ಬ್ರೇಕಿಂಗ್ ನ್ಯೂಸ್
23-12-21 12:46 pm Mangalore Correspondent ಕ್ರೈಂ
ಮಂಗಳೂರು, ಡಿ.23 : ಮೊಬೈಲ್ ಕದ್ದ ನೆಪದಲ್ಲಿ ಮೀನುಗಾರ ಕಾರ್ಮಿಕನನ್ನು ತಲೆಕೆಳಗಾಗಿಸಿ ನೇತು ಹಾಕಿ ಹಲ್ಲೆ ನಡೆಸಿದ ಕೃತ್ಯದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ಜಿಲ್ಲೆಯ ಕೊಂಡೂರು ಪೋಲಯ್ಯ(23), ಅವುಲ ರಾಜಕುಮಾರ್(26), ಪ್ರಕಾಶಂ ಜಿಲ್ಲೆಯ ಕಾಟಂಗರಿ ಮನೋಹರ್ (21), ವೂಟುಕೋರಿ ಜಾಲಯ್ಯ(30), ನೆಲ್ಲೂರು ಜಿಲ್ಲೆಯ ಕರಪಿಂಗಾರ ರವಿ(27), ಪ್ರಲಯ ಕಾವೇರಿ ಗೋವಿಂದಯ್ಯ(47) ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನ ದಕ್ಕೆಯಲ್ಲಿ ಜೋನ್ ಶೈಲೇಶ್ -2 ಎಂಬ ಹೆಸರಿನ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದರು.
ಡಿ.15ರಂದು ರಾತ್ರಿ ಆರೋಪಿಗಳಿದ್ದ ಬೋಟಿಗೆ ತೆರಳಿದ್ದ ಪ್ರಕಾಶಂ ಜಿಲ್ಲೆಯ ನಿವಾಸಿ ವೈಲ ಶೀನು ಎಂಬಾತ ಬಳಿಕ ಸ್ವಲ್ಪ ಹೊತ್ತಿನ ಬಳಿಕ ಮರಳಿದ್ದು, ತಾನು ಕೆಲಸ ಮಾಡುವ ಬೋಟಿನಲ್ಲಿ ಮಲಗಿದ್ದ. ಮರುದಿನ ಬೆಳಗ್ಗೆ ಆರೋಪಿಗಳ ಪೈಕಿ ಒಬ್ಬಾತನ ಮೊಬೈಲ್ ಕಳವಾಗಿದ್ದನ್ನು ತಿಳಿದು ಅದನ್ನು ವೈಲ ಶೀನುವೇ ತೆಗೆದಿದ್ದಾನೆಂದು ನಂಬಿ, ಆತನನ್ನು ಹಿಡಿದು ತಾವಿದ್ದ ಬೋಟಿಗೆ ಕರೆತಂದಿದ್ದರು. ಬಳಿಕ ವೈಲ ಶೀನುವಿಗೆ ಹಲ್ಲೆ ನಡೆಸಿ, ಬಾಯಿಗೆ ಬಟ್ಟೆ ತುರುಕಿ ಕಾಲುಗಳನ್ನು ಕಟ್ಟಿ, ಹಗ್ಗದಿಂದ ಬೋಟಿನ ಮೇಲ್ಭಾಗದ ಕೊಕ್ಕೆಗೆ ಸಿಕ್ಕಿಸಿದ್ದರು.
ಆನಂತರ, ಮರದ ಸಲಾಕೆ, ಕಬ್ಬಿಣದ ಸರಪಳಿಯಿಂದ ಹಲ್ಲೆ ನಡೆಸಿ, ಮೊಬೈಲ್ ಎಲ್ಲಿಟ್ಟಿದ್ದೀಯಾ ಹೇಳು ಎಂದು ಬೆದರಿಸಿದ್ದಾರೆ. ಅಲ್ಲದೆ, ಯುವಕನನ್ನು ಕೈಕಾಲು ಕಟ್ಟಿ ಸಮುದ್ರಕ್ಕೆ ಎಸೆದು ಕೊಲೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ, ಈ ವೇಳೆ ಇತರೇ ಸಾರ್ವಜನಿಕರು ಬಂದು ವೈಲ ಶೀನುವನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಡಿ.21ರಂದು ಅಪಹರಣ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಇದೇ ವೇಳೆ, ತಲೆ ಕೆಳಗಾಗಿಸಿ ಹಲ್ಲೆ ನಡೆಸಿದ್ದ ವಿಡಿಯೋ ಹೊರಬಂದಿದ್ದು, ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಮೀನು ಕಾರ್ಮಿಕನ ತಲೆ ಕೆಳಗಾಗಿಸಿ ನೇತು ಹಾಕಿ ದೌರ್ಜನ್ಯ ; ಮಂಗಳೂರಿನ ದಕ್ಕೆಯಲ್ಲಿ ತಾಲಿಬಾನ್ ಕೃತ್ಯ !
Six accused were arrested regarding the case where a fisherman was hung upside down from a crane in Bunder area in the city and tortured. The arrested are Konduru Polayya (23), Avula Raj Kumar (26), Kaatangari Manohar (21), Vutukori Jalayya (30), Karpingari Ravi (27) and Pralaya Kaveri Govindayya (47). All hail from Andhra Pradesh. The victim in the horrific incident is Vaila Sheenu, a member of the fishermen community from Andhra Pradesh.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm