ಬ್ರೇಕಿಂಗ್ ನ್ಯೂಸ್
17-01-22 10:35 pm HK News Desk ಕ್ರೈಂ
ಹೈದರಾಬಾದ್, ಜ.17: ಪತ್ನಿ ಪರ ಪುರುಷರ ಜೊತೆಗಿದ್ದ ಅಶ್ಲೀಲ ವಿಡಿಯೋ ನೋಡಿದ ವ್ಯಕ್ತಿಯೊಬ್ಬ ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯ ವಂಗಲಪುಡಿ ಗ್ರಾಮದಲ್ಲಿ ನಡೆದಿದೆ.
ವಂಗಲಪುಡಿ ಗ್ರಾಮದ 35 ವರ್ಷದ ವಿವಾಹಿತ ಮಹಿಳೆ ಉದ್ಯೋಗಕ್ಕಾಗಿ ಕುವೈತ್ ತೆರಳಿದ್ದು ಗಂಡ ಮತ್ತು ಮಕ್ಕಳನ್ನು ಊರಲ್ಲಿ ಬಿಟ್ಟಿದ್ದರು. ಗೋಕಾವರಂನಲ್ಲಿ ಇಬ್ಬರು ಗಂಡು ಮಕ್ಕಳು (13, 10 ವರ್ಷ) ಮತ್ತು ಒಬ್ಬ ಮಗಳು (12) ಅಜ್ಜಿಯ ಮನೆಯಲ್ಲಿ ವಾಸವಿದ್ದರು. ಆಟೋ ರಿಕ್ಷಾ ಓಡಿಸುತ್ತಿದ್ದ ತಂದೆ ಕೆಲವೊಮ್ಮೆ ಅಲ್ಲಿಗೆ ಹೋಗಿ ಮಕ್ಕಳನ್ನು ನೋಡಿಕೊಂಡು ತೆರಳುತ್ತಿದ್ದ.
ಶನಿವಾರ ಸಂಜೆ ಮಕ್ಕಳ ಬಳಿ ಬಂದಿದ್ದ ತಂದೆ, ಅವರನ್ನು ಹೊರಗೆ ಕರೆದೊಯ್ಯುವುದಾಗಿ ಹೇಳಿ ಹೋಗಿದ್ದ. ತೋಟಕ್ಕೆ ಕರೆದೊಯ್ದು ಇಲಿಗೆ ಹಾಕುವ ವಿಷವನ್ನು ತಾನೇ ಸೇವಿಸಿದ್ದು ಬಳಿಕ ತನ್ನ ಮೂವರು ಮಕ್ಕಳಿಗೆ ವಿಷ ನೀಡಲು ಯತ್ನಿಸಿದ್ದಾನೆ.
ಹತ್ತು ವರ್ಷದ ಮಗ ವಿಷ ಸೇವಿಸಿದ್ದರೆ, ಇನ್ನಿಬ್ಬರು ಮಕ್ಕಳು ವಿಷ ಸೇವಿಸಲಿಲ್ಲ. ಅಷ್ಟರಲ್ಲಿ ತಂದೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು ಮಕ್ಕಳಿಬ್ಬರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅಸ್ವಸ್ಥಗೊಂಡಿದ್ದ ತಂದೆ, ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ
ನನಗೆ ಹತ್ತಿರದ ಸಂಬಂಧಿಯಿಂದ ನನ್ನ ಪತ್ನಿ ಪರ ಪುರುಷರ ಜೊತೆಗಿರುವ ಅಶ್ಲೀಲ ವಿಡಿಯೋ ಸಿಕ್ಕಿತ್ತು. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ, ಆತ ಹೇಳುತ್ತಿರುವ ವಿಡಿಯೋಗಳನ್ನು ಪರಿಶೀಲಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷ ಸೇವಿಸಲು ಒತ್ತಾಯಿಸಿದ್ದ ತಂದೆ
‘ನಮ್ಮ ತಂದೆ ನಮ್ಮ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಜ್ಜಿಯ ಮನೆಯಲ್ಲಿಯೇ ಇದ್ದು ಓದುತ್ತಿದ್ದೇವೆ. ಅವರು ಆಗಾಗ ಬಂದು ಹೋಗುತ್ತಿದ್ದರು. ಹಬ್ಬದ ಹಿನ್ನೆಲೆ ತಂದೆ ನಮ್ಮ ಬಳಿಗೆ ಬಂದಿದ್ದರು. ಹೀಗಾಗಿ ನಾವು ಅವರ ಜೊತೆ ಹೊರಗೆ ಹೋಗಿದ್ದೆವು. ಕಹಿ ಔಷಧಿ ಕುಡಿಯಲು ಹೇಳಿದ್ದರು. ವಿಷವೆಂದು ಸಂಶಯ ಬಂದು ಕುಡಿದಿರಲಿಲ್ಲ’ ಎಂದು ಇನ್ನಿಬ್ಬರು ಮಕ್ಕಳು ಹೇಳಿದ್ದಾರೆ.
Wife Sex video with other man leaked, husband attempts for suicide by killing two children in hyderabad.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm