ಬ್ರೇಕಿಂಗ್ ನ್ಯೂಸ್
14-09-20 04:20 pm Headline Karnataka News Network ಕ್ರೈಂ
ಚಿಕ್ಕಮಗಳೂರು, ಸೆಪ್ಟಂಬರ್ 14: ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ದನಗಳ್ಳರ ಅಟ್ಟಹಾಸವನ್ನು ಕಿರುತೆರೆ ನಟ ರವಿತೇಜ ಬಿಚ್ಚಿಟ್ಟಿದ್ದಾರೆ. ರಾತ್ರೋರಾತ್ರಿ ಪಿಕಪ್ ವಾಹನಗಳಲ್ಲಿ ಬಂದು ರಸ್ತೆಯಲ್ಲಿ ಮಲಗುತ್ತಿದ್ದ ದನಗಳನ್ನು ಹಿಡಿದು ವಾಹನಕ್ಕೆ ತುಂಬಿಸುತ್ತಿದ್ದಾಗ, ರವಿತೇಜ ಮತ್ತು ಆತನ ಗೆಳೆಯರು ತಡೆಯಲು ಹೋಗಿದ್ದು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ರೂ ಅವರು ಕ್ಯಾರ್ ಮಾಡಿಲ್ಲವೆಂದು ಅಲ್ಲಿಂದಲೇ ರವಿತೇಜ ಫೇಸ್ಬುಕ್ ಲೈವ್ ಬಂದು ನೋವು ಹೇಳಿಕೊಂಡಿದ್ದಾರೆ.
ಮೂಡಿಗೆರೆಯವರೇ ಆಗಿರುವ ಕಿರುತೆರೆ ನಟ ರವಿತೇಜ, ಶೂಟಿಂಗ್ ಸ್ಪಾಟ್ ಸ್ಥಳ ವೀಕ್ಷಣೆಗೆ ಹೋಗಿ ಹಿಂತಿರುಗುತ್ತಿದ್ದಾಗ ಕಿಡಿಗೇಡಿಗಳ ಕೃತ್ಯ ಕಂಡು ತಡೆಯಲು ಹೋಗಿದ್ದಾರೆ. ಆದರೆ, ಪಿಕಪ್ ವಾಹನ ನಿಲ್ಲಿಸದೆ ಪರಾರಿಯಗಲು ಯತ್ನಿಸಿದ್ದಲ್ಲದೆ ರವಿತೇಜ ವಾಹನಕ್ಕೆ ಡಿಕ್ಕಿಯಾಗಿದ್ದಾರೆ. ಅಲ್ಲದೆ, ತಲವಾರಿನಿಂದ ರವಿತೇಜ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ನಡುರಾತ್ರಿಯಲ್ಲಿ ಮೂಡಿಗೆರೆ ಪೇಟೆಯಿಂದಲೇ ಫೇಸ್ಬುಕ್ ಲೈವ್ ಮಾಡಿದ ರವಿತೇಜ, ಐದಾರು ಮಂದಿ ಸೇರಿ ನನಗೆ ತಲವಾರಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಕೈಗೆ ಮತ್ತು ತಲೆಗೆ ಪೆಟ್ಟಾಗಿದೆ. ಸ್ವಲ್ಪದರಲ್ಲಿ ಬಚಾವಾಗಿದ್ದೇನೆ. ಬದುಕಿ ಉಳಿದಿದ್ದೇ ಹೆಚ್ಚು. ಈ ಬಗ್ಗೆ ಮೂಡಿಗೆರೆ ಪೊಲೀಸರಿಗೆ ಹೇಳಿದ್ರೂ ಕ್ಯಾರ್ ಮಾಡಿಲ್ಲ. ಇಲ್ಲಿನ ಹಿಂದು ಸಾಮ್ರಾಟರು ಎಲ್ಲಿದ್ದಾರೆ. ಹಿಂದು ಹಿಂದು ಎಂದು ಭಾಷಣ ಮಾಡೋರಿಗೆ ಇದು ಕಾಣಿಸೋಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಪಾಪದ ದನಗಳನ್ನು ಕದ್ದು ಸಾಗಿಸುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಿ. ನಾವು ನಂಬರ್ ನೋಟ್ ಮಾಡಿದ್ದೇವೆ. ಕೆಎ 18 - 0821 ನಂಬರಿನ ಪಿಕಪ್ ವಾಹನದಲ್ಲಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ. ಮೂಡಿಗೆರೆಯನ್ನು ಈ ದನಗಳ್ಳರಿಂದ ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.
Join our WhatsApp group for latest news updates
video
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
27-09-26 10:59 am
HK News Desk
ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ; ವಿದ್ಯಾರ್...
26-09-26 08:05 pm
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm