ಬ್ರೇಕಿಂಗ್ ನ್ಯೂಸ್
15-09-20 07:39 pm Headline Karnataka News Network ಕ್ರೈಂ
ಆಲಪ್ಪುಳ, ಸೆಪ್ಟೆಂಬರ್15: ಸೆಲ್ಫಿ ಹುಚ್ಚಿನಿಂದ ಏನೆಲ್ಲ ದುರಂತ ಎದುರಾದ್ರೂ ಜನರು ಎಚ್ಚತ್ತುಕೊಂಡಿಲ್ಲ. ಇಲ್ಲೊಬ್ಬಳು ತಾಯಿ, ಬೀಚ್ ನಲ್ಲಿ ನಿಂತು ಮಗುವಿನ ಜೊತೆ ಸೆಲ್ಫೀ ಕ್ಲಿಕ್ಕಿಸಲು ಹೋಗಿ ಮಗುವನ್ನೇ ಕಳಕೊಂಡಿದ್ದಾಳೆ. ತಾಯಿಯ ಸೆಲ್ಫೀ ಹುಚ್ಚಿನಿಂದಾಗಿ ಕೈನಲ್ಲಿ ಹಿಡಿದುಕೊಂಡಿದ್ದ ಎರಡು ವರ್ಷದ ಮಗು ಸಮುದ್ರಪಾಲಾದ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ.
ಭಾನುವಾರ ಸಂಜೆ ಘಟನೆ ನಡೆದಿದ್ದು ಪೊಲೀಸರು ಮತ್ತು ಸ್ಥಳೀಯರ ಹುಡುಕಾಟದ ಬಳಿಕ ಮಗುವಿನ ಶವ ಎರಡು ದಿನಗಳ ನಂತರ ಆಲಪ್ಪುಳದ ಗೆಲಿಲಿಯೋ ಬೀಚ್ ನಲ್ಲಿ ಪತ್ತೆಯಾಗಿದೆ. ಮೃತ ಮಗುವಿನ ಹೆಸರು ಅಧಿಕೃಷ್ಣ ಎಂದು ದಿ ಹಿಂದು ಪತ್ರಿಕೆ ವರದಿ ಮಾಡಿದೆ. ತಟರಕ್ಷಣಾ ಪಡೆ ಮತ್ತು ಸ್ಥಳೀಯ ಮೀನುಗಾರರು ಪತ್ತೆ ಕಾರ್ಯಾಚರಣೆ ನಡೆಸಿದ್ದರು.
ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ತನ್ನಿಬ್ಬರು ಮಕ್ಕಳು ಮತ್ತು ಸದರನ ಇನ್ನೊಂದು ಮಗುವಿನ ಜೊತೆ ಬೀಚ್ ನೋಡಲು ಬಂದಿದ್ದರು. ಸಮುದ್ರ ಅಬ್ಬರ ಹೆಚ್ಚಿದ್ದರಿಂದ ಅಲ್ಲಿನ ಸೆಕ್ಯುರಿಟಿ ಬೀಚ್ ಹೋಗದಂತೆ ತಡೆಯುತ್ತಿದ್ದ. ಆದರೆ ತಾಯಿ, ಮಕ್ಕಳು ಸೆಕ್ಯುರಿಟಿಯ ಕಣ್ಣು ತಪ್ಪಿಸಿ ಅಲ್ಲಿನ ಇಎಸ್ಐ ಆಸ್ಪತ್ರೆಯ ಎಡೆಯಿಂದ ನುಸುಳಿಕೊಂಡು ಬೀಚ್ ನತ್ತ ಬಂದಿದ್ದರು. ಬೀಚ್ ನಲ್ಲಿ ಮಕ್ಕಳ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ಬೃಹತ್ ಅಲೆಯೊಂದು ಎದ್ದು ಬಂದಿದ್ದು ತಾಯಿ, ಮಕ್ಕಳು ಬ್ಯಾಲೆನ್ಸ್ ತಪ್ಪಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ, ದೂರದಲ್ಲಿ ನಿಂತಿದ್ದ ಸಂಬಂಧಿಕನೊಬ್ಬ ಓಡಿ ಬಂದು ಮಹಿಳೆ ಮತ್ತು ಆರು ಮತ್ತು ಏಳು ವರ್ಷದ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಎರಡೂವರೆ ವರ್ಷದ ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಒಂದು ಕ್ಷಣದ ಮೈಮರೆವು ಮಗುವನ್ನು ಬಲಿ ತೆಗೆದುಕೊಂಡಿತ್ತು.
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
27-09-26 10:59 am
HK News Desk
ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ; ವಿದ್ಯಾರ್...
26-09-26 08:05 pm
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm