ಬ್ರೇಕಿಂಗ್ ನ್ಯೂಸ್
13-01-22 08:02 pm HK Desk news ಕ್ರೈಂ
ಬೆಳ್ತಂಗಡಿ, ಜ.13 : ಜಮೀನು ವಿಚಾರದಲ್ಲಿ ತಕರಾರು ಹಿನ್ನೆಲೆಯಲ್ಲಿ ಮಾತಿಗೆ ಮಾತು ಬೆಳೆದು ನೆರೆಮನೆಯ ವ್ಯಕ್ತಿಯೊಬ್ಬ ಯುವಕನನ್ನು ಕತ್ತಿಯಿಂದ ಕಡಿದು ಕೊಂದ ಘಟನೆ ಧರ್ಮಸ್ಥಳ ಠಾಣೆ ವ್ಯಾಪ್ತಿಯ ರೆಖ್ಯ ಗ್ರಾಮದ ದೇವಸ ಎಂಬಲ್ಲಿ ನಡೆದಿದೆ.
ರೆಖ್ಯ ಗ್ರಾಮದ ನಿವಾಸಿ ಸಾಂತಪ್ಪ ಗೌಡ (42) ಮೃತ ವ್ಯಕ್ತಿ. ಸಾಂತಪ್ಪ ಗೌಡ ಎಲ್ಲೈಸಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಇಂದು ಬೆಳಗ್ಗೆ ಕೆಲಸಕ್ಕೆಂದು ತೆರಳುತ್ತಿದ್ದಾಗ ಮನೆ ಬಳಿಯ ಮಣ್ಣಿನ ರಸ್ತೆ ಬದಿಯಲ್ಲಿ ನೆರೆಮನೆಯ ಜಯಚಂದ್ರ ಮತ್ತು ಇತರ ಕೆಲಸದಾಳುಗಳು ಕೆಲಸ ಮಾಡುತ್ತಿದ್ದರು.

ರಸ್ತೆಯ ಇಕ್ಕೆಲಗಳನ್ನು ಸವರಿ ಸರಿಪಡಿಸುತ್ತಿದ್ದಾಗ ಅದನ್ನು ನೋಡಿದ ಸಾಂತಪ್ಪ ಗೌಡ ಆಕ್ಷೇಪಿಸಿದ್ದಾರೆ. ರಸ್ತೆಯ ಭಾಗದಲ್ಲಿ ಹುಲ್ಲು ಸವರುತ್ತಿದ್ದುದನ್ನು ಪ್ರಶ್ನೆ ಮಾಡಿದ್ದು, ಇದೇ ವಿಚಾರದಲ್ಲಿ ಜಯಚಂದ್ರ ಮತ್ತು ಸಾಂತಪ್ಪ ಗೌಡರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ, ಜಯಚಂದ್ರ ತನ್ನ ಕೈಯಲ್ಲಿದ್ದ ಕತ್ತಿಯಿಂದ ಏಕಾಏಕಿ ಸಾಂತಪ್ಪ ಗೌಡನ ಕುತ್ತಿಗೆ ಮತ್ತು ತಲೆಗೆ ಕಡಿದಿದ್ದು ಆತ ಸ್ಥಳದಲ್ಲೇ ಸಾವು ಕಂಡಿದ್ದಾನೆ.
ಇದೇ ವೇಳೆ, ಸಾಂತಪ್ಪ ಗೌಡನ ಅಕ್ಕ ಮೀನಾಕ್ಷಿ ಮತ್ತು ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದ ಜೋಸೆಫ್ ಓಡಿ ಬಂದಿದ್ದು, ಅಷ್ಟರಲ್ಲಿ ಜಯಚಂದ್ರ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ. ಈ ಬಗ್ಗೆ ಮೀನಾಕ್ಷಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.
Belthangady Murder LIC agent hacked to death by neighbour over land dispute. The deceased has been identified as Santappa Gowda.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm