ಬ್ರೇಕಿಂಗ್ ನ್ಯೂಸ್
30-11-21 02:28 pm HK Desk news ಕ್ರೈಂ
ಬೆಂಗಳೂರು, ನ.30: ಓಮಿಕ್ರಾನ್ ರೂಪಾಂತರಿ ವೈರಸ್ ಬರದಂತೆ ಲಸಿಕೆ ನೀಡಲು ಬಂದಿರುವುದಾಗಿ ವೈದ್ಯರ ಸೋಗಿನಲ್ಲಿ ಬಂದಿದ್ದ ತಂಡವೊಂದು ಮನೆಯವರಿಗೆ ಪಿಸ್ತೂಲ್ ತೋರಿಸಿ ದರೋಡೆ ನಡೆಸಿರುವ ಘಟನೆ ಯಶವಂತಪುರದ ಎಸ್ ಬಿಎಂ ಕಾಲನಿಯಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಒಂದು ಕಾರು ಮತ್ತು ಇನ್ನೊಂದು ಬೈಕಿನಲ್ಲಿ ನಾಲ್ವರು ಬಂದಿದ್ದರು. ಉತ್ತರ ಭಾರತ ಮೂಲದ ಸಂಪತ್ ಸಿಂಗ್ ಎಂಬವರ ಮನೆಗೆ ಬಂದಿದ್ದ ತಂಡ, ನಿಮಗೆ ಕೊರೊನಾ ಲಸಿಕೆ ಆಗಿದೆಯೇ ಎಂದು ಕೇಳಿದ್ದಾರೆ. ಲಸಿಕೆ ತಗೊಂಡಿದ್ದೇವೆ ಎಂದಿದ್ದಕ್ಕೆ ಈಗ, ಹೊಸ ವೈರಸ್ ಬಂದಿರುವುದಕ್ಕೆ ಮತ್ತೊಂದು ಲಸಿಕೆ ನೀಡಲು ಬಂದಿದ್ದೇವೆ ಎಂದು ಹೇಳಿ ಮನೆಯ ಒಳಗೆ ಬಂದಿದ್ದಾರೆ.
ಮನೆಯಲ್ಲಿ ಸಂಪತ್ ಸಿಂಗ್ ಪತ್ನಿ ಪಿಸ್ತಾ ದೇವಿ ಮತ್ತು ಸೊಸೆ ರಕ್ಷಾ ಮಾತ್ರ ಇದ್ದರು. ಪಿಸ್ತಾ ದೇವಿ ಗಂಡನಿಗೆ ಕರೆ ಮಾಡಲೆಂದು ಮೊಬೈಲ್ ತೆಗೆಯುವಷ್ಟರಲ್ಲಿ ಅವರಲ್ಲಿ ಒಬ್ಬಾತ ಆಕೆಯ ಹಣೆಗೆ ರಿವಾಲ್ವರ್ ಇಟ್ಟಿದ್ದಾನೆ. ಕೂಡಲೇ ಅವರಿಬ್ಬರನ್ನೂ ಮನೆಯ ಕೋಣೆಯೊಳಗೆ ಕೂಡಿ ಹಾಕಿದ್ದಾರೆ. ಬಳಿಕ ಮನೆಯ ಕಪಾಟಿನಲ್ಲಿದ್ದ 50 ಗ್ರಾಮ್ ಚಿನ್ನವನ್ನು ಲೂಟಿ ಮಾಡಿದ್ದಾರೆ. ಇದೇ ವೇಳೆ, ಪಿಸ್ತಾ ದೇವಿಯವರ ಇನ್ನೊಬ್ಬ ಮಗ ವಿಕ್ರಂ ಸಿಂಗ್ ಎಂಬಾತ ಈ ವಿಚಾರ ತಿಳಿಯದೆ ನೇರವಾಗಿ ಮನೆಗೆ ಬಂದಿದ್ದಾನೆ.
ಮನೆಯಲ್ಲಿ ನೋಡಿದರೆ, ನಾಲ್ಕು ಮಂದಿ ವೈದ್ಯರ ಸೋಗಿನಲ್ಲಿದ್ದರು. ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿದ್ದವರು, ನಿನಗೆ ಲಸಿಕೆ ಆಗಿದೆಯಾ ಎಂದು ಕೇಳಿದ್ದಾರೆ. ನನಗೆ ಲಸಿಕೆ ಆಗಿದೆ ಎನ್ನುತ್ತಲೇ ತಾಯಿಯನ್ನು ಕರೆಯುತ್ತಾ ಮನೆಯ ಕೋಣೆಯೊಳಗೆ ಹೋಗಿದ್ದಾನೆ. ಅಷ್ಟರಲ್ಲಿ ಆಗಂತುಕರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ.
ಈ ಬಗ್ಗೆ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ಪರಿಶೀಲಿಸಿ ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.
Burglars come as Doctors stating to give Omicron Virus vaccine, show guns and flee with costly items. A case has been registered at Yeshwantpur Police Station.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm