ಯುವತಿಯ ನಗ್ನಚಿತ್ರ ಜಾಲತಾಣದಲ್ಲಿ ಹಾಕುವುದಾಗಿ ಹೇಳಿ ಬ್ಲಾಕ್ಮೇಲ್ ; ಸ್ನೇಹಿತರಿಂದಲೇ ಕೃತ್ಯ! ಇಬ್ಬರನ್ನು ಬಂಧಿಸಿದ ಪೊಲೀಸರು 

04-12-21 07:35 pm       HK Desk news   ಕ್ರೈಂ

ಯುವತಿಯ ಖಾಸಗಿ ಫೋಟೋ​ಗ​ಳನ್ನು ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಅಪ್ಲೋಡ್ ಮಾಡುವುದಾಗಿ ಹೇಳಿ ಬ್ಲ್ಯಾಕ್‌​ಮೇಲ್‌ ಮಾಡು​ತ್ತಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸ್‌ ಠಾಣೆ​ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಡಿ.4 : ಯುವತಿಯ ಖಾಸಗಿ ಫೋಟೋ​ಗ​ಳನ್ನು ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಅಪ್ಲೋಡ್ ಮಾಡುವುದಾಗಿ ಹೇಳಿ ಬ್ಲ್ಯಾಕ್‌​ಮೇಲ್‌ ಮಾಡು​ತ್ತಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸ್‌ ಠಾಣೆ​ ಪೊಲೀಸರು ಬಂಧಿಸಿದ್ದಾರೆ. 19 ವರ್ಷ​ದ ಸಂತ್ರಸ್ತ ಯುವತಿ ನೀಡಿದ ದೂರಿನಂತೆ, ಆಕೆಯ ಸ್ನೇಹಿತರಾದ ದೇವಸಂದ್ರ ನಿವಾಸಿಗಳಾದ ಬ್ರಿಜ್‌ ಭೂಷಣ್‌ ಯಾದವ್‌ (21) ಮತ್ತು ವಿವೇಕ್‌ ರೆಡ್ಡಿ (20) ಎಂಬವರನ್ನು ಬಂಧಿಸಲಾಗಿದೆ. 

ಕೆ.ಆರ್‌.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಯುವತಿಗೆ ಆರೋಪಿ ಬ್ರಿಜ್‌ಭೂಷಣ್‌ ಪರಿಚಯವಾಗಿತ್ತು. ಬಳಿಕ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ಪದೇ ಪದೆ ಸಂತ್ರಸ್ತೆಯ ಮನೆಗೆ ಬರು​ತ್ತಿದ್ದ. ಆನಂತರ ಯುವತಿ ಆರೋ​ಪಿ ಯಿಂದ ಅಂತರ ಕಾಯ್ದುಕೊಂಡಿದ್ದಳು. ಈ ನಡುವೆ ಆರೋಪಿ 2018ರಲ್ಲಿ 'ನನ್ನ ಬಳಿ ನಿನ್ನ ಬೆತ್ತಲೆ ಫೋಟೋ​ಗ​ಳಿ​ವೆ. ಹಣ, ಚಿನ್ನಾ​ಭ​ರಣ ತಂದು ಕೊಡ​ದಿ​ದ್ದ​ರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋ​ಗ​ಳನ್ನು ಹಾಕು​ತ್ತೇನೆ' ಎಂದು ಬೆದ​ರಿ​ಕೆ​ಯೊ ಡ್ಡುತ್ತಿದ್ದ.

ಇದರಿಂದ ಆತಂಕಗೊಂಡ ಯುವತಿ ಮನೆ​ಯ​ಲ್ಲಿದ್ದ 218 ಗ್ರಾಂ ಚಿನ್ನಾ​ಭ​ರಣ, 75 ಸಾವಿರ ರು. ನಗದು ಕೊಟ್ಟಿ​ದ್ದಳು. ಇದೇ ವೇಳೆ, ಯುವತಿಯ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದ ಬ್ರಿಜ್‌ ಭೂಷಣ್‌ನ ಸ್ನೇಹಿತ ವಿವೇಕ್‌ ರೆಡ್ಡಿ 2019ರಲ್ಲಿ ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಚಾಟ್‌ ಮಾಡುತ್ತಿದ್ದ. ಬಳಿಕ ರಾಚೇ​ನ​ಹಳ್ಳಿ ಕೆರೆ ಬಳಿ ಕರೆ​ಸಿ​ಕೊಂಡು ಅಸ​ಭ್ಯ​ವಾಗಿ ನಡೆ​ದು​ಕೊ​ಂಡಿದ್ದ. ಒಮ್ಮೆ ಕರೆ ಮಾಡಿ 'ನಿನ್ನ ಖಾಸಗಿ ಫೋಟೋ' ಇದೆ ಎಂದು ಬೆದರಿಸಿದ್ದು ಬ್ಲಾಕ್‌ ಮೇಲ್ ಆರಂಭಿಸಿದ್ದ.‌

ಹಣ, ಒಡ​ವೆ ಕೊಡದಿದ್ದರೆ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡು​ತ್ತೇ​ನೆ ಎಂದು ಬೆದರಿಸಿದ್ದ. ಇದ​ರಿಂದ ಹೆದರಿದ ಸಂತ್ರಸ್ತೆ,​ ತ​ನ್ನ ಮಾವನ ಪತ್ನಿಯ ಮಾಂಗಲ್ಯ ಸರ ತಂದು ಕೊಟ್ಟಿ​ದ್ದಳು. ಆದರೂ ಆರೋಪಿ​ಗಳು ಪದೇ ಪದೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡು​ತ್ತಿದ್ದರು. ಇದ​ರಿಂದ ಬೇಸತ್ತ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Bangalore Two arrested for blackmailing girl of her nude pics. Blackmailers had demanded gold and cash from her after which the girl had given it to them.