ಬ್ರೇಕಿಂಗ್ ನ್ಯೂಸ್
08-01-22 02:08 pm HK Desk news ಕ್ರೈಂ
ಚಿತ್ರದುರ್ಗ, ಜ.8 : ಪತ್ನಿಯನ್ನು ತಾನೇ ಕೊಂದು ತನ್ನ ಮಲಗುವ ಮಂಚದಡಿಯಲ್ಲೇ ಹೂತು ಹಾಕಿ, ಪತ್ನಿ ನಾಪತ್ತೆಯಾಗಿದ್ದಾಳೆಂದು ಪೊಲೀಸ್ ದೂರು ನೀಡಿ ಸ್ಥಳೀಯರು ಮತ್ತು ಸಂಬಂಧಿಕರನ್ನು ಯಾಮಾರಿಸಿದ ಪಾತಕಿ ಪತಿರಾಯನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಕೋಣನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಆರೋಪಿ ನಾರಪ್ಪ ಎಂಬಾತ ಬಂಧಿತ. ಕಳೆದ ಡಿ.25ರಂದು ತನ್ನ ಪತ್ನಿ ಕಾಣೆಯಾಗಿದ್ದಾಗಿ ನಾರಪ್ಪ ಎರಡು ದಿನ ಬಿಟ್ಟು ಭರಮಸಾಗರ ಠಾಣೆಯಲ್ಲಿ ದೂರು ನೀಡಿದ್ದ. ಪತ್ನಿ ಸುಮಾ ಮನೆಯಿಂದ ಕಾಣೆಯಾಗಿರುವ ಬಗ್ಗೆ ಆಕೆಯ ಹೆತ್ತವರಿಗೂ ತಿಳಿಸಿದ್ದ. ಅದರಂತೆ, ಸುಮಾ ತಂದೆ ಜಿಲ್ಲೆಯ ಹಲವಾರು ಕಡೆ ಹುಡುಕಾಟ ನಡೆಸಿದ್ದರು. ಆನಂತರ ಪೊಲೀಸರನ್ನು ಸಂಪರ್ಕಿಸಿ, ತನ್ನ ಅಳಿಯನ ಬಗ್ಗೆಯೇ ಶಂಕೆ ಇರುವುದಾಗಿ ತಿಳಿಸಿದ್ದರು.
ಆರು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಐದು ವರ್ಷದ ಮಗು ಇದೆ, ಆದರೂ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಎಂದು ತಂದೆ ನೀಡಿದ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದರು. ಅದರಂತೆ, ಪೊಲೀಸರು ಸ್ಥಳೀಯರನ್ನು ವಿಚಾರಣೆ ನಡೆಸಿದ್ದಾರೆ. ಸ್ಥಳೀಯರು ಸುಮಾ ಜೊತೆ ಡಿ.25ರಂದು ರಾತ್ರಿ ಮಾತನಾಡಿರುವ ಬಗ್ಗೆ ಹೇಳಿದ್ದರು. ಅಲ್ಲದೆ, ಈ ನಡುವೆ ನಾರಪ್ಪ ತನ್ನ ಮನೆಗೆ ಸಿಮೆಂಟ್, ಒಂದಷ್ಟು ಕಲ್ಲುಗಳನ್ನು ತಂದಿದ್ದ ಬಗ್ಗೆಯೂ ಮಾಹಿತಿ ನೀಡಿದ್ದರು.
ಈ ಬಗ್ಗೆ ಪೊಲೀಸರು ನಾರಪ್ಪನನ್ನು ಪ್ರಶ್ನೆ ಮಾಡಿದ್ದು, ಜೋಳವನ್ನು ಮುಚ್ಚಿಡಲು ಹೊಂಡ ಮಾಡಿದ್ದೆ. ಅದನ್ನು ಸರಿಪಡಿಸಲು ಸಿಮೆಂಟ್ ತಂದಿದ್ದಾಗಿ ಹೇಳಿಕೆ ನೀಡಿದ್ದ. ಆದರೆ ಪೊಲೀಸರು ಮತ್ತೆ ಆತನನ್ನು ಠಾಣೆಗೆ ಬರುವಂತೆ ಹೇಳಿದಾಗ, ತನ್ನ ಮೊಬೈಲ್ ಆಫ್ ಮಾಡಿ ತಪ್ಪಿಸಿಕೊಂಡಿದ್ದ. ಹೀಗಾಗಿ ಪೊಲೀಸರು ಎರಡು ದಿನ ಬಿಟ್ಟು ನೇರವಾಗಿ ಆತನ ಮನೆಗೆ ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಆತ ಮಲಗುವ ಕೋಣೆಯ ಮಂಚದಡಿಯಲ್ಲಿ ಸಿಮೆಂಟ್ ಕೆಲಸ ನಡೆದಿರುವುದು ಕಂಡುಬಂದಿದ್ದು, ಅದನ್ನು ಸಂಶಯದಿಂದ ಅಗೆದು ನೋಡಿದಾಗ ಸುಮಾಳನ್ನು ಕೊಂದು ಹೂತು ಹಾಕಿರುವುದು ಬೆಳಕಿಗೆ ಬಂದಿದೆ.
ಡಿ.25ರಂದು ರಾತ್ರಿ ನಾರಪ್ಪನೇ ಪತ್ನಿಯನ್ನು ಕೊಂದು ತನ್ನ ಮನೆಯ ಕೊಠಡಿಯಲ್ಲೇ ಹೂತು ಹಾಕಿದ್ದು, ಮರುದಿನವೇ ಆಕೆ ನಾಪತ್ತೆಯಾಗಿದ್ದಾಗಿ ಕತೆ ಕಟ್ಟಿದ್ದ. ಪೊಲೀಸರು, ಸಂಬಂಧಿಕರು, ಸ್ಥಳೀಯರು ಎಲ್ಲರನ್ನೂ ಸುಳ್ಳಿನ ಕತೆ ಹೇಳಿ ಯಾಮಾರಿಸಿದ್ದ. ಆದರೆ ಪೊಲೀಸರು ಸಕಾಲಿಕ ಸುಳಿವು ಆಧರಿಸಿ, ಬೆನ್ನತ್ತಿದಾಗ ನಾರಪ್ಪನ ನಿಜ ಬಣ್ಣ ಬಯಲಿಗೆ ಬಂದಿದೆ.
A man who was claiming to have been searching for his 'missing' wife has been arrested by the police for allegedly killing her, burying her body under a cot at home, and then misleading the locals and the police. The incident was reported from Konanur village. The accused Narappa allegedly killed his wife Suma.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
28-06-26 09:38 pm
HK News Staffer
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am