ಆಫ್ರಿಕಾದ ಪ್ರಜೆಗೆ ನಕಲಿ RTPCR ವರದಿ ನೀಡಿ ಸಹಕಾರ ; ನಾಲ್ವರ ಬಂಧನ

14-12-21 04:21 pm       HK Desk news   ಕ್ರೈಂ

ದಕ್ಷಿಣ ಆಫ್ರಿಕಾ ಪ್ರಜೆಗೆ ಕೋವಿಡ್ ಪರೀಕ್ಷೆ ನಕಲಿ‌ ವರದಿ ನೀಡಿ, ಪರಾರಿಯಾಗಲು ಸಹಕರಿಸಿದ್ದ ಆರೋಪದಲ್ಲಿ ನಾಲ್ವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಡಿ. 14: ದಕ್ಷಿಣ ಆಫ್ರಿಕಾ ಪ್ರಜೆಗೆ ಕೋವಿಡ್ ಪರೀಕ್ಷೆ ನಕಲಿ‌ ವರದಿ ನೀಡಿ, ಪರಾರಿಯಾಗಲು ಸಹಕರಿಸಿದ್ದ ಆರೋಪದಲ್ಲಿ ನಾಲ್ವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರಜೆ ನಗರಕ್ಕೆ ‌ವಿಮಾನದಲ್ಲಿ‌ ಬಂದಿದ್ದರು.

ನಿಲ್ದಾಣದಲ್ಲಿ‌ ಪರೀಕ್ಷೆ ನಡೆಸಿದಾಗ, ಆತನಿಗೆ‌ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿತ್ತು. ಪ್ರಜೆಯನ್ನು ನಗರದ ಹೋಟೆಲೊಂದರ ಕೊಠಡಿಯಲ್ಲಿ‌ ಇರಿಸಲಾಗಿತ್ತು. 14 ದಿನ ಕೊಠಡಿ ‌ಬಿಟ್ಟು ಹೋಗದಂತೆ ತಾಕೀತು ಮಾಡಿದ್ದರು.

ಆದರೆ, ಹೋಟೆಲ್‌ ಸಿಬ್ಬಂದಿಗೆ‌ ನಕಲಿ ವರದಿ ತೋರಿಸಿ ದಕ್ಷಿಣ ಆಫ್ರಿಕಾ‌ ಪ್ರಜೆ ನಗರದಿಂದ‌ ಪರಾರಿಯಾಗಿದ್ದಾರೆ. ತನಿಖೆ‌ ಕೈಗೊಂಡಿದ್ದ ಪೊಲೀಸರು, ನಕಲಿ ವರದಿ ನೀಡಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಕೊರೊನಾ ಪಾಸಿಟಿವ್ ಬಂದ 24 ಗಂಟೆಯಲ್ಲಿ ಎರಡು ಕಡೆ ಪರೀಕ್ಷೆ ಮಾಡಿಸಿದ್ದ, ಈ ಸಂಬಂಧ ಎಸ್‌ಆರ್‌ ಲ್ಯಾಬ್ ಪಾಸಿಟಿವ್ ವರದಿ ನೀಡಿದರೆ, ಸಿಂಜಿನ್ ಲ್ಯಾಬ್ ನೆಗೆಟಿವ್ ವರದಿ ನೀಡಿದೆ. ಈ ಹಿನ್ನೆಲೆ ನಕಲಿ ಕೋವಿಡ್ ವರದಿ ನೀಡಿರುವ ಲ್ಯಾಬ್ ಸಿಬ್ಬಂದಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಅಲ್ಲದೇ ಜಯನಗರದಲ್ಲಿರುವ ಲ್ಯಾಬ್‌ಗೆ ಪೊಲೀಸರು ನೋಡಿಸ್ ನೀಡಿದ್ದಾರೆ.

ಈತ 32 ಗಂಟೆಗಳಲ್ಲಿ ಎರಡು ಕಡೆ ಪರೀಕ್ಷೆ ಮಾಡಿಸಿದ್ದು, ಈ ವೇಳೆ ನಕಲಿ ನೆಗೆಟಿವ್ ವರದಿ ಪಡೆದು ತಾನು ತಂಗಿದ್ದ ಹೋಟೆಲ್‌ನಿಂದ ಎಸ್ಕೇಪ್ ಆಗಿದ್ದ. ಪ್ರಕರಣದ ವಿವರ; 66 ವರ್ಷದ ಸೋಂಕಿತ ವ್ಯಕ್ತಿಯ ಮಾದರಿಯನ್ನು 20/11/2021ರಂದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಡೆಯಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ತೋರಿಸಿಯೇ ವ್ಯಕ್ತಿ ವಿಮಾನ ಹತ್ತಿದ್ದು, ದುಬೈ ಮೂಲಕ ಬೆಂಗಳೂರಿಗೆ ಆಗಮಿಸಿದ್ದ. ಓಮಿಕ್ರಾನ್ ಅಪಾಯದಿಂದ ಪಾರಾಗಬೇಕೇ, ಮೊದಲು ಪ್ರಜೆಗಳಿಗೆ ಲಸಿಕೆ ನೀಡಿ: WHO ಓಮಿಕ್ರಾನ್ ಅಪಾಯದಿಂದ ಪಾರಾಗಬೇಕೇ, ಮೊದಲು ಪ್ರಜೆಗಳಿಗೆ ಲಸಿಕೆ ನೀಡಿ: WHO

ದಕ್ಷಿಣ ಆಫ್ರಿಕಾದಿಂದ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಪ್ರಯಾಣ ಆರಂಭಿಸಿದ್ದ. ಬೆಂಗಳೂರಿನ ಕೆಐಎನಲ್ಲಿ ಸ್ಕ್ರೀನಿಂಗ್ ಮತ್ತು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿತ್ತು. ನವೆಂಬರ್ 20ರಂದು ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ವ್ಯಕ್ತಿಯ ವರದಿ ಪಾಸಿಟಿವ್ ಬಂದಿತ್ತು. ಸೋಂಕಿತ ಇದ್ದ ಹೋಟೆಲ್‌ಗೆ ವೈದ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಆದರೆ ಯಾವುದೇ ರೋಗ ಲಕ್ಷಣಗಳ ಪತ್ತೆ ಆಗಿರಲಿಲ್ಲ. ಐಸೋಲೇಷನ್‌ನಲ್ಲಿ ಇರುವಂತೆ ಸಲಹೆ ನೀಡಲಾಗಿತ್ತು.

ನವೆಂಬರ್ 22ರಂದು ಮಾದರಿಯನ್ನು ಬಿಬಿಎಂಪಿ ಮೂಲಕ ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಸೋಂಕಿತ ವ್ಯಕ್ತಿ ನವೆಂಬರ್ 23ರಂದು ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿದಾಗ ವರದಿ ನಗೆಟಿವ್ ಬಂದಿತ್ತು. ಇದರಿಂದಾಗಿ ವರದಿ ಬಗ್ಗೆ ಹಲವು ಗೊಂದಲಗಳಿವೆ. ಆದ್ದರಿಂದ ಕರ್ನಾಟಕ ಸರ್ಕಾರ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಓಮಿಕ್ರಾನ್ ರೂಪಾಂತರಿ ಸೋಂಕು ಪತ್ತೆಯಾದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ 24 ಜನರಿದ್ದರು. ಅವರಿಗೆ ಯಾವುದೇ ರೋಗದ ಲಕ್ಷಣವಿಲ್ಲ, ಎಲ್ಲರ ವರದಿ ನೆಗೆಟಿವ್ ಬಂದಿದೆ.

ಎರಡನೇ ಹಂತದ ಸಂಪರ್ಕದಲ್ಲಿದ್ದ ಎಲ್ಲಾ 240 ಜನರ ಮಾದರಿ ಸಂಗ್ರಹ ಮಾಡಿ ಪರೀಕ್ಷೆ ಮಾಡಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಆಗಿದೆ. ಸೋಂಕಿತ ವ್ಯಕ್ತಿ ನವೆಂಬರ್ 27ರಂದು ಮಧ್ಯರಾತ್ರಿ ವಿಮಾನ ನಿಲ್ದಾಣಕ್ಕೆ ಕ್ಯಾಬ್‌ನಲ್ಲಿ ಆಗಮಿಸಿ, ದೆಹಲಿಗೆ ಪ್ರಯಾಣ ಮಾಡಿದ್ದಾರೆ. ಅಲ್ಲಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾನೆ. ಓಮಿಕ್ರಾನ್ ಸೋಂಕಿತ ಮತ್ತೊಬ್ಬ 44 ವರ್ಷದ ವ್ಯಕ್ತಿ ಬೆಂಗಳೂರು ನಗರದಲ್ಲಿಯೇ ಇದ್ದು, ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿದ್ದಾರೆ.


 

4 arrested in Karnataka for allegedly giving a fraudulent RT-PCR report to a South African national who was later verified to be India's first Omicron case. In the latest development, four people were arrested in Karnataka for allegedly giving a fraudulent RT-PCR report to a South African national who was later verified to be India's first Omicron patient. After creating a fake negative RT-PCR report, the quarantined patient was able to flee the country via Dubai.