ಮದುವೆಯಾಗುವುದಾಗಿ ನಂಬಿಸಿ ವಂಚನೆ ; ಯುವತಿಯಿಂದ ದೂರು, ಕುಂಬಳೆ ಪಂಚಾಯತ್ ನೌಕರ ಬಂಧನ 

03-01-22 10:54 pm       Mangalore Correspondent   ಕ್ರೈಂ

ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಬಗ್ಗೆ ಯುವತಿಯೊಬ್ಬಳು ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ‌

Photo credits : Headline Karnataka

ಮಂಜೇಶ್ವರ, ಜ.3 : ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಬಗ್ಗೆ ಯುವತಿಯೊಬ್ಬಳು ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ‌

ಕುಂಬಳೆ ಗ್ರಾಮ ಪಂಚಾಯತ್ ನೌಕರ, ಹೊಸಂಗಡಿ ಬಳಿಯ ಪಜಿಂಗಾರು ನಿವಾಸಿ ಅಭಿಜಿತ್ ಎಂ.ಆರ್. (28) ಬಂಧಿತ ಆರೋಪಿ. ಹಲವು ಸಮಯಗಳಿಂದ ಯುವತಿಯನ್ನು ಪ್ರೀತಿಸುವ ನಾಟಕವಾಡಿದ್ದ ಅಭಿಜಿತ್ ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ್ದ. ಇಬ್ಬರೂ ಒಂದೇ ಜಾತಿಯವರಾಗಿದ್ದು ಇವರಿಬ್ಬರ ಪ್ರೀತಿ ಸಂಬಂಧ ಸಂಬಂಧಿಕರಿಗೂ ತಿಳಿದಿತ್ತು. 

ಆದರೆ ಇತ್ತೀಚಿಗೆ ತಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಲ್ಲದೆ, ಬೇರೆ ಹುಡುಗಿ ನೋಡಿದ್ದಾಗಿ ತಿಳಿಸಿದ್ದ. ಇದರಿಂದ ಬೇಸತ್ತ ಹುಡುಗಿ ಮನೆಯವರು ಹುಡುಗನಿಗೆ ಬುದ್ಧಿ ಹೇಳಿ, ಮದುವೆಯಾಗಲು ತಿಳಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಮಾತುಕತೆಯೂ ನಡೆದಿತ್ತು. ನಡುವೆ ಪೊಲೀಸ್ ದೂರು ದಾಖಲಾಗುತ್ತದೆ ಎಂದು ಮದುವೆಗೆ ಒಪ್ಪಿಗೆ ನೀಡಿದ್ದ ಎನ್ನಲಾಗಿದೆ. ಆದರೆ ಮದುವೆ ಆಗದೇ ಸತಾಯಿಸಿದ ಕಾರಣ ಯುವತಿ ಮೂಲಕ ಮನೆಯವರು ಕುಂಬಳೆ ಠಾಣೆಯಲ್ಲಿ ಕೇಸು ದಾಖಲು ಮಾಡಿಸಿದ್ದಾರೆ. ಪೊಲೀಸರು ಸೋಮವಾರ ಆರೋಪಿ ಯುವಕನನ್ನು ಅರೆಸ್ಟ್ ಮಾಡಿದ್ದು ಮಂಗಳವಾರ ಕೋರ್ಟಿಗೆ ಹಾಜರು ಪಡಿಸಲಿದ್ದಾರೆ. ಅತ್ಯಾಚಾರ ಸೇರಿದಂತೆ ಹಲವು ಸೆಕ್ಷನ್ ಅಡಿ ಕೇಸು ದಾಖಲಾಗಿದೆ.

Manjeshwar Man cheats of marriage case filed, arrested by Kumble police. The arrested has been identified as Abijith (28).