ಬ್ರೇಕಿಂಗ್ ನ್ಯೂಸ್
02-01-22 09:12 pm HK Desk news ಕ್ರೈಂ
ಬೆಂಗಳೂರು, ಜ.2 : ಎಸ್ಕೇಪ್ ಕಾರ್ತಿಕ್ ಎಂದೇ ಹೆಸರಾಗಿರುವ ಕುಖ್ಯಾತ ಕಳ್ಳತನ ಆರೋಪಿ ಕಾರ್ತಿಕ್ ಕುಮಾರ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಮತ್ತೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
17ನೇ ಬಾರಿಗೆ ಪೊಲೀಸರಿಂದ ಬಂಧನ ಆಗಿರುವ ಕಾರ್ತಿಕ್, ಈ ಬಾರಿ 5 ಕಳವು ಪ್ರಕರಣಗಳನ್ನು ಬಾಯಿಬಿಟ್ಟಿದ್ದಾನೆ. ಈಗಾಗ್ಲೇ ಕಾರ್ತಿಕ್ 80 ಕಳ್ಳತನ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಈಗ ಆತನ ಬಳಿಯಿಂದ 11.43 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಬಲೆಗೆ ಬಿದ್ದರೂ, ಓಡಿ ತಪ್ಪಿಸಿಕೊಳ್ಳುವಲ್ಲಿ ನಿಷ್ಣಾತನಾಗಿರುವ ಕಾರ್ತಿಕ್ ನನ್ನು ಎಸ್ಕೇಪ್ ಕಾರ್ತಿಕ್ ಎಂದೇ ಪೊಲೀಸರು ಗುರುತಿಸುತ್ತಾರೆ. ಬೆಂಗಳೂರು, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾರ್ತಿಕ್ ವಿರುದ್ಧ ಪ್ರಕರಣ ದಾಖಲಾಗಿವೆ. ತನ್ನ 16ನೇ ವರ್ಷದಲ್ಲಿ ಮೊದಲ ಬಾರಿಗೆ ಚಿನ್ನಾಭರಣ ಕಳವು ಮಾಡಿದ್ದ ಕಾರ್ತಿಕ್ ವಿರುದ್ಧ ಮೊದಲ ಪ್ರಕರಣ ದಾಖಲಾಗಿತ್ತು. ಆನಂತರ ಕದಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದ ಕಾರ್ತಿಕ್, ಪೊಲೀಸರ ಬಲೆಗೆ ಬಿದ್ದರೂ ಜಾಮೀನಿನಲ್ಲಿ ಹೊರಬಂದಾಗಲೂ ಕಳವು ಕೃತ್ಯ ಮಾಡುತ್ತಿದ್ದ.
2008ರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕಾರ್ತಿಕ್, ಅಲ್ಲಿಂದ ಆಹಾರ ವಿತರಣೆಗೆ ಬಂದಿದ್ದ ವ್ಯಾನಲ್ಲೇ ಪರಾರಿಯಾಗಿದ್ದ. 45 ದಿನಗಳ ಬಳಿಕ ಪೊಲೀಸರು ಆತನನ್ನು ಪತ್ತೆಹಚ್ಚಿ ಬಂಧಿಸಿದ್ದರು. 2010ರಲ್ಲಿ ಪ್ರಕರಣ ಒಂದರಲ್ಲಿ ಪೊಲೀಸರು ಸ್ಥಳ ಮಹಜರಿಗೆ ಒಯ್ದಿದ್ದಾಗ ಅಲ್ಲಿಂದ ತಪ್ಪಿಸಿಕೊಂಡು ಓಡಿ ಪರಾರಿಯಾಗಿದ್ದ. ಓಡುವುದು, ಮರ, ಕಟ್ಟಡ ಹತ್ತುವುದು, ಎತ್ತರದಿಂದ ಹಾರುವುದರಲ್ಲಿ ತುಂಬ ಚತುರನಾಗಿದ್ದ ಕಾರ್ತಿಕನ್ನು ಬೆನ್ನಟ್ಟಿ ಹಿಡಿಯುವುದು ಪೊಲೀಸರಿಗೆ ಸಾಧ್ಯವಾಗುತ್ತಿರಲಿಲ್ಲ.
ಎರಡು ವರ್ಷದ ಹಿಂದೆ ಮನೆ ಕಳ್ಳತನ ಪ್ರಕರಣದಲ್ಲಿ ಜನರ ಕೈಗೆ ಸಿಕ್ಕಿಬಿದ್ದಿದ್ದ ಕಾರ್ತಿಕ್ ಒದೆ ತಿಂದು ಹಣ್ಣುಗಾಯಿ ಆಗಿದ್ದ. ದೊಣ್ಣೆಯಲ್ಲಿ ಹೊಡೆದಿದ್ದರಿಂದ ಕೈ ಮುರಿತಕ್ಕೊಳಗಾಗಿ ತೀವ್ರ ಗಾಯಗೊಂಡಿದ್ದ. ಆನಂತರ ತನ್ನ ಗೆಳತಿಯ ಸೋದರನಿಂದಲೇ ಚೂರಿ ಇರಿತಕ್ಕೆ ಒಳಗಾಗಿದ್ದ. ಇದರಿಂದಾಗಿ ಕಾರ್ತಿಕ್ ಹಿಂದಿನಂತೆ ಚಿಗರೆಯ ರೀತಿ ಓಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ ಪೊಲೀಸರು.
Karthik Kumar alias Escape Karthik, who is notorious for escaping from the police is arrested by the western police of the city. He has 80 cases of theft on him. Police have cracked five cases after the arrest of Karthik for the 17th time. Golden ornaments worth Rs 11.43 lac is confiscated from him. He was successful in escaping from police custody two times in the past.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm