ಬ್ರೇಕಿಂಗ್ ನ್ಯೂಸ್
04-01-22 02:28 pm HK Desk news ಕ್ರೈಂ
ಬುಂಡಿ(ರಾಜಸ್ಥಾನ್), ಜ.4 : ಇತ್ತೀಚೆಗೆ ನಾಪತ್ತೆಯಾಗಿದ್ದ 16 ವರ್ಷದ ಬಾಲಕಿ ಅತ್ಯಾಚಾರಗೈದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರಕರಣದಲ್ಲಿ ಪೋಸ್ಟ್ ಮಾರ್ಟಂ ನಡೆಸಿರುವ ಅಧಿಕಾರಿಗಳು ಆಘಾತಕಾರಿ ವರದಿಯನ್ನು ತೆರೆದಿಟ್ಟಿದ್ದಾರೆ. ಆರೋಪಿಗಳು ಬಾಲಕಿಯನ್ನು ಕತ್ತು ಹಿಸುಕಿ ಕೊಲೆಗೈದ ಬಳಿಕವೂ ಶವದ ಮೇಲೆ ಮೃಗೀಯವಾಗಿ ಸಂಭೋಗ ನಡೆಸಿದ್ದಾರೆ ಎಂದು ಆಟೋಪ್ಸಿ ವರದಿ ಹೇಳಿದೆ.
ಡಿ.23ರಂದು ಆಡು ಮೇಯಿಸುತ್ತಿದ್ದ 16 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಮೂವರು ಸೇರಿ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ, ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯ ಶಾಲಿನಿಂದಲೇ ಕತ್ತು ಹಿಸುಕಿ ಕೊಲೆಗೈದಿದ್ದು, ಆಬಳಿಕ ಮೂವರು ಸೇರಿ ಶವದ ಮೇಲೆ ಮೃಗೀಯವಾಗಿ ವರ್ತಿಸಿದ್ದಾರೆ. ಗುಪ್ತಾಂಗದಲ್ಲಿ 30ಕ್ಕೂ ಹೆಚ್ಚು ಗಾಯಗಳ ಗುರುತು ಕಂಡುಬಂದಿದ್ದು, ದೇಹದ ಇತರ ಭಾಗದಲ್ಲೂ ಕಿರುಕುಳ ನೀಡಿರುವ ಗಾಯಗಳಿದ್ದವು.
ನಾಪತ್ತೆಯಾದ ಮರುದಿನವೇ ಬಾಲಕಿಯ ಶವ ಗುಡ್ಡದಲ್ಲಿ ಪತ್ತೆಯಾಗಿತ್ತು. ಪೊಲೀಸರು ವಶಕ್ಕೆ ಪಡೆದು ಪೋಸ್ಟ್ ಮಾರ್ಟಂ ನಡೆಸಲು ಏರ್ಪಾಡು ಮಾಡಿದ್ದರು. ಬಾಲಕಿ ಕಿರುಚಾಡಿದ್ದಕ್ಕೆ ಆಕೆಯ ದುಪ್ಪಟ್ಟಾದಿಂದಲೇ ಕತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು ಅನ್ನೋದು ಪೋಸ್ಟ್ ಮಾರ್ಟಂ ವರದಿಯಲ್ಲಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬುಂಡಿ ಜಿಲ್ಲೆಯ ಎಸ್ಪಿ ಜೈ ಯಾದವ್, ನನ್ನ ಜೀವಮಾನದಲ್ಲಿ ಈ ರೀತಿಯ ಮೃಗೀಯ ವರ್ತನೆಯನ್ನು ನೋಡಿದ್ದಿಲ್ಲ. ಅತ್ಯಂತ ಭೀಕರವಾಗಿ ವರ್ತಿಸಿ ಕೊಂದು ಹಾಕಿದ್ದಾರೆ. ಬುಂಡಿ ಜಿಲ್ಲೆಯ ಬಾರ್ ಅಸೋಸಿಯೇಶನ್ ಸದಸ್ಯ ವಕೀಲರು ತಾವು ಯಾರು ಕೂಡ ಆರೋಪಿ ಪರ ವಕಾಲತ್ತು ನಡೆಸುವುದಿಲ್ಲ ಎಂದಿದ್ದಾಗಿ ತಿಳಿಸಿದ್ದಾರೆ.
A post-mortem revealed that the girl who went missing in Bundi last month had been raped even after her death by three men. The autopsy report of the 16-year-old girl, who had gone missing on December 23 and later was found to have been raped and murdered in Rajasthan’s Bundi, revealed that the accused continued to rape her even after her death.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm