ಬ್ರೇಕಿಂಗ್ ನ್ಯೂಸ್
29-11-21 08:14 pm HK Desk news ಕ್ರೈಂ
ಬೆಂಗಳೂರು, ನ.29: ಟ್ರಾವೆಲ್ಸ್ ಹೆಸರಲ್ಲಿ ಕಾರುಗಳನ್ನು ಬಾಡಿಗೆ ಪಡೆದು ಅಟ್ಯಾಚ್ ಮಾಡಿಸಿಕೊಂಡು 10 ಕೋಟಿಗೂ ಹೆಚ್ಚು ಮೌಲ್ಯದ 130 ಕಾರುಗಳೊಂದಿಗೆ ವಂಚಕನೊಬ್ಬ ಪರಾರಿಯಾದ ಘಟನೆ ನಡೆದಿದ್ದು ವಂಚನೆಗೆ ಒಳಗಾದವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಮಿಳುನಾಡು ಮೂಲದ ಶಿವಕುಮಾರ್ ನಾಪತ್ತೆಯಾಗಿರುವ ವಂಚಕನಾಗಿದ್ದು ಬೆಂಗಳೂರಿನ ನಾಗಸಂದ್ರದಲ್ಲಿ ಕಳೆದ ಒಂದು ವರ್ಷದ ಹಿಂದೆ ಆರ್‌ಎಸ್ ಟ್ರಾವೆಲ್ಸ್ ಹೆಸರಲ್ಲಿ ಏಜನ್ಸಿ ಆರಂಭಿಸಿದ್ದ. ಟ್ರಾವೆಲ್ಸ್ ಹೆಸರಲ್ಲಿ ಕಾರುಗಳನ್ನು ಬಾಡಿಗೆ ಕೊಡುತ್ತಿದ್ದು ಇದಕ್ಕಾಗಿ 130ಕ್ಕೂ ಹೆಚ್ಚು ವಿವಿಧ ಮಾದರಿಯ ಕಾರುಗಳನ್ನು ಅಟ್ಯಾಚ್ ಮಾಡಿಸಿಕೊಂಡಿದ್ದ. ಪ್ರತಿ ತಿಂಗಳ 8 ರಂದು ಅಟ್ಯಾಚ್ ಮಾಡಿದ್ದ ಕಾರು ಮಾಲೀಕರ ಅಕೌಂಟಿಗೆ ಬಾಡಿಗೆ ಹಣವನ್ನೂ ಹಾಕುತ್ತಿದ್ದ.
ವ್ಯವಹಾರದಲ್ಲಿ ನಂಬಿಕೆ ಮೂಡಿದ್ದರಿಂದ ಹೆಚ್ಚು ಕಾರುಗಳನ್ನು ಅಟ್ಯಾಚ್ ಮಾಡಲಾಗಿತ್ತು. ಇದರಲ್ಲಿ ಐಷಾರಾಮಿ ಕಾರು ಸೇರಿದಂತೆ ಇನೋವಾ, ಇಟಿಯೋಸ್, ಸ್ವಿಫ್ಟ್ ನಂತಹ ಕಾರುಗಳನ್ನೂ ಬಾಡಿಗೆಗೆ ಬಿಡಲಾಗಿತ್ತು. ಆದ್ರೆ ಈ ತಿಂಗಳು ಹಣ ಹಾಕಿರಲಿಲ್ಲ.

ಕಾರು ಮಾಲೀಕರು ಈ ಬಗ್ಗೆ ವಿಚಾರಿಸಲು ಶಿವಕುಮಾರ್ ಮೊಬೈಲ್ ಗೆ 3-4 ಬಾರಿ ಕರೆ ಮಾಡಿದ್ದರು. ಸ್ವೀಕರಿಸದೇ ಇದ್ದರಿಂದ ಅನುಮಾನಗೊಂಡ ಕಾರು ಮಾಲೀಕರು ಟ್ರಾವೆಲ್ಸ್ ಬಳಿ ಬಂದು ನೋಡಿದಾಗ ಕಚೇರಿಗೆ ಬೀಗ ಹಾಕಲಾಗಿತ್ತು.
ಆನಂತರ, ಒಬ್ಬೊಬ್ಬರೇ ಟ್ರಾವಲ್ಸ್ ಬಳಿ ಬಂದು ವಿಚಾರಿಸಿದಾಗ ಕಳೆದೊಂದು ವಾರದಿಂದ ಟ್ರಾವಲ್ಸ್ ಗೆ ಬೀಗ ಹಾಕಿರುವ ವಿಚಾರ ತಿಳಿದುಬಂದಿತ್ತು. ತಾವು ಮೋಸ ಹೋಗಿರುವುದನ್ನು ಅರಿತು ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಆರೋಪಿ ಶಿವಕುಮಾರ್ ಬರೋಬ್ಬರಿ 130ಕ್ಕೂ ಹೆಚ್ಚು ಕಾರುಗಳೊಂದಿಗೆ ಎಸ್ಕೇಪ್ ಆಗಿದ್ದಾನೆ. ಸದ್ಯ ಕಾರುಗಳನ್ನ ಅಟ್ಯಾಚ್ ಮಾಡಿದ್ದ ಮಾಲೀಕರು ಕಂಗಾಲಾಗಿದ್ದಾರೆ. ಬಗಲಗುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.
Man fless with 130 taxi cars in Banagalore. The worth of 130 cars is said to be more than 10 crores.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm