ಬ್ರೇಕಿಂಗ್ ನ್ಯೂಸ್
10-12-21 02:42 pm HK Desk news ಕ್ರೈಂ
ಮಂಗಳೂರು, ಡಿ.10 : ಅರೆಕಾಲಿಕ ಉದ್ಯೋಗದ ಬೆನ್ನುಬಿದ್ದ ವ್ಯಕ್ತಿಯೊಬ್ಬ ಅಪರಿಚಿತ ವ್ಯಕ್ತಿಯ ಸಂದೇಶ ನಂಬಿ, ಬರೋಬ್ಬರಿ 5.31 ಲಕ್ಷ ರೂಪಾಯಿ ಕಳಕೊಂಡ ಘಟನೆ ಬಗ್ಗೆ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಯಿಂದ ನ.26ರಂದು ಪಾರ್ಟ್ ಟೈಮ್ ಉದ್ಯೋಗಕ್ಕೆ ನೀವು ಆಯ್ಕೆಯಾಗಿದ್ದೀರೆಂದು ಮೊಬೈಲಿಗೆ ಮೆಸೇಜ್ ಬಂದಿತ್ತು. ಅದರ ಜೊತೆಗೆ ಒಂದು ಲಿಂಕ್ ಕೂಡ ಇತ್ತು. ಸಂದೇಶದ ಬೆನ್ನುಹತ್ತಿದ ಮಂಗಳೂರಿನ ವ್ಯಕ್ತಿ, ಆಬಳಿಕ ಅಪರಿಚಿತನ ಜೊತೆಗೆ ವಾಟ್ಸಪ್ ನಲ್ಲಿ ಚಾಟಿಂಗ್ ಮಾಡಿದ್ದು, ಉದ್ಯೋಗದ ಬಗ್ಗೆ ಮಾಹಿತಿ ಕೇಳಿದ್ದರು.
ಉದ್ಯೋಗ ಹೇಗಿರುತ್ತದೆ, ಯಾವ ರೀತಿ ನೀವು ಮನೆಯಲ್ಲೇ ಇದ್ದು ಕೆಲಸ ಮಾಡಬಹುದು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನೀವು ವೆಬ್ ನಲ್ಲಿ ನಿಮ್ಮದೇ ಖಾತೆ ತೆರೆಯಬೇಕು ಎಂದಿದ್ದ ಅಪರಿಚಿತ. ಅದಕ್ಕಾಗಿ ಟೆಲಿಗ್ರಾಂ ಲಿಂಕ್ ಒಂದನ್ನು ಕಳುಹಿಸಿದ್ದ. ಆನಂತರ, ಆತ ಹೇಳಿದ ರೀತಿಯಲ್ಲೇ ಟೆಲಿಗ್ರಾಂ ಲಿಂಕ್ ತೆರೆದು ಅಲ್ಲಿ ಹೊಸತಾಗಿ ಐಡಿ, ಪಾಸ್ ವರ್ಡ್ ಹಾಕಿ ಖಾತೆ ಓಪನ್ ಮಾಡಿದ್ದಾರೆ.
ವೆಬ್ ಸೈಟ್ ಮೂಲಕ ಆನ್ಲೈನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿ, ಕಮಿಷನ್ ಪಡೆದುಕೊಳ್ಳಬಹುದು. ನೇರವಾಗಿ ಯಾವುದೇ ವಸ್ತುಗಳನ್ನು ಖರೀದಿಸಲು ಅವಕಾಶ ಇರುತ್ತದೆ. ಆದರೆ, ಅದಕ್ಕಾಗಿ ಮೊದಲಿಗೆ ನೀವು ನಿಮ್ಮ ಬ್ಯಾಂಕ್ ಖಾತೆಗಳ ಬಗ್ಗೆ ಲಿಂಕ್ ಮಾಡಿಕೊಳ್ಳಬೇಕು ಎಂದಿದ್ದಾನೆ. ಅದರಂತೆ, ಅಪರಿಚಿತ ಕಳುಹಿಸಿದ್ದ ಕ್ಯೂ ಆರ್ ಕೋಡ್ ಲಿಂಕ್ ಮೂಲಕ ಬ್ಯಾಂಕ್ ಖಾತೆಗಳನ್ನು ವ್ಯಕ್ತಿ ಲಿಂಕ್ ಮಾಡಿದ್ದರು. ಅದರ ನಂತರ, ಹಂತ ಹಂತವಾಗಿ ಹಣ ಖಾತೆಯಿಂದ ಹೋಗಿದ್ದು, ಬರೋಬ್ಬರಿ 5.31 ಲಕ್ಷ ರೂಪಾಯಿ ಹಣ ವರ್ಗಾವಣೆಯಾಗಿತ್ತು.
ಹಣ ಕಳೆದುಕೊಂಡ ಬಗ್ಗೆ ಅಪರಿಚಿತ ವ್ಯಕ್ತಿಯ ಬಳಿ ಕೇಳಿದರೆ, ಉತ್ತರ ಇರಲಿಲ್ಲ. ಗಾಬರಿಗೊಂಡ ಹಣ ಕಳಕೊಂಡ ವ್ಯಕ್ತಿ ಮಂಗಳೂರಿನ ಉರ್ವಾದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Man looses around 5.31 lakhs trusting fake job offer which was sent via telegram link. A case has been registered at the Cyber crime police station in Urwa.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm