ಬ್ರೇಕಿಂಗ್ ನ್ಯೂಸ್
25-12-21 10:19 pm HK Desk news ಕ್ರೈಂ
ಪುತ್ತೂರು, ಡಿ.25 : ಸೇನಾಧಿಕಾರಿ ಸೋಗಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಉಪ್ಪಿನಂಗಡಿಯ ತರಕಾರಿ ವ್ಯಾಪಾರಸ್ಥರೊಬ್ಬರನ್ನು ಯಾಮಾರಿಸಲು ಯತ್ನಿಸಿದ ಘಟನೆ ನಡೆದಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಬಳಿಯ ತರಕಾರಿ ವ್ಯಾಪಾರಿಗೆ ವ್ಯಕ್ತಿಯೊಬ್ಬ ವಾಟ್ಸಪ್ ಕರೆ ಮಾಡಿದ್ದು, ತನ್ನ ಹೆಸರನ್ನು ಅಮನ್ ಕುಮಾರ್ ಎಂದು ಹೇಳಿಕೊಂಡಿದ್ದಾನೆ. ಹಿಂದಿಯಲ್ಲಿ ಮಾತನಾಡಿದ್ದ ವ್ಯಕ್ತಿ ತಾನು ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿಯೇ 5 ಕಿಮೀ ಹತ್ತಿರದಲ್ಲಿ ಸೇನಾ ಕ್ಯಾಂಪ್ ಮಾಡಿದ್ದೇವೆ. ಅಲ್ಲಿಗೆ ತರಕಾರಿ ಅಗತ್ಯವಿದ್ದು ಕಳುಹಿಸಿಕೊಡಬಹುದಾ ಎಂದು ಕೇಳಿದ್ದಾನೆ. ಅದಕ್ಕೆ ವ್ಯಾಪಾರಿ ಒಪ್ಪಿದ್ದು, ಲಿಸ್ಟ್ ಕಳುಹಿಸಲು ಹೇಳಿದ್ದಾರೆ. ಹಿಂದಿಯಲ್ಲೇ ಬರೆದಿದ್ದ ಲಿಸ್ಟ್ ಅನ್ನು ಕಳುಹಿಸಿದ್ದಾನೆ. ತರಕಾರಿಯ ಪ್ರಮಾಣ ಹೆಚ್ಚಿದ್ದು, ಅದನ್ನು ಹೇಗಾದ್ರೂ ತುಂಬಿಸಿ ಕೊಡುತ್ತೇನೆ ಎಂದು ವ್ಯಾಪಾರಿ ತಿಳಿಸಿದ್ದಾರೆ.
ಆಬಳಿಕ ಕರೆ ಮಾಡಿದ್ದ ವ್ಯಕ್ತಿ ಸೇನೆಯಲ್ಲಿ ಕ್ಯಾಶ್ ಕೊಡುವ ಪದ್ಧತಿ ಇಲ್ಲ. ನಿಮ್ಮ ಬಿಲ್ಲನ್ನು ಬ್ಯಾಂಕ್ ಖಾತೆಗೆ ಕಳುಹಿಸುತ್ತೇವೆ. ಬ್ಯಾಂಕ್ ಖಾತೆಯ ವಿವರ ಕಳಿಸಿಕೊಡಿ ಎಂದಿದ್ದಾನೆ. ತರಕಾರಿ ವ್ಯಾಪಾರಿ ತನ್ನ ಬ್ಯಾಂಕ್ ಖಾತೆಯ ಮಾಹಿತಿಯನ್ನೂ ನೀಡಿದ್ದಾರೆ. ನೀವು ತರಕಾರಿ ರೆಡಿ ಮಾಡಿಸಿ, ನಾವು ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದಿದ್ದಾನೆ. ಅದರಂತೆ ವ್ಯಾಪಾರಿ ತರಕಾರಿಯನ್ನು ರೆಡಿ ಮಾಡಿ, ಬಿಲ್ ಕಳುಹಿಸಿದ್ದಾರೆ. ಬಿಲ್ ಪಾವತಿಗೆ ಸೇನಾಧಿಕಾರಿಯ ಸೋಗಿನ ವ್ಯಕ್ತಿ ಒಪ್ಪಿದ್ದು, ಅದಕ್ಕಾಗಿ ನೀವೊಂದು ಓಟಿಪಿ ನಂಬರ್ ನೀಡಬೇಕೆಂದು ಕೇಳಿದ್ದಾನೆ.
ಇದರಿಂದ ಸಂಶಯಗೊಂಡ ತರಕಾರಿ ವ್ಯಾಪಾರಿ ಸ್ಥಳೀಯರಾದ ಉಪ್ಪಿನಂಗಡಿ ಗ್ರಾಪಂ ಸದಸ್ಯರೊಬ್ಬರ ಬಳಿ ಈ ಬಗ್ಗೆ ಹೇಳಿದ್ದಾರೆ. ಯಾವುದೇ ಖಾತೆಗೆ ಹಣ ಹಾಕಲು ಓಟಿಪಿ ನಂಬರ್ ನೀಡುವ ಪದ್ಧತಿ ಇಲ್ಲವೆಂದು ಅವರು ಹೇಳಿದ್ದು, ಓಟಿಪಿ ನಂಬರ್ ನೀಡದಂತೆ ಸೂಚಿಸಿದ್ದಾರೆ. ಈ ರೀತಿಯಲ್ಲಿ ಬ್ಯಾಂಕ್ ಖಾತೆಯ ವಿವರ ಪಡೆದು ಓಟಿಪ್ ನಂಬರ್ ಕಳುಹಿಸಿ, ಖಾತೆಯಿಂದಲೇ ಹಣವನ್ನು ಲಪಟಾಯಿಸಲು ಯತ್ನಿಸುತ್ತಾರೆ ಎಂಬ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಸೇನಾಧಿಕಾರಿ ಎಂದು ಹೇಳಿದರೆ ವಿಶೇಷ ಗೌರವ ಇದ್ದು, .ಜನರು ಕೂಡ ನಂಬುತ್ತಾರೆ ಎಂಬ ಹಿನ್ನೆಲೆಯಲ್ಲಿ ವಂಚಕರು ಹೊಸ ದಾರಿ ಕಂಡುಕೊಂಡಿದ್ದಾರೆ. ಸೇನಾಧಿಕಾರಿ ಹೆಸರಲ್ಲಿ ಕರೆ ಮಾಡಿ, ಯಾಮಾರಿಸಲು ಯತ್ನಿಸುತ್ತಿದ್ದಾರೆ.
An attempt to cheat a vegetable vendor was made by a person who claimed himself to be an army officer. At the time of bill payment, he obtained bank account details and then tried to cheat the person by trying to collect OTP number from him. This incident happened in Uppinangady in the taluk.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 11:07 pm
HK News Desk
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm