ಬ್ರೇಕಿಂಗ್ ನ್ಯೂಸ್
17-01-22 03:26 pm Shivamogga Correspondent ಕ್ರೈಂ
ಶಿವಮೊಗ್ಗ, ಜ.17: ಪತ್ನಿಯದ್ದೇ ಬೆತ್ತಲೆ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಿದ್ದಲ್ಲದೆ, ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಪತಿ ಮತ್ತು ಅತ್ತೆ, ಮಾವನ ವಿರುದ್ಧ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆತ್ತಲೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟು ಮಾನ ಹರಾಜು ಹಾಕುವುದಾಗಿ ಹೇಳಿ ಬೆದರಿಕೆ ಒಡ್ಡಿದ್ದಲ್ಲದೆ, ತಂದೆಯ ಬಳಿಯಿಂದ ಹಣ ಕೇಳಿ ತರುವಂತೆ ಒತ್ತಡ ಹೇರುತ್ತಿದ್ದ ಬಗ್ಗೆ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಿವಾಸಿ ಸಲ್ಮಾನ್, ಅತ್ತೆ ಸಾಹಿರಾ, ಮಾವ ಶೌಕತ್ ಖಾನ್, ನಾದಿನಿ ಸಮೀನಾ ವಿರುದ್ಧ ದೂರು ನೀಡಿದ್ದು, ಶಿವಮೊಗ್ಗದ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ರಿಪ್ಪನ್ ಪೇಟೆ ಠಾಣೆ ವ್ಯಾಪ್ತಿಯ ಹುಂಚ ನಿವಾಸಿಯಾಗಿದ್ದು, 2021ರ ಮೇ 22ರಂದು ಈಕೆಯನ್ನು ಶೃಂಗೇರಿಯ ಸಲ್ಮಾನ್ ಜೊತೆ ಮದುವೆ ಮಾಡಲಾಗಿತ್ತು. ಮದುವೆಯ ಸಂದರ್ಭ 90 ಗ್ರಾಮ್ ಚಿನ್ನಾಭರಣ ಮತ್ತು ಮೂರು ಲಕ್ಷ ನಗದು ವರದಕ್ಷಿಣೆ ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಮದುವೆಯ ನಂತರ 90 ಗ್ರಾಮ್ ಚಿನ್ನಾಭರಣ, ಎರಡು ಲಕ್ಷ ನಗದು ಮತ್ತು ಮನೆಯ ಇನ್ನಿತರ ಸಾಮಾನುಗಳನ್ನು ಖರೀದಿಸಿ ಕೊಡಲಾಗಿತ್ತು.
ಒಂದು ಲಕ್ಷ ನಗದು ಕೊಡಲು ಬಾಕಿಯಾಗಿದ್ದ ವಿಚಾರದಲ್ಲಿ ಇವರ ನಡುವೆ ಜಗಳ ನಡೆದಿದ್ದು, ಪದೇ ಪದೇ ಯುವತಿಗೆ ಕಿರುಕುಳ ನೀಡಲಾಗಿತ್ತು. ಇದಕ್ಕಾಗಿ ಅತ್ತೆ ಮತ್ತು ಮಾವ ನಿರಂತರ ಕಿರುಕುಳ ನೀಡಿದ್ದು, ಇದಕ್ಕೆ ಗಂಡ ಸಲ್ಮಾನ್ ಮತ್ತು ನಾದಿನಿ ಸಮೀನಾ ಸಾಥ್ ನೀಡಿದ್ದರು. ಇದಲ್ಲದೆ, ಗಂಡ ಸಲ್ಮಾನ್ ಈಕೆಯನ್ನು ಬೆತ್ತಲಾಗಿಸಿ ವಿಡಿಯೋ ಮಾಡಿದ್ದು, ಅದೇ ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್ ಮಾಡಲಾರಂಭಿಸಿದ್ದ. ಒಂದೋ ಹಣ ತಂದು ಕೊಡಬೇಕು, ಇಲ್ಲದಿದ್ದರೆ ವಿಡಿಯೋ ಹೊರಬಿಟ್ಟು ನಡತೆ ಸರಿ ಇಲ್ಲ ಎಂದು ಸುದ್ದಿ ಹಬ್ಬಿಸುತ್ತೇನೆ ಎಂದು ಬೆದರಿಸಿದ್ದ.
ಗಂಡ ಮತ್ತು ಅತ್ತೆ, ಮಾವಂದಿರ ಕಿರುಕುಳದಿಂದ ಬೇಸತ್ತ ಯುವತಿ ಇತ್ತೀಚೆಗೆ ತನ್ನ ರಿಪ್ಪನ್ ಪೇಟೆ ಬಳಿಯ ತವರು ಮನೆಗೆ ಬಂದಿದ್ದಳು. ಅಲ್ಲಿಗೆ ಬಂದಿದ್ದ ಸಲ್ಮಾನ್, ತಲಾಖ್ ನೀಡುವುದಾಗಿ ಹೇಳಿ ಹೋಗಿದ್ದ. ಆನಂತರ ಫೋನ್ ಮಾಡಿ, ವಿಡಿಯೋ ತನ್ನಲ್ಲಿದೆ, ಅದನ್ನು ಹರಿಯಬಿಡುತ್ತೇನೆ ಎಂದು ಹೇಳಿದ್ದ. ಅಲ್ಲದೆ, ಉಳಿದ ಹಣವನ್ನು ಕೂಡಲೇ ತಂದು ಕೊಡು, ಇಲ್ಲದಿದ್ದರೆ ಕೊಂದು ಹಾಕುತ್ತೇನೆ ಎಂದು ಬೆದರಿಸಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
Shivamogga Husband booked for blackmailing, uploading wifes nude video for dowry. A case has been registered at Ripponpet police station.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
29-07-25 09:56 pm
Mangalore Correspondent
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
29-07-25 08:54 pm
HK News Desk
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm