ಮದುವೆ ವಾಹನದ ರೀತಿ ಅಲಂಕರಿಸಿ ಗೋವು ಸಾಗಣೆ ; ಹಿಂಜಾವೇ ಬಲೆಗೆ ಬಿದ್ದ ಗೋಕಳ್ಳರು ; ಇನೋವಾದಲ್ಲಿ ತುಂಬಿಸಿದ್ದರು 15 ಕರು ! 

12-01-22 08:34 pm       HK Desk news   ಕ್ರೈಂ

ಇನೋವಾ ಕಾರನ್ನು ಮದುವೆ ವಾಹನದ ಮಾದರಿಯಲ್ಲಿ ಅಲಂಕರಿಸಿ, ಅದರಲ್ಲಿ ಹಸುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ಕಳ್ಳರು ಹಿಂದು ಸಂಘಟನೆಯ ಕಾರ್ಯಕರ್ತರ ಬಲೆಗೆ ಬಿದ್ದಿದ್ದಾರೆ. 

ಉಡುಪಿ, ಜ.12 : ಇನೋವಾ ಕಾರನ್ನು ಮದುವೆ ವಾಹನದ ಮಾದರಿಯಲ್ಲಿ ಅಲಂಕರಿಸಿ, ಅದರಲ್ಲಿ ಹಸುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ಕಳ್ಳರು ಹಿಂದು ಸಂಘಟನೆಯ ಕಾರ್ಯಕರ್ತರ ಬಲೆಗೆ ಬಿದ್ದಿದ್ದಾರೆ. 

ಯಾರಿಗೂ ಅನುಮಾನ ಬರದಂತೆ ಹಸುಗಳನ್ನು ಕಳವು ಮಾಡಲು ಕಳ್ಳರು ಹೊಸ ತಂತ್ರವನ್ನು ರೂಪಿಸಿದ್ದರು. ಆದರೆ ಈ ಬಗ್ಗೆ ಖಚಿತ ಮಾಹಿತಿ ಪಡೆದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕಳ್ಳರ ಜಾಡನ್ನು ಭೇದಿಸಿದ್ದು, 15 ಕರುಗಳನ್ನು ರಕ್ಷಿಸಿದ್ದಾರೆ. 

ಉಡುಪಿ ಜಿಲ್ಲೆಯಲ್ಲಿ ಹಟ್ಟಿಗೆ ನುಗ್ಗಿ, ಬೀಡಾಡಿ ದನಗಳನ್ನು ಕಳ್ಳತನ ಮಾಡಲಾಗುತ್ತಿದೆ‌. ಕಾಪು ತಾಲೂಕಿನ ಶಿರ್ವದಲ್ಲಿ ಮದುವೆಗೆ ತೆರಳುವ ವಾಹನದ ರೀತಿ ಸಂಪೂರ್ಣ ಡೆಕೋರೇಷನ್ ಮಾಡಿದ್ದ ಕಾರಿನಲ್ಲಿ ಹಸುಗಳನ್ನು ತುಂಬಿ ಸಾಗಿಸುತ್ತಿದ್ದ ಪ್ರಕರಣ ಪತ್ತೆಯಾಗಿದೆ. ಮಾಹಿತಿ ಆಧರಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. 

ಎರಡು ವಾಹನದಲ್ಲಿ 16ಕ್ಕೂ ಹೆಚ್ಚು ಹಸುಗಳು ಇರುವುದು ಕಂಡುಬಂದಿದೆ. ಕೈಕಾಲು ಹಾಗೂ ಕುತ್ತಿಗೆಯನ್ನು ಬಿಗಿದ ಕಾರಣ ಎರಡು ಹಸುಗಳು ವಾಹನದಲ್ಲೇ ಸಾವನ್ನಪ್ಪಿದ್ದವು. ಇದರಿಂದ ಆಕ್ರೋಶಗೊಂಡ ಹಿಂದು ಜಾಗರಣ ವೇದಿಕೆ ಸದಸ್ಯರು ಕಾರಿನ ಗಾಜುಗಳನ್ನು ಪುಡಿ ಮಾಡಿದ್ದಾರೆ. ವಿಷಯ ತಿಳಿದು ಕಾಪು ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Activists of Hindu Jagarana Vedike on Wednesday January 12 reportedly thwarted the illegal transportation of cows and rescued 16 animals. The incident took place in Shirva. Sixteen cows were reportedly being transported in a pickup truck and escorted by an Innova car decorated as a marriage vehicle. It is said that the escort car was being used to hoodwink the police and cow vigilantes.