ಬ್ರೇಕಿಂಗ್ ನ್ಯೂಸ್
20-01-22 08:54 pm Mangalore Correspondent ಕ್ರೈಂ
ಮಂಗಳೂರು, ಜ.20 : ಆಂಬುಲೆನ್ಸ್ ಸಾಗುತ್ತಿದ್ದಾಗ ಬದಿಗೆ ಸರಿಯದೆ, ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯಿಂದ ಕಾರು ಓಡಿಸಿದ ಚಾಲಕನ ವಿರುದ್ಧ ಮಂಗಳೂರಿನ ಉತ್ತರ ಸಂಚಾರಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲು ಮಾಡಲಾಗಿದೆ.
ಆಂಬುಲೆನ್ಸ್ ಮಂಗಳೂರಿನಿಂದ ಉಡುಪಿ ಮೂಲಕ ಭಟ್ಕಳಕ್ಕೆ ಸಾಗುತ್ತಿದ್ದಾಗ, ಮೂಲ್ಕಿಯಿಂದ ಉಡುಪಿ ವರೆಗೂ ಸುಮಾರು 40 ಕಿಮೀ ಉದ್ದಕ್ಕೆ ಕಾರು ಚಾಲಕ ಎದುರಿನಿಂದ ವೇಗವಾಗಿ ಸಾಗಿದ್ದಾನೆ. ಆಂಬುಲೆನ್ಸ್ ಚಾಲಕ ಸೈರನ್ ಮಾಡಿಕೊಂಡು ಹೋಗುತ್ತಿದ್ದು, ಗಂಟೆಗೆ 110-120 ಕಿಮೀ ವೇಗದಲ್ಲಿ ಸಾಗುತ್ತಿರುವುದನ್ನು ವಿಡಿಯೋ ಮಾಡಿದ್ದಾನೆ. ಇದೇ ವೇಳೆ, ಅದರ ಮುಂದಿನಿಂದ ಕಾರು ಚಾಲಕ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ 130 ಕಿಮೀ ವೇಗದಲ್ಲಿ ಕಾರು ಓಡಿಸಿದ್ದು, ಆಂಬುಲೆನ್ಸ್ ವಾಹನಕ್ಕೆ ದಾರಿ ಬಿಟ್ಟುಕೊಟ್ಟಿಲ್ಲ ಎಂದು ವಿಡಿಯೋ ರೆಕಾರ್ಡ್ ಮಾಡಿ ಚಾಲಕ ಹೈಬು ಎಂಬವರು ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಮಂಗಳೂರು ರಿಜಿಸ್ಟ್ರೇಶನ್ ಹೊಂದಿದ್ದ ಕಾರು ಚಾಲಕನ ವಿರುದ್ಧ ಆಕ್ರೋಶ ಕೇಳಿಬಂದಿತ್ತು. ವಿಡಿಯೋ ಆಧರಿಸಿ, ಮಂಗಳೂರಿನ ಸಂಚಾರಿ ಠಾಣೆ ಪೊಲೀಸರು ಸುಮೊಟೋ ಕೇಸು ದಾಖಲಿಸಿದ್ದು, ಆರೋಪಿ ಚಾಲಕನನ್ನು ಕಾರು ಸಹಿತ ಬಂಧಿಸಿದ್ದಾರೆ. ಕಾರು ಚಾಲಕ ಮಂಗಳೂರಿನ ಅತ್ತಾವರ ನಿವಾಸಿ ಮೋನಿಷ್ (23) ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಿದಾಗ, ಆಂಬುಲೆನ್ಸ್ ಗೆ ದಾರಿ ಮಾಡುವುದಕ್ಕಾಗಿ ಮುಂದಿನಿಂದ ಸಾಗಿದ್ದಾಗಿ ತಿಳಿಸಿದ್ದಾನೆ.
ವಿಡಿಯೋದಲ್ಲಿ ಕಾರು ಚಾಲಕ ಆಂಬುಲೆನ್ಸ್ ವಾಹನಕ್ಕೆ ಅಡ್ಡಿಯಾಗಿರುವುದು ಕಂಡುಬಂದಿಲ್ಲ. ಆದರೆ ಆಂಬುಲೆನ್ಸ್ ವಾಹನಕ್ಕಿಂತಲೂ ಅತಿ ವೇಗದ ಚಾಲನೆ ಮಾಡಿದ್ದಾನೆ. ಇದಕ್ಕಾಗಿ ಆತನ ವಿರುದ್ಧ ಐಪಿಸಿ 279, 184 ಐಎಂವಿ ಅಡಿ ನಿರ್ಲಕ್ಷ್ಯದ ಚಾಲನೆ ಮತ್ತು ಅತಿವೇಗದ ಚಾಲನೆಯ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಸಿಎಂ ಇನ್ನಿತರ ವಿಐಪಿಗಳು ಬಂದಾಗ ಝೀರೋ ಟ್ರಾಫಿಕ್ ಮಾಡಿ, ಗಂಟೆಗೆ ನೂರು ಕಿಮೀ ವೇಗದಲ್ಲಿ ಸಾಗುವುದಿದೆ. ಆದರೆ, ಸಾಮಾನ್ಯ ಸಂದರ್ಭದಲ್ಲಿ ವಾಹನಗಳ ದಟ್ಟಣೆ ಇರುವಾಗ ಇಷ್ಟು ವೇಗದಲ್ಲಿ ಸಾಗುವುದು ತಪ್ಪಾಗುತ್ತದೆ. ಅಡ್ಡಲಾಗಿ ವಾಹನ ಬಂದಲ್ಲಿ ಅಪಘಾತಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಚಾಲಕನ ವಿರುದ್ಧ ಕೇಸು ದಾಖಲು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
A youth has been arrested for audaciously obstructing an ambulance from passing by on the road for 40 kilometers. The accused Monish has been booked under sections 279 of IPC and 184 of Indian Motor Vehicle (IMV) Act. The video of this has gone viral on social media.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm