ಟೈಲ್ಸ್ ಫ್ಯಾಕ್ಟರಿಯಲ್ಲಿ ಕಿರಾತಕ ಕೃತ್ಯ ; ಬಾಲಕಿಯನ್ನು ಹುರಿದು ಮುಕ್ಕಿದ್ದ ನಾಲ್ವರು ಕಾಮುಕರ ಬಂಧನ, ಸ್ನೇಹಿತರ ಘಾತುಕ ಕೃತ್ಯಕ್ಕೆ ಪ್ರಾಣಬಿಟ್ಟಿದ್ದ ಎಳೆಜೀವ !

24-11-21 02:07 pm       HK news Desk   ಕ್ರೈಂ

ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯಲ್ಲಿ ಎಂಟು ವರ್ಷದ ಹೆಣ್ಮಗಳ ಮೇಲೆ ಪೈಶಾಚಿಕ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರಗೈದು ಕತ್ತು ಹಿಸುಕಿ ಕೊಲೆಗೈದಿರುವ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳೂರು, ನ.24: ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯಲ್ಲಿ ಎಂಟು ವರ್ಷದ ಹೆಣ್ಮಗಳ ಮೇಲೆ ಪೈಶಾಚಿಕ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರಗೈದು ಕತ್ತು ಹಿಸುಕಿ ಕೊಲೆಗೈದಿರುವ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಒಂದನೇ ಆರೋಪಿ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜಯ್ ಬನ್ ಅಲಿಯಾಸ್ ಜಯ್ ಸಿಂಗ್(21), 2ನೇ ಆರೋಪಿ ಅದೇ ಜಿಲ್ಲೆಯ ಮುಕೇಶ್ ಸಿಂಗ್(20), ಮೂರನೇ ಆರೋಪಿ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ ಮನೀಶ್ ತಿರ್ಕಿ(20) ಮತ್ತು ನಾಲ್ಕನೇ ಆರೋಪಿ ಮಧ್ಯಪ್ರದೇಶ ರಾಜ್ಯದ ಪನ್ನಾ ಜಿಲ್ಲೆಯ ಮುನೀಮ್ ಸಿಂಗ್(20) ಬಂಧಿತರು. ಮೂರು ಮಂದಿ ಟೈಲ್ಸ್ ಫ್ಯಾಕ್ಟರಿಯ ಕಾರ್ಮಿಕರಾಗಿದ್ದು, ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದ.

ಜಯ್ ಸಿಂಗ್ ಮತ್ತು ಮನೀಶ್ ತಿರ್ಕಿ ಈ ಹಿಂದೆಯೂ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಕಿರುಕುಳ ನೀಡುತ್ತಿದ್ದರು. ಭಾನುವಾರದ ದಿನ ಫ್ಯಾಕ್ಟರಿಯಲ್ಲಿ ಹೆಚ್ಚು ಮಂದಿ ಇರದಿರುವುದರಿಂದ ತಮ್ಮ ಕೊಠಡಿಗೆ ಬಾಲಕಿಯನ್ನು ಚಾಕಲೇಟ್ ನೀಡುವ ಆಮಿಷವೊಡ್ಡಿ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದರು. ಕೃತ್ಯ ನಡೆದ ಮುನ್ನಾ ದಿನ ಶನಿವಾರ ನಾಲ್ವರು ಕೂಡ ತಮ್ಮ ಕೊಠಡಿಯಲ್ಲಿ ಮದ್ಯಪಾನ ಮಾಡಿದ್ದು, ಬಾಲಕಿಯ ಬಗ್ಗೆ ಮಾತನಾಡಿಕೊಂಡಿದ್ದರು. ಪುತ್ತೂರಿನಿಂದ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಬಂದಿದ್ದ ಮುನೀಮ್ ಸಿಂಗ್, ಅವಕಾಶ ಸಿಕ್ಕರೆ ತನಗೂ ಒಂದು ಚಾನ್ಸ್ ಕೊಡಿ ಎಂದು ಹೇಳಿದ್ದ. ಅದಕ್ಕಾಗಿ ಭಾನುವಾರ ಬರುವಂತೆ ಹೇಳಿ, ಮೊದಲೇ ಬಾಲಕಿಯ ಅತ್ಯಾಚಾರಕ್ಕೆ ಪ್ಲಾನ್ ಮಾಡಿದ್ದರು.

ಜಾರ್ಖಂಡ್ ಮೂಲದ ದಂಪತಿ ಎರಡು ವರ್ಷಗಳಿಂದ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ನಾಲ್ಕು ಮಕ್ಕಳಿದ್ದು ಆಸುಪಾಸಿನಲ್ಲಿ ಆಟವಾಡುತ್ತಿದ್ದರು. ಎಂಟು ವರ್ಷದ ಹಿರಿಯ ಪುತ್ರಿಯೇ ಕೊಲೆಯಾದವಳು. ಭಾನುವಾರ ಮಧ್ಯಾಹ್ನ 12 ಗಂಟೆಗೆ ಊಟ ಮಾಡಿ, ನಾಲ್ವರು ಕೂಡ ಆಟಕ್ಕೆ ತೆರಳಿದ್ದರು. ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದರಿಂದ ಟೈಲ್ಸ್ ಫ್ಯಾಕ್ಟರಿಯ ಸಂದು ಗೊಂದಿನಲ್ಲಿ ಅಡಗಿಕೊಂಡು ಆಡಲು ತೆರಳುತ್ತಿದ್ದರು. ಇಂಥ ಸಂದರ್ಭದಲ್ಲಿ ಬಾಲಕಿಯನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಜಯ್ ಸಿಂಗ್ ಮತ್ತು ಮನೀಶ್ ತಿರ್ಕಿ ಹಿಂದಿನ ರೀತಿಯಲ್ಲೇ ಪ್ಲಾನ್ ಮಾಡಿದ್ದು, ಭಾನುವಾರ ಮಧ್ಯಾಹ್ನ ಆಟವಾಡುತ್ತಿದ್ದ ಬಾಲಕಿಯನ್ನು ಹಿಡಿದು ಬಾಯಿಗೆ ಕೈಯಿಂದ ಮುಚ್ಚಿ ತಮ್ಮ ಕೊಠಡಿಗೆ ಹೊತ್ತೊಯ್ದಿದ್ದರು. ಆನಂತರ, ಒಬ್ಬರ ನಂತರ ಇನ್ನೊಬ್ಬನಂತೆ ಬಾಲಕಿಯನ್ನು ಬಲವಂತದಿಂದ ಕೂಡಿ ಹಾಕಿ, ಅತ್ಯಾಚಾರ ನಡೆಸಿದ್ದಾರೆ.

ಬಾಲಕಿ ನೋವಿನಿಂದ ಕಿರುಚಾಡಿದ್ದು ಪಕ್ಕದ ಮನೆಯವರಿಗೆ ತಿಳಿಯಬಾರದೆಂದು ಕೈಯಿಂದ ಒತ್ತಿ ಹಿಡಿದಿದ್ದಾರೆ. ಕೈಯಿಂದ ಹೊಡೆದು ಹಲ್ಲೆಯನ್ನೂ ನಡೆಸಿದ್ದು, ಈ ವೇಳೆ ಮೂವರು ಕಾಮತೀಟೆ ತೀರಿಸಿಕೊಂಡ ನಂತರ ಒಂದನೇ ಆರೋಪಿ ಜಯ್ ಸಿಂಗ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಾಲ್ಕನೇ ಆರೋಪಿ ಈ ವೇಳೆ ಹೊರಗಿನಿಂದ ಯಾರಾದರೂ ಬರುತ್ತಾರೆಯೇ ಎಂದು ನೋಡಲು ಕಾವಲು ನಿಂತಿದ್ದ. ಹೀಗಾಗಿ ಆತ ಕೃತ್ಯ ಎಸಗಿಲ್ಲ ಎನ್ನುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ವಿಷಯ ಯಾರಿಗೂ ತಿಳಿಯದು ಮತ್ತು ಈ ಜಾಗದಲ್ಲಿ ಸಿಸಿಟಿವಿ ಇಲ್ಲದಿರುವುದನ್ನು ಖಚಿತಪಡಿಸಿ ಬಾಲಕಿಯನ್ನು ಟೈಲ್ಸ್ ಫ್ಯಾಕ್ಟರಿಯ ಒಳಗಿನಿಂದ ಹೊರಗೆ ಹರಿಯುವ ನೀರಿನ ಚರಂಡಿಯಲ್ಲಿ ಬಿಸಾಕಿದ್ದಾರೆ. ಎರಡು ಅಡಿ ಆಳದಲ್ಲಿ ಬಿದ್ದಿದ್ದ ಬಾಲಕಿಯ ಶವ ಯಾರಿಗೂ ಕಾಣುತ್ತಿರಲಿಲ್ಲ ಎಂದು ಸುಮ್ಮನಿದ್ದರು.  

ಮೂರು ಗಂಟೆ ವೇಳೆಗೆ, ಬಾಲಕಿ ಕಾಣದೇ ಇರುವುದನ್ನು ಕಂಡು ಹೆತ್ತವರು ಹುಡುಕಾಟ ನಡೆಸಿದ್ದಾರೆ. ಇತರ ಕಾರ್ಮಿಕರು ಕೂಡ ಹುಡುಕಾಡಿದ್ದು, ಅಲ್ಲಿದ್ದ ಇಬ್ಬರು ಆರೋಪಿಗಳು ಹುಡುಕಾಟದ ನಾಟಕ ಮಾಡಿದ್ದಾರೆ. ಇಬ್ಬರು ತಮ್ಮಷ್ಟಕ್ಕೇ ಇದ್ದರೆ, ಪುತ್ತೂರಿನಿಂದ ಬಂದಿದ್ದ ಮುನೀಮ್ ಸಿಂಗ್ ಇನ್ನೊಬ್ಬ ಸ್ನೇಹಿತನ ಜೊತೆ ಹೊರಗೆ ತೆರಳಿದ್ದರು. ಆರು ಗಂಟೆ ಸುಮಾರಿಗೆ ಶವ ಪತ್ತೆಯಾಗಿದ್ದು, ಬಳಿಕ ಪೊಲೀಸರು ಬಂದು ತನಿಖೆ ಆರಂಭಿಸಿದ್ದಾರೆ.

ಟೈಲ್ಸ್ ಫ್ಯಾಕ್ಟರಿಯಲ್ಲಿ ಒಟ್ಟು 30 ಜನ ಕೆಲಸ ಮಾಡುತ್ತಿದ್ದು, 9 ಮಂದಿ ಸ್ಥಳೀಯರಾಗಿದ್ದು, 21 ಮಂದಿ ಉತ್ತರ ಭಾರತೀಯರು. ಅದರಲ್ಲಿ ಇಬ್ಬರು ಹೆಂಗಸರಿದ್ದು 19 ಮಂದಿ ಗಂಡಸರೇ ಆಗಿದ್ದರು. ಪೊಲೀಸರು ಆವತ್ತೇ 15ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದು, ರಾತ್ರಿಯಿಡೀ ಬೆಂಡೆತ್ತಿದ್ದಾರೆ. ಆದರೂ, ಯಾರು ಕೂಡ ಬಾಯಿ ಬಿಟ್ಟಿರಲಿಲ್ಲ. ಮರುದಿನ ಬೆಳಗ್ಗೆ ಬೆಂಡ್ ತೆಗೆಯಲು ಆರಂಭಿಸಿದಾಗ, ನೋವು ತಾಳಲಾರದೆ ಇಬ್ಬರು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಲ್ಲದೆ, ಒಟ್ಟು ಚಿತ್ರಣವನ್ನು ಹೇಳಿದ್ದಾರೆ.

ಉಳಾಯಿಬೆಟ್ಟು ಬಳಿಯ ಪರಾರಿ ಎಂಬಲ್ಲಿರುವ ಟೈಲ್ಸ್ ಫ್ಯಾಕ್ಟರಿ ರವಿರಾಜ್ ಶೆಟ್ಟಿ ಎಂಬವರ ಮಾಲಕತ್ವದಲ್ಲಿದ್ದು, ಕಳೆದ 2017ರಲ್ಲಿ ಕೋರ್ ಕ್ಲೇ ಬ್ರಿಕ್ಸ್ ಅಂಡ್ ಟೈಲ್ಸ್ ಸಂಸ್ಥೆಗೆ ಲೀಸಿಗೆ ಕೊಟ್ಟಿದ್ದರು. ನಾಹಿದ್ ಜಲೀಲ್, ಸಂಗೀತ ಗೋಪಿನಾಥ್, ಮೊಹಮ್ಮದ್ ನಾಸಿಂ ಎಂಬವರು ಜಂಟಿಯಾಗಿ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಫ್ಯಾಕ್ಟರಿಯಲ್ಲಿ 30 ಜನರು ಕಾರ್ಮಿಕರಿದ್ದರೂ, ಸಿಸಿಟಿವಿ ಸರಿಯಾಗಿ ವರ್ಕ್ ಆಗುತ್ತಿರಲಿಲ್ಲ. ಕೆಲವು ಕಡೆಯ ಸಿಸಿಟಿವಿ ಮಾತ್ರ ವರ್ಕಿಂಗ್ ಇತ್ತು. ಒಂದರಲ್ಲಿ ನಾಲ್ವರು ಮಕ್ಕಳು ಮನೆಯಿಂದ ಹೊರಗೆ ಹೋಗುವ ದೃಶ್ಯ ದಾಖಲಾಗಿದೆ. ವಿವಿಧ ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿದ್ದು, ಎರಡು ದಿನದ ಅಂತರದಲ್ಲಿ ಪೊಲೀಸರು ನಾಲ್ವರು ಕಿರಾತಕ ಆರೋಪಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಎಸಿಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ತಂಡಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಹತ್ತು ಸಾವಿರ ರೂ. ಬಹುಮಾನ ನೀಡಿದ್ದಾರೆ.

ಉಳಾಯಿಬೆಟ್ಟು ; ಟೈಲ್ಸ್ ಫ್ಯಾಕ್ಟರಿಯಲ್ಲಿ ಜಾರ್ಖಂಡ್ ಮೂಲದ ಎಂಟು ವರ್ಷದ ಹೆಣ್ಮಗು ಪೈಶಾಚಿಕ ಕೊಲೆ !

In connection with the rape and murder of a girl within the limits of Raj Tiles Factory, Parari, Tiruvail, Vamanjoor Mangaluru, the police have cracked the case and arrested four accused. The arrested accused are Muneem, Manish, Mukesh and Jayban alias Jay Singh.  The girl who died was the daughter of a couple from Simdega district Jharkhand, aged 35 and 28 respectively who work for the factory.