ಬ್ರೇಕಿಂಗ್ ನ್ಯೂಸ್
16-01-22 09:50 pm Mangalore Correspondent ಕ್ರೈಂ
Photo credits : Headline Karnataka
ಮಂಗಳೂರು, ಜ.16 : ಕೃಷ್ಣಾಪುರ ಕಾಟಿಪಳ್ಳ 9ನೇ ಬ್ಲಾಕ್ ನಿವಾಸಿ ಮಹಿಳೆಯೊಬ್ಬರಿಗೆ ಗಂಡ ಅಬ್ದುಲ್ ಖಾದರ್ ಇಸ್ಮಾಯಿಲ್, ಮಾವ ಟಿ.ಎ. ಮುಹಮ್ಮದ್ ಮತ್ತು ಅತ್ತೆ ಖತೀಜಾ ಸೇರಿ ವರದಕ್ಷಿಣೆ ತರುವಂತೆ ಪೀಡಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಶ್ರಿನಾ ಎಂಬ ಮಹಿಳೆಯನ್ನು 7 ವರ್ಷದ ಹಿಂದೆ ಅಬ್ದುಲ್ ಖಾದರ್ ಮದುವೆಯಾಗಿದ್ದು ಇವರಿಗೆ ಮೂವರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಮದುವೆಯ ಸಂದರ್ಭ 50 ಪವನ್ ಚಿನ್ನಭರಣವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಬಸ್ ತೆಗೆಯಲೆಂದು ಪತ್ನಿಯ ಚಿನ್ನವನ್ನು ಪತಿ ಅಬ್ದುಲ್ ಖಾದರ್ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿದ್ದರು. ನಂತರ ಬ್ಯಾಂಕಿನ ಸಾಲದ ಬಡ್ಡಿ ಕಟ್ಟಲು ಹಣ ಇಲ್ಲವೆಂದು ಹಣ ತಂದು ಕೊಡುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದ. ಈ ಬಗ್ಗೆ ಹಲವು ಬಾರಿ ತನ್ನ ಅಣ್ಣನಿಂದ ಹಣ ಕೇಳಿ ತೆಗೆದುಕೊಟ್ಟಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಕಳೆದ ಬಾರಿಯೂ ಸಾಲದ ಬಡ್ಡಿ ಹಣ ಕಟ್ಟಲು ಇಲ್ಲ ಎಂದಾಗ ಮಾವ ಜಮಾಲ್ ಎಂಬವರಿಂದ ಸಾಲ ಪಡೆದು 2.60 ಲಕ್ಷ ರೂ. ಬಡ್ಡಿ ಹಣವನ್ನು ಸಂದಾಯ ಮಾಡಿದ್ದೆ. ಮದುವೆ ಆದ 4 ವರ್ಷದಿಂದಲೇ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ 7 - 8 ಬಾರಿ ನನ್ನ ಮನೆಯವರ ಕಡೆಯಿಂದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಗೆ ಮಾಡಲಾಗಿದೆ. ಇಷ್ಟೆಲ್ಲಾ ಆದ್ರೂ ಪತಿ ತನ್ನ ನೀಚ ಬುದ್ದಿಯನ್ನು ಬಿಟ್ಟಿರಲಿಲ್ಲ.
ಇದಲ್ಲದೆ ಪತಿ ಅಬ್ದುಲ್ ಖಾದರ್, ತನ್ನ ಬಸ್ಸಿನಲ್ಲಿ ಬರುವ ಹೆಣ್ಣು ಮಕ್ಕಳ ಜೊತೆ ಹಾಗೂ ಬೇರೆ ಹೆಣ್ಣು ಮಕ್ಕಳ ಜೊತೆ ಫೋನ್ ಮೂಲಕ ಮಾತನಾಡುವುದು ಮತ್ತು ವಾಟ್ಸಪ್ ಮೂಲಕ ಮೆಸೇಜ್ ಮಾಡುತ್ತಿರುವುದು ಕೂಡ ಇತ್ತು. ಅಲ್ಲದೆ ಬೇರೆ ಹೆಣ್ಣುಮಕ್ಕಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ತನ್ನ ಬಸ್ಸಿನಲ್ಲಿ ಸಂಪಾದಿಸಿದ್ದನ್ನೆಲ್ಲ ಅವರಿಗೆ ಖರ್ಚು ಮಾಡುತ್ತಿದ್ದ. ಪತ್ನಿಯಾಗಿ ಅದನ್ನರಿತು ಪ್ರಶ್ನೆ ಮಾಡಿದರೆ ನನಗೆ ಮಕ್ಕಳ ಮುಂದೇನೆ ಚಿತ್ರಹಿಂಸೆ ನೀಡುತ್ತಿದ್ದರು. ಇದಕ್ಕೂ ಮೊದಲು ನನಗೆ ದೈಹಿಕವಾಗಿ ಹಲ್ಲೆ ನಡೆಸಿ, ಮನೆಯವರಿಗೆ ಫೋನ್ ಮಾಡಿ ಹಣ ಕೇಳಲು ಒತ್ತಾಯಿಸುತ್ತಿದ್ದರು. ನಾನು ಫೋನ್ ಮಾಡಿಲ್ಲ ಎಂಬ ಕಾರಣಕ್ಕೆ ಸಿಟ್ಟಿನಿಂದ ನನಗೆ ಹಲ್ಲೆ ಮಾಡಿ ನನ್ನಲ್ಲಿದ್ದ ಮೊಬೈಲ್ ಫೋನನ್ನು ತೆಗೆದುಕೊಂಡು ಒಡೆದು ಹಾಕಿದ್ದಾರೆ.
ಮಾನಸಿಕ ಹಿಂಸೆ ನೀಡಿದ ಸಂದರ್ಭದಲ್ಲಿ ನಾವು ಮಹಿಳಾ ಸಮಾಜಕ್ಕೂ ಕಂಪ್ಲೇಂಟ್ ಮಾಡಿದ್ದೆವು. ಮತ್ತು ಪಾಂಡೇಶ್ವರ ಮಹಿಳಾ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದೆವು. ಅಲ್ಲಿಯೂ ಕೂಡ ನನಗೆ ನ್ಯಾಯ ಸಿಗಲಿಲ್ಲ. ಇಷ್ಟೆಲ್ಲ ಆಗಿಯೂ ಮೊನ್ನೆ ಜ.4 ರಂದು ಸಂಜೆ 5ಕ್ಕೆ ಮಾವ ಮತ್ತು ಅತ್ತೆಯ ಸಮ್ಮುಖದಲ್ಲಿ ಮಾನಸಿಕ ಹಿಂಸೆ ನೀಡಿ ಮತ್ತಷ್ಟು ಹಣ ತಂದು ಕೊಡುವಂತೆ ಒತ್ತಾಯಿಸಿ ಮನಬಂದಂತೆ ಹಲ್ಲೆ ನಡೆಸಿ ನನ್ನ ಬಟ್ಟೆಗಳನ್ನೆಲ್ಲ ಹರಿದು ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ ಪತಿ ಅಶೀಲ್ ಟ್ರಾವೆಲ್ಸ್ ಮಾಲೀಕ ಅಬ್ದುಲ್ ಖಾದರ್ ಇಸ್ಮಾಯಿಲ್, ಮಾವ ಚೊಕ್ಕಬೆಟ್ಟಿನ ಅಜ್ಮೀರ್ ರೆಡಿಮೇಡ್ ಶಾಪ್ ಮಾಲಕ ಟಿ.ಎ.ಮಹಮ್ಮದ್ ಮತ್ತು ಅತ್ತೆ ಖತೀಜಾ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಮೂವರು ಕೂಡ ತಲೆಮರೆಸಿಕೊಂಡಿದ್ದಾರೆ.
Mangalore Domestic violence wife files complaint against against husband who is a Bus Owner and Mother in law at Surathkal Police Station. Marina was tortured for dowry to clear the loan that was taken for the purchase of Bus. A case has been registered against three over domestic violence.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 05:59 pm
Mangalore Correspondent
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm