ಕೊಲೆಯಾದವರು. ಭೂಮಿನಾಥನ್ ಶನಿವಾರ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಭಾನುವಾರ ನಸುಕಿನ ವೇಳೆ ಗಸ್ತಿನಲ್ಲಿದ್ದಾಗ, ಬೈಕಿನಲ್ಲಿ ಸರದಿಯಂತೆ ಯುವಕರು ಆಡುಗಳನ್ನು ಹಿಡಿದು ಒಯ್ಯುತ್ತಿದ್ದುದು ಕಂಡುಬಂದಿದೆ. ಕೂಡಲೇ ಅವರನ್ನು ನಿಲ್ಲಿಸಲು ಸೂಚಿಸಿದ್ದು, ಕಳ್ಳರು ನಿಲ್ಲಿಸದೆ ಪರಾರಿಯಾಗಿದ್ದಾರೆ.
ಕರ್ತವ್ಯದಲ್ಲಿದ್ದ ಎಸ್ಐ ಭೂಮಿನಾಥನ್ ತನ್ನ ಬೈಕಿನಲ್ಲಿ ಅವರನ್ನು ಹಿಂಬಾಲಿಸಿದ್ದು, ಕಳ್ಳರು ಕಿರಾನೂರಿನ ಕಳಮಾವೂರು ಗ್ರಾಮದತ್ತ ನುಗ್ಗಿದ್ದಾರೆ. ಅಲ್ಲಿವರೆಗೂ ಹಿಂಬಾಲಿಸಿ ಹೋಗಿದ್ದ ಎಸ್ಐ, ಇಬ್ಬರನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ಆದರೆ, ಅವರು ತಮ್ಮ ಕೈಯಲ್ಲಿದ್ದ ಮಚ್ಚಿನಲ್ಲಿ ಎಸ್ಐ ತಲೆಗೆ ಕಡಿದಿದ್ದು, ಎಸ್ಐ ಭೂಮಿನಾಥನ್ ಸ್ಥಳದಲ್ಲೇ ನೆಲಕ್ಕುರುಳಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂತರ ವಿಷಯ ತಿಳಿದು ಕಿರಾನೂರು ಪೊಲೀಸರು ಸ್ಥಳಕ್ಕೆ ಬಂದಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಭೂಮಿನಾಥನ್ ತಿರುಚ್ಚಿ ಜಿಲ್ಲೆಯ ನವಲಪಟ್ಟು ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿದ್ದರು. ಆದರೆ, ಕೊಲೆ ಘಟನೆ ನಡೆದಿರುವುದು ಪಕ್ಕದ ಪುದುಕೋಟೈ ಜಿಲ್ಲೆಯ ಕಿರಾನೂರು ಠಾಣೆ ವ್ಯಾಪ್ತಿಯಲ್ಲಿ. ನವಲಪಟ್ಟು ಠಾಣೆಯ ವ್ಯಾಪ್ತಿಯಿಂದ ಕಳ್ಳರು ಅತ್ತ ಕಡೆಗೆ ಪರಾರಿಯಾಗಿದ್ದು, ಎಸ್ಐ ಒಬ್ಬಂಟಿಯಾಗೇ ಕಳ್ಳರನ್ನು ಹಿಂಬಾಲಿಸಿ ಹೋಗಿದ್ದು ದುರಂತಕ್ಕೆ ಕಾರಣವಾಗಿತ್ತು. ಸ್ಥಳೀಯವಾಗಿ ಆಡು ಕಳ್ಳತನ ಹೆಚ್ಚಿದ್ದರಿಂದ ಪೊಲೀಸರು ನಿಗಾ ವಹಿಸಿದ್ದರು.
A 55-year-old sub-inspector from Navalpattu in Tiruchy district was found brutally murdered near Kalamavur village near Keeranur in Pudukottai district in the wee hours of Sunday. Police sources said that during night patrol he went chasing a goat thief gang who have reportedly killed the cop.
26-05-26 11:03 pm
HK News Desk
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
ಬರೆದಿಟ್ಕೊಳ್ಳಿ , ಮುಂದೇನೂ ನಮ್ದೇ ಸರ್ಕಾರ ಇರ್ತದೆ ;...
25-05-26 09:38 pm
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
26-05-26 09:02 pm
HK News Staffer
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
26-05-26 02:43 pm
HK News Staffer
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm