ತನ್ನದೇ ಮಗುವಿನ ಮೇಲೆ ಲೈಂಗಿಕ ಕಿರುಕುಳ ; ಆರೋಪಿ ರೌಡಿಶೀಟರ್ ಬಂಧನ

01-12-21 03:24 pm       HK Desk news   ಕ್ರೈಂ

ಕುಡಿದ ಮತ್ತಿನಲ್ಲಿ ಸಣ್ಣ ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ರೌಡಿ ಶೀಟರ್ ಆಗಿರುವ ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರು, ಡಿ.1: ಕುಡಿದ ಮತ್ತಿನಲ್ಲಿ ಸಣ್ಣ ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ರೌಡಿ ಶೀಟರ್ ಆಗಿರುವ ಆರೋಪಿಯನ್ನು ಬಂಧಿಸಿದ್ದಾರೆ.

ಕದ್ರಿ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿರುವ ರೋಹನ್ ರೋಜ್ (35) ಬಂಧಿತ ವ್ಯಕ್ತಿ. ರೋಹನ್, ದಿನವೂ ಮನೆಯಲ್ಲಿ ಕುಡಿದು ಬಂದು ಪತ್ನಿ ಮತ್ತು ತಾಯಿಗೆ ಹಲ್ಲೆ ಮಾಡುತ್ತಿದ್ದ. ಅಲ್ಲದೆ, 5 ವರ್ಷದ ಹೆಣ್ಮಗುವಿನ ಮೇಲೂ ಹಲ್ಲೆ ನಡೆಸುತ್ತಿದ್ದ. ಈ ಬಗ್ಗೆ ಆತನ ಪತ್ನಿ ಕದ್ರಿ ಠಾಣೆಗೆ ಹಲ್ಲೆ ಘಟನೆ ಬಗ್ಗೆ ದೂರು ನೀಡಿದ್ದರು.

ಮಗುವಿನ ಮೇಲೆ ಲೈಂಗಿಕ ಕಿರುಕುಳ ದಾಖಲಾಗಿರುವುದರಿಂದ ಪ್ರಕರಣವನ್ನು ಪಾಂಡೇಶ್ವರ ಮಹಿಳಾ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ದಿನವೂ ತೀರಾ ಮತಿಗೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದ. ತನ್ನದೇ ತಾಯಿ, ಪತ್ನಿ, ಮಗುವಿನ ಮೇಲೆ ಹಲ್ಲೆ ನಡೆಸುತ್ತಿದ್ದ ಬಗ್ಗೆ ಬೇಸತ್ತು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆರೋಪಿ ರೋಹನ್ ಜೊಮೆಟೋ ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದು ಇದೀಗ ಪೊಲೀಸರು ಬಂಧಿಸಿದ್ದಾರೆ.

Mangalore Rowdy Sheeter was arrested by Kadri Police for sexually assaulting his daughter wife and mother. The arrested has been identified as Rohan.