ಬ್ರೇಕಿಂಗ್ ನ್ಯೂಸ್
07-12-21 07:15 pm HK Desk news ಕ್ರೈಂ
ಔರಂಗಬಾದ್, ಡಿ.7 : ತಮ್ಮ ಮಾತು ಮೀರಿ ಬೇರೊಬ್ಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ 21 ವರ್ಷದ ಯುವತಿಯನ್ನು ಆಕೆಯ ಅಪ್ರಾಪ್ತ ತಮ್ಮ ಮತ್ತು ತಾಯಿಯೇ ಸೇರಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹತ್ಯೆಗೊಳಗಾದ ಯುವತಿಯನ್ನು ಕೃತಿ ಎಂದು ಗುರುತಿಸಲಾಗಿದೆ. ಜೂನ್ 21ರಂದು ಈಕೆ ಅವಿನಾಶ್ ಥೋರ್ ಎಂಬಾತನನ್ನು ಮದುವೆಯಾಗಿದ್ದಳು. ಮದುವೆ ಬಳಿಕ ದಂಪತಿ ಗಾಯಗಾಂವ್ ಗ್ರಾಮದಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದರು. ಇದು ಯುವತಿ ಕುಟುಂಬದ ಸಿಟ್ಟಿಗೆ ಕಾರಣವಾಗಿತ್ತು.
ಈ ಬಗ್ಗೆ ಕೊಲ್ಲಲು ಪ್ಲಾನ್ ಹಾಕಿದ್ದ ಕೃತಿಯ ತಾಯಿ ಮತ್ತು ತಮ್ಮ ಆಕೆಯ ಮನೆಗೆ ಆಗಮಿಸಿದ್ದರು. ಅವರಿಗೆ ಟೀ ಮಾಡುತ್ತಿದ್ದ ವೇಳೆ ಆಕೆಯ ತಲೆಯನ್ನು ಹೊಡೆದು ಕತ್ತರಿಸಿದ್ದಾರೆ ಎನ್ನಲಾಗುತ್ತಿದೆ.
ಕೃತಿಯ ಹತ್ಯೆ ಮಾಡಿ, ಕತ್ತರಿಸಿದ ತಲೆಯ ಜೊತೆ ತಾಯಿ ಮತ್ತು ತಮ್ಮ ಸೆಲ್ಫಿ ಕ್ಲಿಕ್ಕಿಸಿಕೊಂಡು ಭೀಭತ್ಸವಾಗಿ ನಡೆದುಕೊಂಡಿದ್ದಾರೆ. ನಂತರ ಇಬ್ಬರು ಆರೋಪಿಗಳೂ ವೈಜಾಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಈ ನಡುವೆ, ಅವಿನಾಶ್ ಮನೆಗೆ ಹಿಂತಿರುಗಿದಾಗ ಅಡುಗೆ ಮನೆಯಲ್ಲಿ ತಲೆ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ನಿಯ ಶವ ಬಿದ್ದಿತ್ತು. ಪೊಲೀಸರಿಗೆ ವಿಷಯ ತಿಳಿಸುವಷ್ಟರಲ್ಲಿ ತಾಯಿಯದ್ದೇ ಕೃತ್ಯ ಎನ್ನುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
A 21-year-old woman was decapitated allegedly by her brother for tying the knot to a man without the assent of her family on Sunday, the police said. After decapitating the girl, who was according to report pregnant, Shobha Sanjay Mote (mother, aged 38) and Sanket Sanjay Mote (brother, aged 18) of the deceased victim allegedly dragged the victim's head and exhibited it before the neighbours.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm