ಬ್ರೇಕಿಂಗ್ ನ್ಯೂಸ್
27-11-21 01:50 pm HK Desk news ಕ್ರೈಂ
ಮಂಗಳೂರು, ನ.27: ನಗರ ವ್ಯಾಪ್ತಿಯ ಕುಳೂರು ಮತ್ತು ಕೋಡಿಕಲ್ ನಲ್ಲಿ ನಾಗನ ಕಲ್ಲಿಗೆ ಹಾನಿಗೈದು ಧ್ವಂಸಗೈದ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.
ಮಹತ್ವದ ಕಾರ್ಯಾಚರಣೆಯಲ್ಲಿ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾವೂರು ನಿವಾಸಿ ಸಫ್ವಾನ್ , ಮೊಹಮ್ಮದ್ ಸುಹೈಲ್ , ಪ್ರವೀಣ್ ಅನಿಲ್ ಮೊಂತೇರೊ, ನಿಖಿಲೇಶ್, ಸುರತ್ಕಲ್ ನ ಜಯಂತ್ ಕುಮಾರ್, ಬಂಟ್ವಾಳದ ಪ್ರತೀಕ್, ಬೇಲೂರಿನ ಮಂಜುನಾಥ್ , ಹಾಸನ ನಿವಾಸಿ ನೌಷಾದ್ ಬಂಧಿತ ಆರೋಪಿಗಳು.
ನಾಗದೇವರ ಮೂರ್ತಿ ಭಗ್ನಗೊಳಿಸಿ ಕೋಮು ಗಲಭೆ ಸೃಷ್ಟಿಸಿ ಶಾಂತಿ ಕದಡುವ ಸಂಚು ರೂಪಿಸಿದ್ದು ಬಯಲಾಗಿದೆ. ಸರಣಿ ಸರಗಳ್ಳತನ, ದರೋಡೆ ಪ್ರಕರಣಗಳ ಹಿಂದೆ ಬಿದ್ದ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಸಂಚು ನಡೆಸಿದ್ದರು. ಆಮೂಲಕ ನಾಗದೇವರ ಕಲ್ಲಿಗೆ ಹಾನಿ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಸಂಚು ಹೂಡಿದ್ದರು.
ಘಟನೆ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಕೋಡಿಕಲ್ ನಲ್ಲಿ ಪ್ರತಿಭಟನೆ ನಡೆಸಿ, ಆರೋಪಿಗಳ ಬಂಧನಕ್ಕೆ 20 ದಿನಗಳ ಗಡುವು ನೀಡಿದ್ದವು. ಪೊಲೀಸರಿಗೆ ಸವಾಲಾಗಿದ್ದರಿಂದ ಮಂಗಳೂರು ಕಮಿಷನರ್ ಶಶಿಕುಮಾರ್, ಮೂಲ್ಕಿ, ಮೂಡುಬಿದ್ರೆ, ಪಣಂಬೂರು, ಕಾವೂರು ಠಾಣೆ ಸೇರಿ 40 ಮಂದಿ ಪೊಲೀಸ್ ಸಿಬಂದಿಯ ತಂಡ ರಚಿಸಿದ್ದರು.
ಪ್ರವೀಣ್ ಮೊಂತೇರೊ ಈ ಹಿಂದೆ ಡಕಾಯಿತಿ, ದರೋಡೆ ಪ್ರಕರಣ ಎದುರಿಸುತ್ತಿದ್ದ ಆರೋಪಿಯಾಗಿದ್ದ. ಆರೋಪಿಗಳು ಜೈಲಿನಲ್ಲಿದ್ದ ವೇಳೆ ಇವರ ನಡುವೆ ಸಂಪರ್ಕ ಆಗಿದ್ದರು. ಸರಗಳ್ಳತನದ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಇಶಾನ್, ಅಚ್ಚಿ ಎಂಬವರ ಸೂಚನೆಯಂತೆ ಕೃತ್ಯಕ್ಕೆ ಸಂಚು ಹೆಣೆಯಲಾಗಿತ್ತು.
ಕಾವೂರಿನ ಸಫಾನ್ ಮತ್ತು ಸೊಹೇಲ್ ಸೇರಿಕೊಂಡು ಹಿಂದುಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿ ನಾಗಬನ ಸೇರಿ, ಧಾರ್ಮಿಕ ಕೇಂದ್ರಗಳ ಅಪವಿತ್ರಗೊಳಿಸಲು ಸಂಚು ನಡೆಸಿದ್ದರು. ಸಫ್ವಾನ್ ತನ್ನ ಸ್ನೇಹಿತ ಪ್ರವೀಣ್ ಮೊಂತೇರೊ ಮೂಲಕ ಹತ್ತು ಸಾವಿರಕ್ಕೆ ಡೀಲ್ ಮಾಡಿದ್ದರು. ಹಣ ಪಡೆದು ಕುಳೂರು ಮತ್ತು ಕೋಡಿಕಲ್ ನಾಗಬನಕ್ಕೆ ಹಾನಿ ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ.
ಕೋಡಿಕಲ್ ನಾಗಬನದ ಎಲ್ಲ ನಾಗನ ಕಲ್ಲುಗಳನ್ನು ತೆಗೆಯಲು ಮುಂದಾಗಿದ್ದರು. ಮತ್ತೆ ಹೋಗಿದ್ದಾಗ ಅಲ್ಲಿನ ನಾಯಿ ಬೊಗಳಿದ್ದರಿಂದ ಇತರೇ ಕಲ್ಲುಗಳನ್ನು ಹಾನಿ ಮಾಡಲು ಸಾಧ್ಯವಾಗಿರಲಿಲ್ಲ. ಪ್ರಕರಣದಲ್ಲಿ ಆರೋಪಿಗಳಿಗೆ ಪರೋಕ್ಷ ಬೆಂಬಲ ನೀಡಿದ ಇನ್ನೂ ಹಲವರು ಇದ್ದಾರೆ, ಅವರನ್ನು ಅರೆಸ್ಟ್ ಮಾಡುತ್ತೇವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
In connection with the incidents at Kulur and Kodikal in the city where sacrilegious acts were committed in the Naga Banas where stone forms of the serpent gods are consecrated, the police have arrested eight persons. The arrested are identified as Safwan (25), Sohaib (23) and Nikilesh (22) from Kavoor, Praveen Anil Monteiro (27) from Panjimogaru, Jayanth Kumar (30) from Surathkal, Prathik (24) from Bantwal, Manjunath (30) from Kulur and Naushad (30) from Hassan.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 06:07 pm
HK News Desk
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm