ಬ್ರೇಕಿಂಗ್ ನ್ಯೂಸ್
09-01-22 02:30 pm Hk Desk, Bengaluru ಕ್ರೈಂ
ಬೆಂಗಳೂರು, ಜ.9: ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಬ್ಲ್ಯಾಕ್ ಮೇಲ್ ನಡೆಸಿರುವ ಪ್ರಕರಣ ಸಂಬಂಧಿಸಿ ದಕ್ಷಿಣ ಕನ್ನಡ ಮೂಲದ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಪುತ್ರ ರಾಹುಲ್ ಭಟ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ನಿಶಾಂತ್ ಮೊಬೈಲ್ ನಂಬರಿಗೆ ಅಪರಿಚಿತರು ವಿಡಿಯೋ ಕಳುಹಿಸಿದ್ದು, ಅದರಲ್ಲಿ ಯುವತಿಯ ಜೊತೆ ನಿಶಾಂತ್ ಇರುವ ರೀತಿ ಬಿಂಬಿಸಲಾಗಿತ್ತು. ವಿಡಿಯೋವನ್ನು ಮುಂದಿಟ್ಟು ಬ್ಲಾಕ್ ಮೇಲ್ ಮಾಡಿದ್ದು, ಒಂದು ಕೋಟಿ ನೀಡುವಂತೆ ಅಪರಿಚಿತರು ಬೇಡಿಕೆ ಇರಿಸಿದ್ದರು. ಹಣ ನೀಡದೇ ಇದ್ದರೆ ಟಿವಿ ಮಾಧ್ಯಮಕ್ಕೆ ನೀಡುವುದಾಗಿ ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ತಂದೆಯ ಸೂಚನೆಯಂತೆ ಡಿ.26ರಂದು ನಿಶಾಂತ್ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.


ಪ್ರಕರಣ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಚಂದ್ರಶೇಖರ ಸ್ವಾಮೀಜಿಯ ಪುತ್ರ ರಾಹುಲ್ ಭಟ್ ನನ್ನು ಬಂಧಿಸಿದ್ದಾರೆ. ಇದೇ ವೇಳೆ, ಗೋವಾದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಈ ಹಿಂದೆ ಸಚಿವರೊಬ್ಬರ ಪಿಎ ಆಗಿದ್ದ ವ್ಯಕ್ತಿ ಎನ್ನುವ ಮಾಹಿತಿಯಿದೆ. ಅಲ್ಲದೆ, ಈ ಜಾಲದಲ್ಲಿ ಶಾಸಕರೊಬ್ಬರ ಪುತ್ರಿ ಇದ್ದಾಳೆ ಎನ್ನುವ ಆರೋಪವೂ ಇದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಜಯಪುರದ ಶಾಸಕರೊಬ್ಬರ ಪುತ್ರಿಯ ಮೊಬೈಲ್ ನಂಬರಿನಿಂದ ವಾಟ್ಸಪ್ ವಿಡಿಯೋ ನಿಶಾಂತ್ ನಂಬರಿಗೆ ಬಂದಿತ್ತು. ಆದರೆ, ಆಕೆಯನ್ನು ವಿಚಾರಿಸಿದಾಗ ಮೊಬೈಲ್ ಸಿಮ್ ಅನ್ನು ಮಹಾರಾಷ್ಟ್ರದ ಸ್ನೇಹಿತನೊಬ್ಬ ಬಳಸುತ್ತಿದ್ದ ವಿಚಾರ ಗೊತ್ತಾಗಿತ್ತು.
ಸಚಿವ ಸೋಮಶೇಖರ್ ಪ್ರಕರಣದ ಬಗ್ಗೆ ಮುಖ್ಯಮಂತ್ರಿಯ ಗಮನಕ್ಕೂ ತಂದಿದ್ದರು. ಹೀಗಾಗಿ ಸಿಎಂ ಬೊಮ್ಮಾಯಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ತನಿಖೆಗೆ ಸೂಚನೆ ನೀಡಿದ್ದರು. ಅದರಂತೆ ನಂಬರ್ ಟ್ರೇಸ್ ಮಾಡಿ, ಸದ್ಯಕ್ಕೆ ಇಬ್ಬರನ್ನು ಬಂಧಿಸಲಾಗಿದೆ. ಅದರಲ್ಲಿ ರಾಹುಲ್ ಭಟ್ ಒಬ್ಬ. ರಾಹುಲ್ ಭಟ್ ನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಕೋರ್ಟಿಗೆ ಹಾಜರು ಪಡಿಸಿದ್ದು, ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಇದಲ್ಲದೆ, ವಿಡಿಯೋ ವಿಚಾರದಲ್ಲಿ ಪೊಲೀಸರು ಸೈಬರ್ ತಂತ್ರಜ್ಞರ ಮೂಲಕ ತನಿಖೆ ನಡೆಸುತ್ತಿದ್ದಾರೆ.
Minister Somashekhar son blackmailed of Nude Video with Girl which was edited and sent to this WhatsApp number and blackmailed of crores. Based on the Police Complaint the gang was traced and the person leading the gang was the son of Shri Chandrashekar Swamiji Rahul Bhat.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm