ಬ್ರೇಕಿಂಗ್ ನ್ಯೂಸ್
11-01-22 07:26 pm Mangalore Correspondent ಕ್ರೈಂ
Photo credits : Headline Karnataka
ಉಳ್ಳಾಲ, ಜ.11 : ಸ್ನೇಹಿತೆಯೊಬ್ಬರಿಂದ ಮೂರು ಲಕ್ಷ ರೂಪಾಯಿ ಕೈ ಸಾಲ ಪಡೆದು ವಂಚಿಸಿದ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷಿ ವಿರುದ್ಧ ಮಂಗಳೂರಿನ 5ನೇ ಜೆಎಂಎಫ್ ನ್ಯಾಯಾಲಯದಿಂದ ಬಂಧನ ವಾರೆಂಟ್ ಜಾರಿಯಾಗಿದೆ.
ಕೊಣಾಜೆ ಗ್ರಾಪಂ ಅಧ್ಯಕ್ಷೆಯೂ ಆಗಿರುವ ಅಸೈಗೋಳಿ ಸೈಟ್ ನಿವಾಸಿ ತನ್ನ ಮನೆಯ ಸಾಲ ಮರು ಪಾವತಿಸದೆ ಬ್ಯಾಂಕ್ ಅಧಿಕಾರಿಗಳು ಜಪ್ತಿಗೆ ಮುಂದಾಗಿದ್ದರು. ಈ ವೇಳೆ, ತನ್ನ ಸ್ನೇಹಿತೆ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಉಳಿಯ ನಿವಾಸಿ ಮಮತಾ ಶೈನಿ ಡಿಸೋಜ ಅವರಲ್ಲಿ ಹಣದ ಸಾಲ ಕೇಳಿದ್ದರು. ಶೈನಿ ಡಿಸೋಜ, ಸ್ನೇಹಿತೆ ಅನ್ನುವ ಕಾರಣಕ್ಕೆ ಅಗ್ರಿಮೆಂಟ್ ಮತ್ತು ಚೆಕ್ ಪಡೆದು ಎರಡೂವರೆ ಲಕ್ಷ ರೂ. ಬ್ಯಾಂಕ್ ಮೂಲಕ ಸಾಲ ನೀಡಿದ್ದರು. ಅದಲ್ಲದೆ, ಮತ್ತೆ 50,000 ರೂಪಾಯಿ ಕೈ ಸಾಲವನ್ನೂ ನೀಡಿ ಬ್ಯಾಂಕ್ ಜಪ್ತಿಯಿಂದ ಸ್ನೇಹಿತೆಯನ್ನು ಪಾರು ಮಾಡಿದ್ದರು.
2019ರ ಜುಲೈನಲ್ಲಿ ಸಾಲದ ಪ್ರಕ್ರಿಯೆ ನಡೆದಿತ್ತು. ಎರಡು ಚೆಕ್ ಪಡೆದು ಬೇರೆ ಯಾವುದೇ ಅಡಮಾನ ಇಲ್ಲದೇ ಸಾಲ ನೀಡಿದ್ದು, ಈ ಹಣವನ್ನು ಚಂಚಲಾಕ್ಷಿ ಮೂರು ತಿಂಗಳಲ್ಲಿ ಹಿಂತಿರುಗಿಸುವುದಾಗಿ ಹೇಳಿದ್ದರು. ಆದರೆ, ಹೇಳಿದ ಸಮಯದಲ್ಲಿ ಹಣ ಹಿಂತಿರುಗಿಸದ ಕಾರಣ ಉಳ್ಳಾಲ ಶಾಸಕ ಯು.ಟಿ.ಖಾದರ್ ಗೆ ಶೈನಿ ವಿಷಯ ಹೇಳಿಕೊಂಡಿದ್ದರು. ಅದರಂತೆ, ಶಾಸಕ ಖಾದರ್ ಅವರು ಅಂಬ್ಲಮೊಗರು ಗ್ರಾಪಂ ಮಾಜಿ ಅಧ್ಯಕ್ಷ ರಫೀಕ್ ಜೊತೆ ಸೇರಿ ಸಂಧಾನ ಮಾತುಕತೆ ನಡೆಸಿದ್ದರು. ಆದರೆ ಚಂಚಲಾಕ್ಷಿ ಹಣ ಹೊಂದಿಸಲಾಗದೆ ಸಾಲ ಪಾವತಿಯನ್ನೂ ಮಾಡದೇ ಸತಾಯಿಸಿದ್ದರು. ಇದನ್ನು ತಿಳಿದು ಶೈನಿ ಅವರು ಶೈನಿ ಅವರು 2019ರ ಕೊನೆಯಲ್ಲಿ ಕೋರ್ಟ್ ಮೊರೆ ಹೋಗಿದ್ದರು.
ಈ ನಡುವೆ, ಶೈನಿ ಅವರು ಚಂಚಲಾಕ್ಷಿ ನೀಡಿದ್ದ 3 ಲಕ್ಷ ಮೊತ್ತದ ಚೆಕ್ಕನ್ನ ಬ್ಯಾಂಕಿಗೆ ನೀಡಿದ್ದು ಅದು ಬೌನ್ಸ್ ಆಗಿತ್ತು. ಮತ್ತೊಂದು ಖಾಲಿ ಚೆಕ್ಕಲ್ಲಿ ಶೈನಿ ಅವರು 85,000 ರೂಪಾಯಿ ಪಡೆದಿದ್ದರು. ಆನಂತರ ಕೋರ್ಟಿನಲ್ಲಿ ವಿಚಾರಣೆ ನಡೆದು, ಆರೋಪಿಗೆ ಸಮನ್ಸ್ ಆದರೂ ಕೋರ್ಟಿಗೆ ಹಾಜರಾಗದ ಹಿನ್ನೆಲೆ ಬಂಧನ ವಾರಂಟ್ ಆಗಿತ್ತು. ಡಿ.28ರಂದು ಮಂಗಳೂರಿನ 5ನೇ ಜೆಎಂಎಫ್ ಕೋರ್ಟ್, ಕೊಣಾಜೆ ಪೊಲೀಸರಿಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶ ಮಾಡಿತ್ತು.
ಸಿದ್ರಾಮಯ್ಯನಲ್ಲಿ ಸಾಲಮನ್ನಾ ಮಾಡಿಸ್ತೀನಿ !
ಶೈನಿ ಡಿಸೋಜ ಅವರ ಪತಿ ಇತ್ತೀಚಿಗೆ ಕ್ಯಾನ್ಸರ್ ಕಾಯಿಲೆಯಲ್ಲಿ ಮೃತಪಟ್ಟಿದ್ದು ಇಬ್ಬರು ಮಕ್ಕಳ ಪಾಲನೆಯ ಜವಾಬ್ದಾರಿಯನ್ನ ಹೊಂದಿದ್ದಾರೆ. ಇದರಿಂದ ಕಷ್ಟಕ್ಕೆ ಒಳಾಗದ ಸ್ನೇಹಿತೆಯ ಕಷ್ಟಕ್ಕೂ ಮಿಡಿಯದ ಚಂಚಲಾಕ್ಷಿ ಈ ಬಗ್ಗೆ ಸಾಲ ಕೇಳಿದ್ದಕ್ಕೆ, ನಾನು ಸಾಲ ಉಳಿಸುವುದಿಲ್ಲ. ನನ್ನ ಅಣ್ಣ ಸಿದ್ದರಾಮಯ್ಯರ ಖಾಸಾ ದೋಸ್ತ್. ಸಿದ್ರಾಮಣ್ಣರಲ್ಲಿ ಹೇಳಿಸಿ, ಸಾಲ ಮನ್ನಾ ಮಾಡಿಸುತ್ತೇನೆಂದು ಹೇಳಿದ್ದಾಗಿ ಶೈನಿ ಡಿಸೋಜ ಹೇಳಿದ್ದಾರೆ. ಕಳೆದ ಬಾರಿ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಕೊಣಾಜೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದರೂ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಬಂದಿದ್ದರಿಂದ ಕಾಂಗ್ರೆಸ್ ಬೆಂಬಲಿತ ಚಂಚಲಾಕ್ಷಿ ಅದೃಷ್ಟದಿಂದ ಗ್ರಾಪಂ ಅಧ್ಯಕ್ಷ ಗಾದಿಗೇರಿದ್ದರು.
ಗ್ರಾಪಂ ಅಧ್ಯಕ್ಷ ಪರ ನಿಂತ ಕೊಣಾಜೆ ಪೊಲೀಸರು
ಕೊಣಾಜೆ ಗ್ರಾಪಂ ಅಧ್ಯಕ್ಷೆ ಚಂಚಲಾಕ್ಷಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣದಲ್ಲಿ ವಾರದ ಹಿಂದೆಯೇ ಬಂಧನ ವಾರೆಂಟ್ ಜಾರಿಯಾಗಿದ್ದರೂ, ಕೊಣಾಜೆ ಪೊಲೀಸರು ಅದನ್ನು ಜಾರಿ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಕೋರ್ಟ್ ವಾರೆಂಟ್ ಹಿಡಿದು ಶೈನಿ ಅವರು ಸೋಮವಾರ ಕೊಣಾಜೆ ಠಾಣೆಗೆ ತೆರಳಿದ್ದರೂ, ನಿಮಗೇನು ಅರ್ಜೆಂಟ್ ಎಂದು ಹೇಳಿ ಇಡೀ ದಿನ ಸತಾಯಿಸಿದ್ದಾರೆ. ಇನ್ ಸ್ಪೆಕ್ಟರ್ ಪ್ರಕಾಶ್ ದೇವಾಡಿಗ, ನೀನೇನಮ್ಮಾ ಒಂದು ದಿವಸ ಬಂದು ಹೋಗುತ್ತಿ.. ನಮಗೆ ಗ್ರಾ.ಪಂ. ಅಧ್ಯಕ್ಷರ ಅಗತ್ಯ ಇದೆ, ಇಲ್ಲಾಂದ್ರೆ ಠಾಣೆಗೆ ನೀರು ಪೂರೈಸಲ್ಲ ಎಂಬ ಬಾಲಿಶಃ ಉತ್ತರ ನೀಡಿದ್ದಾರಂತೆ. ಆಮೂಲಕ ಕೋರ್ಟ್ ವಾರೆಂಟಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವ ರೀತಿ ಪೊಲೀಸರು ವರ್ತಿಸಿದ್ದಾಗಿ ಶೈನಿ ಹೇಳಿದ್ದಾರೆ.
ಇಂದು ಬೆಳಗ್ಗೆ ಮತ್ತೆ ಠಾಣೆಗೆ ತೆರಳಿದ್ದ ಮಹಿಳೆ ಶೈನಿ ಅವರನ್ನು ಮತ್ತೆ ಸತಾಯಿಸಿ, ಮಧ್ಯಾಹ್ನ ಬರುವಂತೆ ಹೇಳಿ ಕಳುಹಿಸಿದ್ದರಂತೆ. ಕೊಣಾಜೆ ಪೊಲೀಸರ ನಿರ್ಲಕ್ಷ್ಯದಿಂದ ರೋಸಿಹೋದ ಶೈನಿ ಡಿಸೋಜ, ಮಂಗಳೂರು ನಗರ ಡಿಸಿಪಿ ಡಿಸಿಪಿ ಹರಿರಾಂ ಶಂಕರ್ ಅವರಿಗೆ ಫೋನ್ ಮೂಲಕ ದೂರು ನೀಡಿದ್ದಾರೆ. ಆದರೆ ಠಾಣೆಯಲ್ಲಿ ಇನ್ ಸ್ಪೆಕ್ಷರ್ ಅವರು ತಮ್ಮಲ್ಲೀಗ ಸಿಬಂದಿ ಇಲ್ಲ ಎಂದು ಸಬೂಬು ಹೇಳಿ ಮಹಿಳೆಯನ್ನ ಹಿಂದಕ್ಕೆ ಕಳಿಸಿದ್ದಾರೆ. ತನಗಾದ ಅನ್ಯಾಯ, ಪೊಲೀಸರ ಅವಮಾನದ ಬಗ್ಗೆ ಶೈನಿ ಡಿಸೋಜ ಹೆಡ್ ಲೈನ್ ಕರ್ನಾಟಕದ ಜೊತೆಗೆ ಅಲವತ್ತುಕೊಂಡಿದ್ದಾರೆ.
Mangalore Konaje Gram Panchyath woman president Chanchalakshmi cheats her friend Shiny Dsouza of three lakhs, even after arrest warrant issued to arrest her the police are showing favours without attesting alleges Shiny.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 05:59 pm
Mangalore Correspondent
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm