ಬ್ರೇಕಿಂಗ್ ನ್ಯೂಸ್
07-12-21 10:54 pm HK Desk news ಕ್ರೈಂ
ಬೆಂಗಳೂರು, ಡಿ.8: ಎಟಿಎಂನಲ್ಲಿ ಹಣ ತುಂಬುತ್ತಿದ್ದ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಬೆಂಗಳೂರು ಹಾಗೂ ದುಬೈ ನಡುವಿನ ಭಾರೀ ದೊಡ್ಡ ಹವಾಲಾ ದಂಧೆಯನ್ನು ಪತ್ತೆ ಮಾಡಿದ್ದಾರೆ. ಪ್ರಕರಣದಲ್ಲಿ 3 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಹವಾಲಾ ದಂಧೆ ಪತ್ತೆಯಾಗಿದೆ.
ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಜಾಲ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆಯನ್ನು ಜಾರಿ ನಿರ್ದೇಶನಾಲಯ ಮತ್ತು ಐಟಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಸಾವಿರಾರು ಕೋಟಿ ಮೊತ್ತದ ಹವಾಲಾ ದಂಧೆ ಬೆಳಕಿಗೆ ಬಂದಿದೆ. ದುಬೈನಿಂದ ಬರುತ್ತಿದ್ದ ಸೂಚನೆ ಅನುಸರಿಸಿ, ಬೆಂಗಳೂರಿನಲ್ಲಿ ಸಕ್ರಿಯವಾಗಿರುವ ತಂಡಕ್ಕೆ ಲಕ್ಷ ಲಕ್ಷ ಹಣ ರವಾನೆಯಾಗುತ್ತಿತ್ತು. ಆ ಹಣವನ್ನು ಕೇರಳ ಮೂಲದವರ ಬ್ಯಾಂಕ್ ಖಾತೆಗಳಿಗೆ ಎಟಿಎಂಗಳಲ್ಲಿ ಇರುವ ಸಿಡಿಎಂ (ಕ್ಯಾಶ್ ಡೆಪಾಸಿಟ್ ಮಷಿನ್) ಯಂತ್ರಗಳ ಮೂಲಕ ತುಂಬಲಾಗುತ್ತಿತ್ತು. ಕೇವಲ 10 ಬ್ಯಾಂಕ್ ಖಾತೆಗಳಲ್ಲಿ 34 ಕೋಟಿ ರೂ. ವಹಿವಾಟು ನಡೆದಿರುವ ಸ್ಫೋಟಕ ಸಂಗತಿ ಬಯಲಿಗೆ ಬಂದಿದೆ.
ಪ್ರಕರಣ ಸಂಬಂಧಿಸಿ ವಹಿವಾಟು ನಡೆದಿರುವ ಸುಮಾರು 2684 ಬ್ಯಾಂಕ್ ಖಾತೆಗಳ ವಿವರ ನೀಡುವಂತೆ ಪೊಲೀಸರು ಸಂಬಂಧಪಟ್ಟ ಬ್ಯಾಂಕ್ ನವರಿಗೆ ಸೂಚನೆ ನೀಡಿದ್ದಾರೆ. ಬ್ಯಾಂಕುಗಳಲ್ಲಿ ನಡೆದಿರುವ ವಹಿವಾಟು ನೋಡಿದರೆ 3 ಸಾವಿರ ಕೋಟಿ ರೂ. ಅಧಿಕ ವಹಿವಾಟು ನಡೆದಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಎಟಿಎಂಗಳಲ್ಲಿ ಹಣ ತುಂಬುತ್ತಿದ್ದ ನಾಲ್ವರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರಿಯಾಜ್ ಎಂಬಾತ ದುಬೈನಲ್ಲಿ ಕೂತು ಹವಾಲಾ ದಂಧೆ ನಿರ್ವಹಣೆ ಮಾಡುತ್ತಿದ್ದ. ದಿನಕ್ಕೆ 40 ಲಕ್ಷ ರೂಪಾಯಿಯನ್ನು ಸಂಗ್ರಹಿಸಿ ಬ್ಲಾಕ್ ಮನಿಯನ್ನು ವಿವಿಧ ಖಾತೆಗಳಿಗೆ ಹೂಡಿಕೆ ಮಾಡುವ ಮೂಲಕ ವೈಟ್ ಮಾಡಿಸುತ್ತಿದ್ದ ವಿಚಾರವೂ ಬಯಲಾಗಿದೆ. ಇದೆಲ್ಲವನ್ನೂ ಕಿಂಗ್ ಪಿನ್ ರಿಯಾಜ್ ನಡೆಸುತ್ತಿದ್ದ ಎನ್ನೋದು ಬಯಲಾಗಿದೆ.
ಕೇರಳದ ವ್ಯಕ್ತಿಗಳಿಂದ ಹಣ ರವಾನೆ
ದುಬೈನಿಂದ ಆಪರೇಟ್ ಆಗುತ್ತಿರುವ ಈ ಬ್ಲಾಕ್ ಅಂಡ್ ವೈಟ್ ದಂಧೆ ಹಿಂದೆ ಬೇರೆ ಯಾರಿದ್ದಾರೆ ಎನ್ನೋದು ತನಿಖೆ ಆಗಬೇಕಿದೆ. ದುಬೈನಲ್ಲಿರುವ ವ್ಯಕ್ತಿಗಳ ಸೂಚನೆ ಮೇರೆಗೆ ಕೇರಳದ ವ್ಯಕ್ತಿಗಳಿಂದ ಹಣ ರವಾನೆ ಆಗುತ್ತಿತ್ತು. ಕೇರಳದಿಂದ ಬೆಂಗಳೂರಿಗೆ ರವಾನೆಯಾಗುತ್ತಿದ್ದ ಹಣವನ್ನು ವಿವಿಧ ವ್ಯಕ್ತಿಗಳು ಎಟಿಎಂ ಕೇಂದ್ರಗಳಲ್ಲಿ ಸುಮಾರು 25 ಬ್ಯಾಂಕ್ ಗಳ ಮೂಲಕ ಸಂಬಂಧಿಸಿದ 3000 ಬ್ಯಾಂಕ್ ಖಾತೆಗಳಿಗೆ ತುಂಬಲಾಗುತ್ತಿತ್ತು. ಹೀಗೆ ಅನೇಕ ವರ್ಷಗಳಿಂದ ಈ ದಂಧೆ ನಡೆಸಿಕೊಂಡು ಬರಲಾಗುತ್ತಿದೆ. ಎಟಿಎಂ ಕೇಂದ್ರಗಳಲ್ಲಿ ಹಣ ತುಂಬಲೆಂದೇ ನಾಲ್ವರು ಕೇರಳ ಮೂಲದ ಯುವಕರನ್ನು ಬೆಂಗಳೂರಿನಲ್ಲಿ ಮನೆ ಮಾಡಿಕೊಟ್ಟು ಇರಿಸಲಾಗಿತ್ತು. ಆ ಮನೆ ಮೇಲೆ ದಾಳಿ ಮಾಡಿದಾಗ 30 ಲಕ್ಷ ರೂ. ನಗದು ಹಣ ಮತ್ತು ಸುಮಾರು 3 ಸಾವಿರ ಬ್ಯಾಂಕ್ ಖಾತೆಗಳ ವಿವರ ಸಿಕ್ಕಿವೆ.
ತೆರಿಗೆ ವಂಚಿಸಿ ಈ ರೀತಿಯ ಬ್ಲಾಕ್ ಅಂಡ್ ವೈಟ್ ದಂಧೆ ಮಾಡುತ್ತಿದ್ದು, ಈ ಹಣ ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿತ್ತು? ದೇಶದ್ರೋಹಿ ಕೃತ್ಯಗಳಿಗೆ ಬಳಕೆಗೆ ಮಾಡಲಾಗುತ್ತಿತ್ತಾ? ಕೇರಳದಲ್ಲಿ ಮಾಡಿದರೆ ಸಿಕ್ಕಿ ಬೀಳಬಹುದೆಂಬ ಕಾರಣಕ್ಕೆ ಬೆಂಗಳೂರನ್ನು ಸೆಂಟರ್ ಮಾಡಿಕೊಂಡಿದ್ದರಾ? ಈ ರೀತಿಯ ಜಾಲದ ಹಿಂದೆ ಉಗ್ರವಾದಿ ಸಂಘಟನೆಗಳ ಕೈವಾಡ ಇದೆಯಾ ಎನ್ನುವ ಅನುಮಾನಗಳಿದ್ದು ವಹಿವಾಟು ದೊಡ್ಡ ಮಟ್ಟದಲ್ಲಿ ಹಬ್ಬಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಡಿ ಅಧಿಕಾರಿಗಳಿಂದ ತನಿಖೆ
ಮೇಲ್ನೋಟಕ್ಕೆ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದ ಲಿಂಕ್ ಹೊಂದಿದ್ದು ಹೀಗಾಗಿ ಇಡಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಹಣ ದುಬೈನಿಂದ ಯಾರು ಕಳುಹಿಸುತ್ತಿದ್ದರು. ದುಬೈನಿಂದ ಹವಾಲಾ ಮೂಲಕ ಕೇರಳ ತಲುಪುತ್ತಿದ್ದ ಹಣ ಬೆಂಗಳೂರಿಗೆ ಹೇಗೆ ಬರ್ತಿತ್ತು? ಇದರಲ್ಲಿ ಶಾಮೀಲಾಗಿರುವ ದೊಡ್ಡ ಕುಳಗಳು ಯಾವುವು ಎಂಬುದನ್ನು ಇಡಿ ಅಧಿಕಾರಿಗಳೇ ಬಯಲಿಗೆ ಎಳೆಯಬೇಕಿದೆ.
Hawala to Dubai from Bangalore, three arrested more than three thousand crores hawala found. The arrested we're working in depositing money to ATM machines in Kerala.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm