ಬ್ರೇಕಿಂಗ್ ನ್ಯೂಸ್
01-12-21 06:46 pm HK Desk news ಕ್ರೈಂ
ಬೆಂಗಳೂರು, ಡಿ.1: ಶಾಸಕರನ್ನು ಕೊಲೆ ಮಾಡುವ ಬಗ್ಗೆ ಸುಳಿವು ನೀಡುವ ಇಬ್ಬರ ಸಂಭಾಷಣೆ ಉಳ್ಳ ಆಡಿಯೋ ಹೊರಬಂದಿದ್ದು ಬೆಂಗಳೂರು ರಾಜಕೀಯದಲ್ಲಿ ಹೊಸ ವಿವಾದ ಎಬ್ಬಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ತನ್ನ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಅವರು ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಬಿಡಿಎ ಅಧ್ಯಕ್ಷರೂ ಆಗಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದ ವಿಶ್ವನಾಥ್ ತಮಗೆ ಹೆಚ್ಚಿನ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ಕರೆ ಮಾಡಿ ಮಾತನಾಡಿರುವ ವಿಶ್ವನಾಥ್, ಜೀವ ಬೆದರಿಕೆ ಇರುವ ಕಾರಣ ಹೆಚ್ಚಿನ ಭದ್ರತೆ ನೀಡಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
ಶಾಸಕ ಎಸ್.ಆರ್.ವಿಶ್ವನಾಥ್ ಅವರ ಹತ್ಯೆಗಾಗಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ , ದೇವರಾಜ್ ಎಂಬವರ ಜೊತೆ ನಡೆಸಿರುವ ಆಡಿಯೋ ಕೂಡ ಇದೇ ವೇಳೆ ಬಹಿರಂಗಗೊಂಡಿದೆ. ತಕ್ಷಣವೇ ಎಚ್ಚೆತ್ತುಕೊಂಡ ವಿಶ್ವನಾಥ್ ತಮಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ಸಿಎಂ ಮತ್ತು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಗೋಪಾಲಕೃಷ್ಣ ತಮ್ಮ ಮನೆಯಲ್ಲಿ ಕುಳಿತು ವಿಶ್ವನಾಥ್ ಅವರನ್ನು ಹತ್ಯೆಗೈಯಲು 5 ಕೋಟಿ ಸುಪಾರಿ ನೀಡುವುದಾಗಿ ಹೇಳಿರುವುದು ಸಂಭಾಷಣೆಯಲ್ಲಿದೆ. ವಿಶ್ವನಾಥ್ ವಿರುದ್ಧ ನಾವು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ನೂರು ಕೋಟಿ ಖರ್ಚು ಮಾಡಿದರೂ ಗೆಲ್ಲುವುದಕ್ಕೆ ಆಗುವುದಿಲ್ಲ. ಹಾಗಾಗಿ ಅವರನ್ನು ಮುಗಿಸಿದರೆ ನಾವು ರಾಜಕೀಯ ಪುನರ್ಜನ್ಮ ಪಡೆಯಬಹುದೆಂದು ಗೋಪಾಲಕೃಷ್ಣ , ದೇವರಾಜ್‍ಗೆ ಹೇಳಿರುವುದು ಸಂಭಾಷಣೆಯಲ್ಲಿ ಬಹಿರಂಗವಾಗಿದೆ.
ಆಂಧ್ರದಿಂದ ಶಾರ್ಪ್ ಶೂಟರ್‍ಗಳನ್ನು ಕರೆಸಬೇಕು. ಇದಕ್ಕಾಗಿ ನಾನು 5 ಕೋಟಿ ಕೊಡುತ್ತೇನೆ. ನಮ್ಮ ಸ್ಕೆಚ್ ಈ ಬಾರಿ ಮಿಸ್ ಆಗಬಾರದೆಂದು ಗೋಪಾಲಕೃಷ್ಣ ಹೇಳಿದ್ದು ರೆಕಾರ್ಡ್ ಆಗಿದೆ. ಅಲ್ಲದೆ, ಆಡಿಯೋ ಬೆನ್ನಲ್ಲೇ ವಿಶ್ವನಾಥ್ ತನಗೆ ವಿಶೇಷ ಭದ್ರತೆ ಒದಗಿಸುವಂತೆ ಸಿಎಂ ಮತ್ತು ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದು ಸಂಚಲನ ಎಬ್ಬಿಸಿದೆ.
Avideo clip showing Congress leader Gopalkrishna talking about "killing" and "finishing" Karnataka MLA SR Vishwanath of the BJP has gone viral on social media. The video clip shows Gopalkrishna purportedly planning the murder of Vishwanath, who represents Bengaluru's Yelahanka in the Karnataka Assembly.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm