ಬ್ರೇಕಿಂಗ್ ನ್ಯೂಸ್
10-12-21 01:06 pm HK Desk news ಕ್ರೈಂ
ಉಡುಪಿ, ಡಿ.10 : ಹಾಡು ಹೇಳುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ಆಗಮಿಸಿದ್ದ ಮೂವರು ವ್ಯಕ್ತಿಗಳು ಮಹಿಳೆಗೆ ಮಂಕುಬೂದಿ ಎರಚಿ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿದ ಘಟನೆ ಕಡಪಾಡಿಯಲ್ಲಿ ನಡೆದಿದೆ.
ಕಟಪಾಡಿ ಏಣಗುಡ್ಡೆ ಗ್ರಾಮದ ಮುಸ್ಲಿಂ ಮಹಿಳೆಯ ಮನೆಗೆ ಬಂದಿದ್ದ ಮೂವರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ. ಉತ್ತರ ಕರ್ನಾಟಕ ಮೂಲದ ಫಕೀರರಂತೆ ವೇಷ ಧರಿಸಿ, ಕೈಯಲ್ಲಿ ದೊಡ್ಡ ಜೋಳಿಗೆ, ಕೊರಳಲ್ಲಿ ಸರಗಳನ್ನು ಧರಿಸಿಕೊಂಡು ಹಾಡು ಹೇಳುತ್ತಾ ಮನೆಯತ್ತ ಬಂದಿದ್ದಾರೆ. ಮನೆಯ ಹೊರಗೆ ಓಡಾಡಿ, ಮನೆಯಾಕೆ ಹೊರಗೆ ಬರುತ್ತಲೇ ಆಕೆಯ ಮೇಲೆ ಬೂದಿ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿದ್ದರು.
ಮಹಿಳೆಗೆ ಏನೋ ಮಂಕು ಬಡಿದಂತಾಗಿದ್ದು, ಮೈಮೇಲಿನ ಚಿನ್ನಾಭರಣ ಮತ್ತು ಮನೆಯಲ್ಲಿದ್ದ ನಗದನ್ನು ಆಕೆಯೇ ತಂದುಕೊಟ್ಟಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ನಕಲಿ ವ್ಯಕ್ತಿಗಳು ಅಲ್ಲಿಂದ ಕಾಲ್ಕಿತ್ತಿದ್ದು, ಪರಾರಿಯಾಗಿದ್ದಾರೆ. ಮಹಿಳೆಗೆ ಕೆಲವು ಕ್ಷಣಗಳ ವರೆಗೆ ಪ್ರಜ್ಞೆ ತಪ್ಪಿದಂತಾಗಿದ್ದು, ಬಳಿಕ ಎಚ್ಚರಗೊಂಡಾಗ ನಿಜ ವಿಚಾರ ಅರಿವಿಗೆ ಬಂದಿದೆ. ಮಹಿಳೆ ಈ ಬಗ್ಗೆ ಕಾಪು ಪೊಲೀಸರಿಗೆ ದೂರು ನೀಡಿದ್ದು, ಆಗಂತುಕರು ಕಟಪಾಡಿ ಆಸುಪಾಸಿನಲ್ಲಿ ಓಡಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆ ಪ್ರಜ್ಞೆ ತಪ್ಪಿದ ವೇಳೆ ಆಗಂತುಕರೇ ಕೊರಳಲ್ಲಿದ್ದ ಚಿನ್ನದ ಸರ ಮತ್ತು ಮನೆಯೊಳಗಿಂದ ನಗದನ್ನು ದೋಚಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಂಬಿಕಸ್ಥನಂತೆ ನಟಿಸಿ ಮೊಬೈಲ್ ಎಗರಿಸಿದ
ಕಟಪಾಡಿಯಲ್ಲಿ ಇದೇ ಸಂದರ್ಭದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಆದಿಶಕ್ತಿ ಫರ್ಟಿಲೈಸರ್ಸ್ ಎಂಬ ಅಂಗಡಿಗೆ ಬಂದಿದ್ದ ವ್ಯಕ್ತಿಯೊಬ್ಬ ಗ್ರಾಹಕನ ಸೋಗಿನಲ್ಲಿ ಅಂಗಡಿ ಮಾಲಕನ ಮೊಬೈಲನ್ನೇ ಎಗರಿಸಿದ್ದಾನೆ. ಅಂಗಡಿಯಲ್ಲಿ ಒಂದು ಸಾವಿರ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿ, ಮಾಲಕರ ಬಳಿ ನಂಬಿಕಸ್ಥನಂತೆ ವರ್ತಿಸಿದ್ದ ವ್ಯಕ್ತಿ ಆಬಳಿಕ ತನ್ನ ವಾಟ್ಸಪ್ ನಂಬರ್ ಸ್ವಲ್ಪ ಸರಿಯಿಲ್ಲ. ಮೆಡಿಕಲ್ ನಿಂದ ಮದ್ದು ತರಲು ವೈದ್ಯರ ಚೀಟಿಯನ್ನು ತರಿಸುತ್ತೇನೆಂದು ಹೇಳಿ ಅಂಗಡಿ ಮಾಲದ ಉದಯ ಶೆಟ್ಟಿಯ ಮೊಬೈಲ್ ಪಡೆದಿದ್ದ.
ಬಳಿಕ ಔಷಧಿ ಚೀಟಿಯನ್ನು ಅಂಗಡಿ ಮಾಲಕರ ಮೊಬೈಲಿಗೆ ತರಿಸಿಕೊಂಡು, ಅದನ್ನು ಮೆಡಿಕಲ್ ನಲ್ಲಿ ತೋರಿಸಿ ಔಷಧಿ ತೆಗೆದುಕೊಂಡು ಬರುತ್ತೇನೆಂದು ಹೋಗಿದ್ದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಆಗಂತುಕ ವ್ಯಕ್ತಿ ನಂಬಿಕಸ್ಥನ ರೀತಿ ವರ್ತಿಸಿದ್ದು, ಅಂಗಡಿ ಮಾಲಕನ 18 ಸಾವಿರ ಮೌಲ್ಯದ ಮೊಬೈಲನ್ನು ಎಗರಿಸಿದ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
Udupi Three men who came singing song throw powder on woman and loot gold, flee from spot. A case has been registered at Kapu Police Station and the police are investigating the case.
06-01-25 09:41 pm
Bengaluru Correspondent
Chamarajanagar, Heart Attack School Student:...
06-01-25 06:53 pm
Bangalore Suicide, Software engineer family:...
06-01-25 02:03 pm
HMPV virus Karnataka, Guidelines: ಹೆಚ್ಎಂಪಿವ...
06-01-25 01:39 pm
ಬೆಂಗಳೂರಿನಲ್ಲಿ ಎರಡು ಶಿಶುಗಳಲ್ಲಿ ಎಚ್ಎಂಪಿವಿ ವೈರಸ್...
06-01-25 01:04 pm
05-01-25 09:41 pm
HK News Desk
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
06-01-25 08:29 pm
Mangalore Correspondent
Beary community, convention, Mangalore: ಬ್ಯಾ...
06-01-25 08:04 pm
Naxal Surrender, Vikram Gowda, Mangalore: ವಿಕ...
06-01-25 03:59 pm
Mangalore, Kotekar Samaja Seva Sahakari Sangh...
05-01-25 10:51 pm
Dr Na DSouza passes, Death, Mangalore: ಖ್ಯಾತ...
05-01-25 10:16 pm
06-01-25 05:37 pm
HK News Desk
Mangalore Robbery, Singari Beedi owner, Crime...
04-01-25 11:31 am
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm