ಬ್ರೇಕಿಂಗ್ ನ್ಯೂಸ್
18-01-22 09:21 pm HK Desk news ಕ್ರೈಂ
ಬೆಂಗಳೂರು, ಜ.18 : ಬಿಎಸ್ಸಿ ವಿದ್ಯಾರ್ಥಿಯೊಬ್ಬ ಇನ್ ಸ್ಟಾ ಗ್ರಾಮಿನಲ್ಲಿ ಯುವತಿ ಹೆಸರಲ್ಲಿ ಖಾತೆ ತೆರೆದು ತನ್ನನ್ನು ಸಲಿಂಗ ಕಾಮಿಯೆಂದು ಹೇಳಿಕೊಂಡಿದ್ದಲ್ಲದೆ ಸ್ನೇಹಿತೆಯರನ್ನು ಸಂಪಾದಿಸಿ, ಬಳಿಕ ಅವರನ್ನೇ ಬ್ಲಾಕ್ಮೇಲ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಫ್ರೇಸರ್ ಟೌನ್ ನಿವಾಸಿಯಾಗಿರುವ ಪ್ರಪಂಚ್ ನಾಚಪ್ಪ ಎಂಬ 21 ವರ್ಷದ ಯುವಕ, ಕಳೆದ ಸೆಪ್ಟಂಬರ್ ತಿಂಗಳಲ್ಲಿ ಪ್ರತೀಕ್ಷಾ ಬೋರಾ ಹೆಸರಲ್ಲಿ ಇನ್ ಸ್ಟಾ ಗ್ರಾಮಿನಲ್ಲಿ ಖಾತೆ ತೆರೆದಿದ್ದ. ತಾನೊಬ್ಬ ಸಲಿಂಗ ಕಾಮಿ ಯುವತಿಯಾಗಿದ್ದು, ಸೂಕ್ತ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ.
ಆನಂತರ ಕೆಲವು ಯುವತಿಯರ ಸ್ನೇಹ ಸಂಪಾದಿಸಿದ್ದು ಸೆಕ್ಸ್ ಚಾಟಿಂಗ್ ನಡೆಸಿದ್ದಾನೆ. ಈ ವೇಳೆ, ಯುವತಿಯರ ನಗ್ನ ಚಿತ್ರವನ್ನು ಕೇಳಿ ಪಡೆದಿದ್ದು, ಆ ಫೋಟೋ ಮುಂದಿಟ್ಟು ಬ್ಲಾಕ್ಮೇಲ್ ಆರಂಭಿಸಿದ್ದಾನೆ. ಹಣಕ್ಕಾಗಿ ಪೀಡಿಸಿದ್ದು, ಹಣ ಕೊಡದೇ ಇದ್ದರೆ ಫೋಟೋವನ್ನು ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ತನ್ನನ್ನು ಮಾಡೆಲ್ ಎಂದು ಹೇಳಿಕೊಂಡಿದ್ದು ನೀವು ಮಾಡೆಲ್ ಆಗುವುದಿದ್ದರೆ ಚಾನ್ಸ್ ಕೊಡಿಸುತ್ತೀನಿ ಎಂದು ಆಸೆ ತೋರಿಸಿದ್ದ. 30ರಿಂದ 40 ಮಂದಿಗೆ ಈ ರೀತಿ ಬ್ಲಾಕ್ಮೇಲ್ ಮಾಡಿದ್ದು ಕೆಲವು ಲಕ್ಷ ರೂಪಾಯಿ ದೋಚಿದ್ದಾನೆ.
ತನ್ನನ್ನು ಸಲಿಂಗಕಾಮಿ ಎಂದು ಹೇಳಿಕೊಂಡು ಮರುಳು ಮಾಡುತ್ತಿದ್ದ. ತನ್ನದೇ ನಗ್ನ ಚಿತ್ರವೆಂದು ಹೇಳಿ ಯಾವುದೋ ಫೋಟೋ ಕಳಿಸುತ್ತಿದ್ದ. ಆಮೂಲಕ ನಿನ್ನ ಚಿತ್ರ ಕಳಿಸುವಂತೆ ಪೀಡಿಸುತ್ತಿದ್ದ. ಪ್ರತಿ ಫೋಟೋಗೆ 4 ಸಾವಿರ ರೂ. ಕೊಡುತ್ತೇನೆಂದು ಹೇಳಿ ಆಮಿಷವೊಡ್ಡಿ ಫೋಟೋ ಪಡೆಯುತ್ತಿದ್ದ. ಆನಂತರ, ನಮ್ಮನ್ನೇ ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ಯುವತಿಯೊಬ್ಬಳು ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾಳೆ. ಈ ಬಗ್ಗೆ ದೂರು ಪಡೆದ ಪೊಲೀಸರು ಇನ್ ಸ್ಟಾ ಗ್ರಾಮ್ ಹಿನ್ನೆಲೆಯನ್ನು ಕೆದಕಿ ನೋಡಿದಾಗ ಬಿಎಸ್ಸಿ ವಿದ್ಯಾರ್ಥಿ ನಾಚಪ್ಪನ ನಿಜಬಣ್ಣ ಬಯಲಾಗಿತ್ತು.
ಸಂತ್ರಸ್ತ ಯುವತಿಯರು ಆತ ಹಣಕ್ಕಾಗಿ ಬ್ಲಾಕ್ಮೇಲ್ ಮಾಡಲು ಶುರು ಮಾಡಿದರೆ, ಆತನ ಖಾತೆಯನ್ನು ಬ್ಲಾಕ್ ಮಾಡುತ್ತಿದ್ದರು. ಆದರೆ ಆತ ಬೇರೊಂದು ಖಾತೆ ತೆರೆದು ಸಂಪರ್ಕಕ್ಕೆ ಬಂದು ಮತ್ತೆ ಬ್ಲಾಕ್ಮೇಲ್ ಮಾಡುತ್ತಿದ್ದ. ಹಣ ಕೊಡದೇ ಇದ್ದರೆ ಫೋಟೋವನ್ನು ಷೇರ್ ಮಾಡುತ್ತೇನೆಂದು ಬೆದರಿಸುತ್ತಿದ್ದ. ಪ್ರತಿ ಯುವತಿಯಿಂದ ಕನಿಷ್ಠ 5ರಿಂದ ಹತ್ತು ಸಾವಿರ ರೂ. ಹಣ ಪಡೆಯುತ್ತಿದ್ದ. ಕಾಲೇಜು ಯುವತಿಯರನ್ನೇ ಟಾರ್ಗೆಟ್ ಮಾಡಿ, ತನ್ನ ಜಾಲ ಬೀಸುತ್ತಿದ್ದ. ಬಲೆಗೆ ಬೀಳುತ್ತಿದ್ದ ಯುವತಿಯರನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.
21-year-old Nachappa used a fake Instagram account and pretended to be a lesbian. He would win the confidence of girls and ask them to share nude pictures. He then blackmailed them, threatening to upload the pictures.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm