ಬ್ರೇಕಿಂಗ್ ನ್ಯೂಸ್
20-01-22 08:22 pm HK Desk news ಕ್ರೈಂ
ಆಗ್ರಾ, ಜ.20 : ಟ್ಯೂಷನ್ ಕ್ಲಾಸಿಗೆ ಹೋಗುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ತಮಗೆ ವಿಷ್ ಮಾಡಿಲ್ಲ ಎಂದು ಜೊತೆಗಿದ್ದ ಗೆಳೆಯರೇ ಸೇರಿ ಆತನಿಗೆ ಹಲ್ಲೆಗೈದು ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಜನವರಿ 18ರಂದು ಸಂಜೆ ಘಟನೆ ನಡೆದಿದ್ದು, ಹತ್ತನೇ ಕ್ಲಾಸ್ ವಿದ್ಯಾರ್ಥಿ ನಡೆದುಕೊಂಡು ಹೋಗುತ್ತಿದ್ದಾಗ ಪರಿಚಯದ ಗೆಳೆಯರು ಎದುರಾಗಿದ್ದರು. ಈ ವೇಳೆ, ಮಾತಿಗೆ ಮಾತು ಬೆಳೆದಿದ್ದು 12ನೇ ಕ್ಲಾಸ್ ಓದುತ್ತಿದ್ದ ಇಬ್ಬರು ಸೇರಿ ದಲಿತ ಹುಡುಗನಿಗೆ ಹಲ್ಲೆ ನಡೆಸಿದ್ದಾರೆ. ಆನಂತರ, ಅದರಲ್ಲಿ ಒಬ್ಬಾತ ತನ್ನಲ್ಲಿದ್ದ ಕಂಟ್ರಿಮೇಡ್ ಪಿಸ್ತೂಲನ್ನು ತಂದು ಹುಡುಗನ ಕಾಲಿಗೆ ಗುಂಡು ಹಾರಿಸಿದ್ದಾನೆ.
ಹುಡುಗ ನೆಲಕ್ಕೆ ಬಿದ್ದು ಚೀರಾಡುತ್ತಲೇ ಇಬ್ಬರು ಕೂಡ ಪರಾರಿಯಾಗಿದ್ದಾರೆ. ಸ್ಥಳೀಯರು ಸೇರಿ ಹುಡುಗನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿ ಯುವಕರಿಬ್ಬರು 18 ವರ್ಷ ಮೇಲ್ಪಟ್ಟವರಾಗಿದ್ದು, 12ನೇ ತರಗತಿ ಓದುತ್ತಿದ್ದರು. ಅದರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮತ್ತು ಗುಂಡೇಟು ಪಡೆದ ಸಂತ್ರಸ್ತ ಯುವಕ ಒಂದೇ ಏರಿಯಾದ ನಿವಾಸಿಗಳು. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿ ಕೊಲೆಯತ್ನ ಮತ್ತು ದಲಿತ ನಿಂದನೆಯ ಅಟ್ರಾಸಿಟಿ ಕೇಸ್ ಹಾಕಲಾಗಿದೆ.
ಗುಂಡೇಟು ಪಡೆದ ಹುಡುಗ ಅಪಾಯದಿಂದ ಪಾರಾಗಿದ್ದಾನೆ ಎಂದು ನ್ಯೂ ಆಗ್ರಾ ಪೊಲೀಸ್ ಠಾಣೆಯ ಎಸ್ಎಚ್ಓ ಅರವಿಂದ ನರ್ವಾಲ್ ಹೇಳಿದ್ದಾರೆ. ಬಂಧಿತ ಆರೋಪಿ ಯುವಕ ಈ ಹಿಂದೆಯೂ ಇದೇ ರೀತಿ ಕೊಲೆಯತ್ನ ಕೃತ್ಯ ನಡೆಸಿದ್ದು, ಜೈಲು ಪಾಲಾಗಿದ್ದ. ಆನಂತರ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ ಎಂದು ನರ್ವಾಲ್ ತಿಳಿಸಿದ್ದಾರೆ.
A Dalit boy studying in class X suffered bullet injuries in his left leg after he was allegedly shot at by his friends for not greeting them while he was on his way to attend tuition classes on Tuesday afternoon in Agra. Police said the accused boys are adults and one of them has been arrested while the other is on the run. The victim is out of danger.
10-05-25 11:30 am
HK News Desk
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm