ಬ್ರೇಕಿಂಗ್ ನ್ಯೂಸ್
26-12-21 01:10 pm Mangalore Correspondent ಕ್ರೈಂ
ಮಂಗಳೂರು, ಡಿ.26 : ಕ್ರಿಸ್ತಿಯನ್ ಹುಡುಗಿಯನ್ನು ಮದುವೆಯಾಗುವುದಾಗಿ ನಂಬಿಸಿ, ಡ್ರಗ್ಸ್ ಕೊಟ್ಟು ಲೈಂಗಿಕವಾಗಿ ದುರ್ಬಳಕೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ನೊಂದ ಹುಡುಗಿಯ ತಾಯಿ ಮಂಗಳೂರಿನ ವಿಶ್ವ ಹಿಂದು ಪರಿಷತ್ ಮುಖಂಡರಿಗೆ ರಕ್ಷಣೆಗೆ ಮನವಿ ಮಾಡಿದ್ದಾರೆ.
ಯುವತಿ ಮಂಗಳೂರಿನ ಬಿಜೈ ನಿವಾಸಿಯಾಗಿದ್ದು ಆಕೆಯನ್ನು ಕಾಟಿಪಳ್ಳದ ಕೃಷ್ಣಾಪುರ ನಿವಾಸಿ ಮಹಮ್ಮದ್ ಶರೀಫ್ ಸಿದ್ದಿಕ್ ಎಂಬಾತ ಕಳೆದ ಮೂರು ವರ್ಷಗಳಿಂದ ದುರುಪಯೋಗ ಮಾಡುತ್ತಿದ್ದಾನೆ ಎಂದು ದೂರಲಾಗಿದೆ. ಸಿದ್ದಿಕ್ ಮಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಆಗಿದ್ದು ಹಲವಾರು ಕೇಸು ಎದುರಿಸುತ್ತಿದ್ದಾನೆ ಎನ್ನಲಾಗಿದೆ.
ಯುವತಿ ಅಲೋಶಿಯಸ್ ಕಾಲೇಜಿನಲ್ಲಿ ಕಾಲೇಜು ಮುಗಿಸಿದ್ದು ಅಲ್ಲಿಯೇ ಡ್ರಗ್ಸ್ ಚಟ ಹತ್ತಿಸಿಕೊಂಡಿದ್ದಳು. ಆನಂತರ ಡ್ರಗ್ಸ್ ಇಲ್ಲದೆ ಬದುಕುವುದೇ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಡ್ರಗ್ಸ್ ಚಟಕ್ಕೆ ಬಿದ್ದಿದ್ದಳು. ನಡುರಾತ್ರಿಯಲ್ಲಿ ಬೈಕಿನಲ್ಲಿ ಬರುವ ಯುವಕರು ಯುವತಿಯನ್ನು ಕರೆದೊಯ್ಯುತ್ತಿದ್ದು ಆಬಳಿಕ ಹಲವು ದಿನಗಳ ಕಾಲ ಇಟ್ಟುಕೊಳ್ಳುತ್ತಿದ್ದರು. ಮಗಳು ಎಲ್ಲಿದ್ದಾಳೆ ಎನ್ನುವುದು ತಿಳಿಯದೆ ಹೆತ್ತವರು ಆತಂಕಕ್ಕೆ ಒಳಗಾಗುತ್ತಿದ್ದರು. ಮಗಳ ಈ ರೀತಿಯ ನಡತೆಯಿಂದ ತೀವ್ರ ಬೇಸತ್ತಿದ್ದ ತಂದೆ ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿ ಸಾವು ಕಂಡಿದ್ದರು.

ಯುವತಿ ತನ್ನನ್ನು ಸಿದ್ದಿಕ್ ಮದುವೆಯಾಗುವುದಾಗಿ ಹೇಳುತ್ತಿದ್ದು ಅದೇ ಭ್ರಮೆಯಲ್ಲಿ ಆತನ ಜೊತೆ ತಿರುಗಾಡುತ್ತಿದ್ದಾಳೆ. ಈ ಬಗ್ಗೆ ಯುವತಿಯ ತಾಯಿ ಕ್ರಿಸ್ತಿಯನ್ ಧರ್ಮಗುರುಗಳಿಗೂ ದೂರು ನೀಡಿದ್ದಾರೆ. ಅಲ್ಲದೆ, ಉರ್ವಾ ಠಾಣೆಯಲ್ಲಿ ದೂರನ್ನೂ ನೀಡಿದ್ದಾರೆ.
ಮಹಮ್ಮದ್ ಸಿದ್ದಿಕ್ ಈಗಾಗಲೇ ಎರಡು- ಮೂರು ಮದುವೆಯಾಗಿದ್ದಾನೆ ಎನ್ನುವ ಮಾಹಿತಿಗಳಿವೆ. ಅಲ್ಲದೆ, ಮಂಗಳೂರು ಮತ್ತು ಕೊಡಗಿನಲ್ಲಿ ಡ್ರಗ್ಸ್ ಪೂರೈಸುತ್ತಿರುವ ವಹಿವಾಟು ನಡೆಸುತ್ತಿದ್ದಾನೆ ಎಂದು ವಿಶ್ವ ಹಿಂದು ಪರಿಷತ್ ನಾಯಕರು ಆರೋಪಿಸಿದ್ದಾರೆ. ಕೂಡಲೇ ಆರೋಪಿಯನ್ನು ಬಂಧಿಸಿ, ಡ್ರಗ್ಸ್ ಸೆಕ್ಸ್ ಜಿಹಾದಿಗೆ ಬಲಿಯಾಗಿರುವ ಯುವತಿಗೆ ನ್ಯಾಯ ಕೊಡಿಸಬೇಕೆಂದು ವಿಹಿಂಪ ನಾಯಕ ಶರಣ್ ಪಂಪ್ವೆಲ್ ಒತ್ತಾಯಿಸಿದ್ದಾರೆ.
Mangalore Christian girl cheated of Love and sex victims mother approaches VHP for help.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm