ಬ್ರೇಕಿಂಗ್ ನ್ಯೂಸ್
22-11-21 01:49 pm Headline Karnataka News Network ಕ್ರೈಂ
ವಾಷಿಂಗ್ಟನ್, ನ.22: ಮಕ್ಕಳು, ಮಹಿಳೆಯರು ಕ್ರಿಸ್ಮಸ್ ಸಂಭ್ರಮದಲ್ಲಿ ಪೆರೇಡ್ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಅತಿ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದು ಅವರ ಮೇಲಿಂದಲೇ ಕಾರು ಹರಿಸಿದ ಆಘಾತಕಾರಿ ಘಟನೆ ನಡೆದಿದ್ದು, 5 ಮಂದಿ ಸಾವಿಗೀಡಾಗಿದ್ದು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಮೆರಿಕದ ವಿಸ್ಕನ್ಸಿನ್ ನಗರದ ವೊಕೇಶಾ ಎಂಬಲ್ಲಿ ಭಾನುವಾರ ಸಂಜೆ ಘಟನೆ ನಡೆದಿದ್ದು, ನೂರಾರು ಮಂದಿ ಮಹಿಳೆಯರು, ಮಕ್ಕಳು ಬ್ಯಾಂಡ್, ವಾದ್ಯಗಳ ಸಹಿತ ಪೆರೇಡ್ ನಡೆಸುತ್ತಿದ್ದಾಗ ಕೆಂಪು ಬಣ್ಣದ ಎಸ್ ಯುವಿ ಸ್ಪೋರ್ಟ್ ಕಾರು ನುಗ್ಗಿ ಬಂದಿದೆ. ಹಲವಾರು ಮಂದಿ ಗಾಯಗೊಂಡಿದ್ದು, ಸ್ವಯಂ ಆಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಎಷ್ಟು ಮಂದಿ ಗಾಯಗೊಂಡಿದ್ದಾರೆ ಎನ್ನುವ ಖಚಿತ ಮಾಹಿತಿಗಳು ಇಲ್ಲ.
ಕಾರ್ಯಕ್ರಮ ಫೇಸ್ಬುಕ್ ನಲ್ಲಿ ಲೈವ್ ಆಗುತ್ತಿದ್ದು, ಕಾರು ನುಗ್ಗಿ ಬರುತ್ತಿರುವ ಚಿತ್ರಣದ ದೃಶ್ಯಗಳು ಟ್ವಿಟರ್ ನಲ್ಲಿ ವೈರಲ್ ಆಗಿವೆ. ಘಟನೆಯಲ್ಲಿ ಐವರು ಸಾವು ಕಂಡಿದ್ದನ್ನು ಪೊಲೀಸರು ದೃಢಪಡಿಸಿದ್ದಾರೆ. 12 ಮಕ್ಕಳು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆಗಂತುಕ ಯಾಕಾಗಿ ಈ ಕೃತ್ಯ ಎಸಗಿದ್ದಾನೆ, ಉದ್ದೇಶಪೂರ್ವಕ ಆಗಿದೆಯೋ, ಇದರ ಹಿಂದೆ ಭಯೋತ್ಪಾದಕ ಕೃತ್ಯದ ಉದ್ದೇಶ ಇತ್ತೇ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಮತ್ತು ಆತನ ವಾಹನವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ಬ್ಯಾರಿಕೇಡ್ ಲೆಕ್ಕಿಸದೆ ಆಗಂತುಕ ಕಾರನ್ನು ನುಗ್ಗಿಸಿದ್ದಾನೆ. ಆತನನ್ನು ತಡೆಯಲು ಪೊಲೀಸರು ಗುಂಡು ಹಾರಿಸಿದ್ದಾರೆ. ಹಲವು ಶಾಲೆಗಳ ಮಕ್ಕಳು ಸಮಾರಂಭದಲ್ಲಿ ಸ್ಕೂಲ್ ಯುನಿಫಾರ್ಮ್ ನಲ್ಲಿ ಭಾಗವಹಿಸಿದ್ದರು. ಹೀಗಾಗಿ ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಆಗಂತುಕ ದಾಳಿ ನಡೆಸಿದ್ದಾನೆಯೇ ಎನ್ನುವ ಶಂಕೆ ಪೊಲೀಸರದ್ದಿದೆ.
Five people were killed and 40 others wounded after a vehicle plowed into a Christmas parade in the US state of Wisconsin on Sunday, police said. Officials said a red SUV broke through barricades at the Christmas parade in Waukesha, a suburb of Milwaukee just after 4:30 pm (2230 GMT), as spectators watched the annual tradition.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm