ಬ್ರೇಕಿಂಗ್ ನ್ಯೂಸ್
24-11-21 08:54 pm HK news Desk ಕ್ರೈಂ
ಪುತ್ತೂರು, ನ.24: ಇತ್ತೀಚೆಗೆ ಪುತ್ತೂರಿಗೆ ಜಮೀನು ನೋಡಲು ಹೋಗಿ ನಾಪತ್ತೆಯಾಗಿದ್ದ ಮೈಸೂರು ಮೂಲದ ಫೋಟೋಗ್ರಾಫರನ್ನು ಕೊಲೆಗೈದು ಕಾಡಿನಲ್ಲಿ ಹೂತು ಹಾಕಿರುವ ರಹಸ್ಯವನ್ನು ಪೊಲೀಸರು ಹೊರಗೆಡವಿದ್ದಾರೆ. ಮೈಸೂರಿನಲ್ಲಿ ಫೋಟೋಗ್ರಾಫರ್ ಆಗಿದ್ದ, ಮಂಗಳೂರು ಮೂಲದ ನಿವಾಸಿ ಜಗದೀಶ (52) ಕೊಲೆಯಾದವರು.
ಜಗದೀಶ್ ಮೂಲತಃ ಮಂಗಳೂರು ನಿವಾಸಿಯಾಗಿದ್ದರೂ, ಮೈಸೂರಿನಲ್ಲಿ ಫೋಟೋಗ್ರಫಿ ವೃತ್ತಿ ಸಂಬಂಧ ಹಲವು ವರ್ಷಗಳಿಂದ ಅಲ್ಲಿನ ಸುಬ್ರಹ್ಮಣ್ಯ ನಗರದಲ್ಲಿ ಪತ್ನಿ ಮಕ್ಕಳೊಂದಿಗೆ ನೆಲೆಸಿದ್ದರು. ಈ ನಡುವೆ, ಮೂರು ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ಎಂಬಲ್ಲಿ ಅಡಿಕೆ ತೋಟ ಇದ್ದ ಎರಡು ಎಕರೆ ಜಾಗವನ್ನು ಖರೀದಿಸಿ ಕೃಷಿ ಮಾಡಿಕೊಂಡಿದ್ದರು. ತೋಟವನ್ನು ನೋಡಿಕೊಳ್ಳಲು ಸಂಬಂಧದಲ್ಲಿ ಮಾವನಾಗಿರುವ ಅದೇ ಪರಿಸರದ ನಿವಾಸಿ ಬಾಲಕೃಷ್ಣ ರೈ ಎಂಬವರಿಗೆ ವಹಿಸಿದ್ದರು.
ಕೆಲವೊಮ್ಮೆ ಊರಿಗೆ ಬಂದ ವೇಳೆ, ತೋಟಕ್ಕೆ ಹೋಗಿ ನೋಡಿ ಬರುತ್ತಿದ್ದರು. ವಾರದ ಹಿಂದೆ ಮಂಗಳೂರಿಗೆ ಬಂದಿದ್ದ ವೇಳೆ, ಜಗದೀಶ್ ತನ್ನ ಓಮ್ನಿ ಕಾರಿನಲ್ಲಿ ಪುತ್ತೂರಿಗೆ ತೆರಳಿದ್ದು , ತೋಟಕ್ಕೆ ಹೋಗಿ ಆಬಳಿಕ ಮೈಸೂರಿಗೆ ತೆರಳುವುದಾಗಿ ಪತ್ನಿಯಲ್ಲಿ ಹೇಳಿ ಹೋಗಿದ್ದರು. ಆದರೆ, ತೋಟಕ್ಕೆ ಹೋಗಿದ್ದ ವ್ಯಕ್ತಿ ಕಾಣೆಯಾಗಿದ್ದರು. ಈ ಬಗ್ಗೆ ಬಾಲಕೃಷ್ಣ ರೈ ಬಳಿ ಕೇಳಿದರೆ, ನ.18ರಂದು ತೋಟಕ್ಕೆ ಬಂದಿದ್ದ ಜಗದೀಶ ಓಮ್ನಿ ಕಾರಿನಲ್ಲಿ ಹಿಂತಿರುಗಿ ಹೋಗಿದ್ದಾಗಿ ತಿಳಿಸಿದ್ದರು. ಈ ಬಗ್ಗೆ ಜಗದೀಶ ಅವರ ಅಣ್ಣ ಮಂಗಳೂರಿನ ಕಾವೂರಿನಲ್ಲಿ ನೆಲೆಸಿರುವ ಶಶಿಧರ ಅವರು ತಮ್ಮ ಕಾಣೆಯಾಗಿರುವ ಬಗ್ಗೆ ಪುತ್ತೂರು ಠಾಣೆಯಲ್ಲಿ ಕೇಸು ದಾಖಲಿಸಿದ್ದರು.
ಜಗದೀಶನ ನಾಪತ್ತೆ ಬಗ್ಗೆ ಸಂಶಯ ಹೆಚ್ಚಿದ್ದರಿಂದ ಶಶಿಧರ ಅವರು ಮಾವ ಬಾಲಕೃಷ್ಣ ರೈ ಕುಟುಂಬದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅದರಂತೆ, ಶಶಿಧರ ಅವರು ಪುನಃ ದೂರೊಂದನ್ನು ನೀಡಿ, ತನ್ನ ತಮ್ಮನನ್ನು ಬಾಲಕೃಷ್ಣ ರೈ ಮತ್ತು ಅವರ ಮಗ ಅಪಹರಿಸಿ ಜೀವಕ್ಕೆ ಹಾನಿ ಮಾಡಿದ್ದಾರೆಂದು ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದ್ದು, ಬಾಲಕೃಷ್ಣ ರೈ ಮತ್ತು ಅವರ ಕುಟುಂಬಸ್ಥರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ನಿಜ ವಿಚಾರ ಹೊರಗೆ ಬಂದಿದೆ.
ಜಗದೀಶನನ್ನು ಬಾಲಕೃಷ್ಣ ರೈ, ಪತ್ನಿ ಜಯಲಕ್ಷ್ಮಿ, ಮಗ ಪ್ರಶಾಂತ್, ಮನೆ ಪರಿಸರದ ನಿವಾಸಿ ಜೀವನ್ ಪ್ರಸಾದ್ ಎಂಬವರು ಸೇರಿ ಕೊಲೆ ಮಾಡಿದ್ದು, ಬಳಿಕ ಮನೆ ಬಳಿಯ ಕಾಡಿನಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದರು. ಈ ಬಗ್ಗೆ ಯಾರಿಗೂ ತಿಳಿಯದಂತೆ, ವಿಷಯವನ್ನು ಮುಚ್ಚಿ ಹಾಕಿದ್ದರು. ಆದರೆ, ದೂರುದಾರರ ಸಂಶಯದಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸತ್ಯ ಬಯಲಾಗಿದೆ. ಜಾಗದ ಮೇಲಿನ ಆಸೆಯಿಂದ ಅದರ ಮಾಲೀಕನನ್ನೇ ಕೊಂದು ಹಾಕಿದ್ದು, ಎಲ್ಲ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
A photographer from Mysuru who had gone to his native Puttur in Dakshina Kannada district only to go missing is found dead under mysterious circumstances. Jagadish (57) popular as ‘Srushti Jagadish’ had gone to see his lands near Puttur on November 18. As he went missing, a police complaint had been lodged in this regard. Later in the police probe it came to lift that Jagadish was allegedly hacked to death by hammer by his relatives.
04-01-25 06:49 pm
Bangalore Correspondent
Gadag Car accident; ಹೈಸ್ಕೂಲ್ ವಿದ್ಯಾರ್ಥಿಗಳು ಚಲ...
04-01-25 01:28 pm
BJP MLC Dhananjaya Sarji: ಹೊಸ ವರ್ಷಕ್ಕೆ ಬಿಜೆಪಿ...
03-01-25 10:47 pm
ಮಂಗಳೂರು, ಶಿವಮೊಗ್ಗ ಸೇರಿ ಆರು ಸ್ಮಾರ್ಟ್ ಸಿಟಿ ಯೋಜ...
03-01-25 08:33 pm
ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಂದ ಹಣ ವಸೂಲಿ...
03-01-25 02:02 pm
04-01-25 06:01 pm
HK News Desk
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
ಅಮೆರಿಕದಲ್ಲಿ ಭೀಕರ ಅಪಘಾತ ; ನ್ಯೂ ಇಯರ್ ಸಂಭ್ರಮದಲ್...
02-01-25 12:02 pm
04-01-25 09:49 pm
Mangalore Correspondent
Travel agency fraud, Muhammadiya, Haj, Mangal...
04-01-25 08:57 pm
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಂಸದ ಕ್ಯಾ....
03-01-25 10:14 pm
Mangalore Kambala: ಕಂಬಳದಲ್ಲಿ ಅನಗತ್ಯ ವಿಳಂಬ ತಪ್...
03-01-25 05:40 pm
BJP, Pralhad Joshi, Mangalore: ರಾಹುಲ್ ಹೇಳಿದಂತ...
02-01-25 09:26 pm
04-01-25 11:31 am
Mangalore Correspondent
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm
Mangalore crime, Kankandy Police: ಹಾಡಹಗಲೇ ಚೂರ...
02-01-25 10:12 pm