ಬ್ರೇಕಿಂಗ್ ನ್ಯೂಸ್
21-01-22 07:32 pm HK Desk news ಕ್ರೈಂ
ತಿರುಪತಿ, ಜ.21 : ಸಾಮಾನ್ಯವಾಗಿ ಪತ್ನಿಯ ಶೀಲ ಶಂಕಿಸಿ, ಪತಿಯಂದಿರು ಪತ್ನಿಯ ಕೊಲೆ ಮಾಡಿದ್ದು ಕೇಳಿದ್ದೇವೆ. ಆದರೆ, ಇಲ್ಲೊಬ್ಬಳು ಪತಿಯನ್ನೇ ಅದೇ ಕಾರಣಕ್ಕಾಗಿ ಕೊಂದು ಹಾಕಿದ್ದಾಳೆ. ಪತ್ನಿಯೇ ಪತಿಯ ತಲೆಯನ್ನು ಕಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ವಸುಂಧರಾ(50) ಪತಿಯನ್ನೇ ಕೊಲೆಗೈದಿರುವ ಮಹಿಳೆಯಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ರವಿಚಂದರ್(53) ಕೊಲೆಯಾದ ವ್ಯಕ್ತಿಯಾಗಿದ್ದು, ಕೌಟುಂಬಿಕ ಕಲಹದಲ್ಲಿ ಮಾತಿಗೆ ಮಾತು ನಡೆದು ಗುರುವಾರ ರಾತ್ರಿ ಪತಿಯ ಕುತ್ತಿಗೆಯನ್ನೇ ಪತ್ನಿ ವಸುಂಧರಾ ಸೀಳಿದ್ದಾಳೆ. ಆನಂತರ, ಪತಿಯ ಕುತ್ತಿಗೆಯನ್ನು ಕೊಯ್ದು ತಲೆಯನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಆಟೋದಲ್ಲಿ ರೆನಿಗುಂಟ ಪೊಲೀಸ್ ಠಾಣೆಗೆ ಬಂದಿದ್ದಳು.
ರವಿಚಂದರ್ ಉದ್ಯಮ ನಡೆಸುತ್ತಿದ್ದು, 25 ವರ್ಷಗಳ ಹಿಂದೆ ವಸುಂಧರಾಳನ್ನು ವರಿಸಿದ್ದ. ಇವರಿಗೆ 20 ವರ್ಷಗಳ ಮಗ ಇದ್ದಾನೆ. ದೇಗುಲ ನಗರಿ ತಿರುಪತಿಯ ರೆನಿಗುಂಟ ಠಾಣೆ ವ್ಯಾಪ್ತಿಯ ಬುಗ್ಗ ಸ್ಟ್ರೀಟ್ ನಲ್ಲಿ ನೆಲೆಸಿದ್ದರು. ಆರಂಭದಲ್ಲಿ ಒಳ್ಳೆಯದಾಗಿಯೇ ಇದ್ದ ದಂಪತಿ, ಇತ್ತೀಚೆಗೆ ತೀವ್ರವಾಗಿ ಮುನಿಸಿಕೊಂಡಿದ್ದರು. ಇಬ್ಬರ ನಡುವೆ ಕುಟುಂಬದ ವಿಚಾರದಲ್ಲಿ ಕಲಹ ನಡೆದಿತ್ತು. ವಸುಂಧರಾಗೆ ಪತಿ ರವಿಚಂದರ್, ಬೇರೊಬ್ಬ ಯುವತಿ ಜೊತೆ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಹೊಂದಿದ್ದಳು. ಇದೇ ವಿಚಾರದಲ್ಲಿ ಇವರ ನಡುವೆ ಕಲಹ ನಡೆದಿತ್ತು ಎನ್ನಲಾಗಿದೆ. ಗುರುವಾರ ರಾತ್ರಿ ಇವರ ನಡುವಿನ ಕಲಹ ತೀವ್ರ ಮಟ್ಟಕ್ಕೆ ಹೋಗಿದ್ದು ಮಾತಿಗೆ ಮಾತು ಬೆಳೆದು ಪತ್ನಿಯೇ ಕತ್ತಿಯಿಂದ ಪತಿಯ ಕುತ್ತಿಗೆ ಸೀಳಿದ್ದಾಳೆ.
A 50-year-old woman in Andhra Pradesh’s Tirupati killed her husband and beheaded him over suspicions of infidelity. The accused, identified as Vasundhara, stabbed her husband Ravichandar (53) to death and lopped off his head. She then walked into a local police station with her spouse’s severed head, and surrendered.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm