ಬ್ರೇಕಿಂಗ್ ನ್ಯೂಸ್
01-12-21 01:42 pm HK Desk news ಕ್ರೈಂ
ಮಂಗಳೂರು, ಡಿ.1: ಉಪನ್ಯಾಸಕನೊಬ್ಬ ನಕಲಿ ಇ-ಮೇಲ್ ಸೃಷ್ಟಿಸಿ ಮೆಡಿಕಲ್ ಕಾಲೇಜಿನ ಆಡಳಿತ ಮತ್ತು ಪ್ರಿನ್ಸಿಪಾಲರನ್ನೇ ಯಾಮಾರಿಸಿದ ಘಟನೆ ನಡೆದಿದ್ದು, ಆರೋಪಿ ಉಪನ್ಯಾಸಕನನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇರಳಕಟ್ಟೆಯ ಮೆಡಿಕಲ್ ಕಾಲೇಜು ಒಂದರಲ್ಲಿ ಘಟನೆ ನಡೆದಿದ್ದು ಉಳಿಯ ರಾಣಿಪುರ ನಿವಾಸಿ ಆರೋಪಿ ಡೇವಿಡ್ ರಾಕೇಶ್ ಡಿಸೋಜ(36) ಬಂಧಿತ. ನಕಲಿ ಇ-ಮೇಲ್ ಖಾತೆಯನ್ನು ಸೃಷ್ಟಿಸಿ, ಅದರ ಮೂಲಕ ಕಾಲೇಜಿನ ಡೈರೆಕ್ಟರ್ ಹುದ್ದೆಯಲ್ಲಿದ್ದವರಿಗೆ ಪ್ರಿನ್ಸಿಪಾಲ್ ಬಗ್ಗೆ ಆರೋಪಗಳನ್ನು ಹೊರಿಸಿ ಮೇಲ್ ಸಂದೇಶಗಳನ್ನು ಕಳಿಸಲಾಗಿತ್ತು. ಪ್ರಿನ್ಸಿಪಾಲ್ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿದ್ದಾರೆಂಬ ಗಂಭೀರ ಆರೋಪಗಳಲ್ಲದೆ, ಕಾಲೇಜು ಆಡಳಿತ ಮತ್ತು ಸಿಬಂದಿ ನಡುವಿನ ವಿಚಾರವನ್ನು ಅದರಲ್ಲಿ ಬರೆಯಲಾಗಿತ್ತು.
ಈ ಬಗ್ಗೆ ಕಾಲೇಜಿನ ಆಂತರಿಕ ತನಿಖಾ ಸಮಿತಿ ತನಿಖೆ ಕೈಗೊಂಡಿದ್ದು, ಯಾವುದೇ ರೀತಿಯಲ್ಲೂ ಆರೋಪಿಯನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ನಕಲಿ ಇ-ಮೇಲ್ ಐಡಿಯಾಗಿದ್ದರಿಂದ ಅದನ್ನು ಪತ್ತೆ ಹಚ್ಚುವುದು ಸಾಧ್ಯವಾಗದೆ ಕಾಲೇಜಿನ ಆಡಳಿತಕ್ಕೆ ತಲೆನೋವಾಗಿತ್ತು. ಇದರಿಂದ ಕಾಲೇಜಿನ ಪ್ರಿನ್ಸಿಪಾಲ್ ಕೂಡ ತುಂಬ ಚಿಂತೆಗೆ ಒಳಗಾಗಿದ್ದರು. ಆದರೆ, ಆರೋಪಿಯಾಗಿದ್ದ ಡೇವಿಡ್ ಎಂದಿನಂತೆ ತನ್ನ ಕರ್ತವ್ಯದಲ್ಲಿದ್ದು ಆತ ನಕಲಿ ಖಾತೆ ಸೃಷ್ಟಿಸಿದ್ದಾನೆಂಬ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ.
ಕಳೆದ ಸೆಪ್ಟಂಬರ್ ತಿಂಗಳಲ್ಲಿ ಈ ಬಗ್ಗೆ ಕಾಲೇಜು ಪ್ರಿನ್ಸಿಪಾಲ್ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯಾರೋ ಒಬ್ಬ ತನ್ನ ಬಗ್ಗೆ ಆರೋಪ ಹೊರಿಸಿ, ಫೇಕ್ ಇ-ಮೇಲ್ ಐಡಿ ಮೂಲಕ ಕಾಲೇಜಿನ ಆಡಳಿತಕ್ಕೆ ಸಂದೇಶಗಳನ್ನು ಕಳಿಸುತ್ತಿದ್ದಾನೆ. ಈ ಬಗ್ಗೆ ಆರೋಪಿಯನ್ನು ಪತ್ತೆ ಮಾಡಿ, ಕ್ರಮ ಜರುಗಿಸಬೇಕು ಎಂದು ಕೋರಿದ್ದರು. ಪೊಲೀಸರು ಇ-ಮೇಲ್ ಸಂದೇಶಗಳನ್ನು ತಾಂತ್ರಿಕ ಪರಿಣತರಿಂದ ಪರಿಶೀಲನೆ ನಡೆಸಿದ್ದು, ಅದರ ಹಿಂದಿರುವ ಐಪಿ ವಿಳಾಸವನ್ನು ಪತ್ತೆ ಮಾಡಿದ್ದಾರೆ. ಐಪಿ ವಿಳಾಸ ಯಾವ ಕಂಪ್ಯೂಟರ್ ನಿಂದ ಕ್ರಿಯೇಟ್ ಆಗಿರುತ್ತದೆ, ಅದನ್ನು ಯಾರು ಬಳಸುತ್ತಿದ್ದಾರೆ ಅನ್ನೋದು ತಿಳಿಸುತ್ತದೆ. ಆಮೂಲಕ ಆರೋಪಿಯನ್ನು ಪತ್ತೆ ಮಾಡಿದ್ದಾರೆ.
ಡೇವಿಡ್ ರಾಕೇಶ್ ಡಿಸೋಜ ಅದೇ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದು, ಪ್ರಾಂಶುಪಾಲರ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗುತ್ತಿದೆ. ಈ ಕಾರಣದಿಂದ ನಕಲಿ ಸಂದೇಶಗಳ ಮೂಲಕ ಹಾಲಿ ಪ್ರಿನ್ಸಿಪಾಲ್ ವಿರುದ್ಧ ಆರೋಪಗಳನ್ನು ಹೊರಿಸಿ, ಕಾಲೇಜಿನ ಆಡಳಿತಕ್ಕೆ ಕಳಿಸಿದ್ದ ಎನ್ನುವ ಮಾಹಿತಿಗಳಿವೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಕೋರ್ಟಿಗೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
The personnel of the cyber crime, economic offences and narcotics police station here have arrested David Rakesh D'Souza (36), a resident of Uliya Ranipura. He has been accused of creating a fake email ID and using that ID to level baseless allegations against the principal of his college and sending the mails to the medical college director.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm