ಬ್ರೇಕಿಂಗ್ ನ್ಯೂಸ್
28-11-21 05:52 pm Mangaluru Correspondent ಕ್ರೈಂ
ಮಂಗಳೂರು, ನ.28: ನಗರದ ಎರಡು ಪ್ರತ್ಯೇಕ ನರ್ಸಿಂಗ್ ಕಾಲೇಜುಗಳಲ್ಲಿ ಕಲಿಯುತ್ತಿರುವ ಕೇರಳ ಮೂಲದ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದಾರೆ.
ಮೂಲತಃ ಕಣ್ಣೂರು ಜಿಲ್ಲೆಯ ಪಾಪಿನಶ್ಶೇರಿ ನಿವಾಸಿ, ಇಂಡಿಯಾನಾ ನರ್ಸಿಂಗ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ ಅಮಲ್ ಗಿರೀಶ್ ಎಂಬಾತ ಪಾಂಡೇಶ್ವರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ನ.26ರಂದು ಸಂಜೆ ಗೆಳೆಯರಾದ ಅಭಿಜಿತ್, ಕಾರ್ತಿಕ್, ಅಭಿಷೇಕ್, ಜೋಯೆಲ್ ಮತ್ತು ಅಬಿನ್ ಜೊತೆಗೆ ನಾವು ಡಿಮಾರ್ಟ್ ಸೆಂಟರಿಗೆ ಶಾಪಿಂಗ್ ಹೋಗಿದ್ದೆವು. ಶಾಪಿಂಗ್ ಬಳಿಕ, ಅಭಿಜಿತ್, ಕಾರ್ತಿಕ್, ಅಬಿನ್, ಜೋಯೆಲ್ ಅವರ ರೂಮಿಗೆ ಹಿಂತಿರುಗಿದ್ದರು. ನಾನು ಮತ್ತು ಕಾರ್ತಿಕ್, ಅತ್ತಾವರದ ಲೀ ರಾಯಲ್ ಅಪಾರ್ಟ್ಮೆಂಟಿನಲ್ಲಿ ನೆಲೆಸಿದ್ದು, 7.30ರ ಸುಮಾರಿಗೆ ಅಲ್ಲಿಗೆ ತಲುಪಿದ್ದೆವು. ಆ ಸಂದರ್ಭದಲ್ಲಿ 5 ಮಂದಿ ಮಲಯಾಳಂ ಮಾತನಾಡುತ್ತಿದ್ದ ಯುವಕರು ಎದುರಾಗಿದ್ದಾರೆ.
ಅವರು ನಮ್ಮನ್ನು ಹೈ ಎಂದು ಹೇಳುವಂತೆ ಒತ್ತಾಯಿಸುತ್ತಾ ನಮ್ಮ ಬೆನ್ನ ಹಿಂದೆಯೇ ಬಂದಿದ್ದಾರೆ. ಆನಂತರ ಇನ್ನೂ ನಾಲ್ಕು ಮಂದಿ ಯುವಕರು ಅಲ್ಲಿಗೆ ಬಂದಿದ್ದು ನಮ್ಮ ರೂಮಿನೊಳಗೆ ಬಂದಿದ್ದಾರೆ. ನನಗೆ ತೀವ್ರ ರೀತಿಯಲ್ಲಿ ಕಿರುಕುಳ ನೀಡಿದ್ದಾರೆ. ಅಲ್ಲದೆ, ಬಲವಂತದಿಂದ ನನ್ನ ಅರ್ಧ ಗಡ್ಡ ತೆಗೆಯುವಂತೆ ಮಾಡಿದ್ದಾರೆ. ಅಲ್ಲದೆ, ನಾನು ಮತ್ತು ಗೆಳೆಯ ಕಾರ್ತಿಕ್ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮಲ್ಲಿ ಹಣ ಕೊಡುವಂತೆ ಪೀಡಿಸಿದ್ದಾರೆ. ಕಾರ್ತಿಕ್ ಮೇಲೆ ಹೆಲ್ಮೆಟ್ ನಲ್ಲಿ ಹೊಡೆದಿದ್ದಾರೆ. ನೀವು ಹಣ ಕೊಡದೇ ಇದ್ದರೆ ಕೊಂದು ಬಿಡುತ್ತೇವೆ ಎಂದು ಬೆದರಿಸಿದ್ದಾರೆ. ಬಳಿಕ ನನ್ನ ಖಾತೆಯಿಂದ 270 ರೂ.ಗಳನ್ನು ಅವರಲ್ಲೊಬ್ಬನ ಖಾತೆಗೆ ವರ್ಗಾಯಿಸಿದ್ದೇನೆ. ರಾತ್ರಿ 8.30ರ ವರೆಗೂ ರೂಮಿನಲ್ಲೇ ಇದ್ದು ಕಿರುಕುಳ ನೀಡಿದ್ದಾರೆ.
ಅವರೊಳಗೆ ಮಾತನಾಡುತ್ತಿದ್ದಾಗ ಅವರ ಹೆಸರು ಅಬಿನ್ ಅಲೆಕ್ಸ್, ನಂದು ಶ್ರೀಕುಮಾರ್, ಶಿಹಾಸ್, ಪ್ರವೀಶ್, ಗೋಪಿಕೃಷ್ಣ, ಹಸನ್, ವಿಷ್ಣು, ಜಾಸಿಲ್, ಅಲನ್ ಎಂಬುದಾಗಿ ತಿಳಿದುಬಂದಿದ್ದು, ಕಿರುಕುಳ ನೀಡಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮಲ್ ಗಿರೀಶ್ ಎಂಬಾತ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದ. ಇದರಂತೆ, ಪಾಂಡೇಶ್ವರ ಪೊಲೀಸರು ನ.27ರಂದು ಕಲಂ 143, 147, 148, 342, 323, 324, 386, 149 ಹಾಗೂ ಕರ್ನಾಟಕ ಶಿಕ್ಷಣ ಹಕ್ಕು ಕಾಯ್ದೆಯಡಿ ಕೇಸು ದಾಖಲು ಮಾಡಿದ್ದರು. ತನಿಖೆ ನಡೆಸಿದ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದಾಗಿ ತಿಳಿದುಬಂದಿದೆ. ಬಂಧಿತರು ಯೆನಪೋಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.
Kerala students ragging in Mangalore, shave beard and torture Junior, 10 arrested by Pandeshwar Police station.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 06:07 pm
HK News Desk
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm