ಕರ್ತವ್ಯ ಮುಗಿಸಿ ತೆರಳುತ್ತಿದ್ದ ಪೊಲೀಸ್ ಸಿಬಂದಿ ಮೇಲೆ ಹಲ್ಲೆ ಯತ್ನ ; ಅವಾಚ್ಯ ನಿಂದನೆ, ಇಬ್ಬರ ಬಂಧನ 

21-01-22 08:57 pm       Mangalore Correspondent   ಕ್ರೈಂ

ಕರ್ತವ್ಯ ಮುಗಿಸಿ ವಸತಿ ಗೃಹಕ್ಕೆ ತೆರಳುತ್ತಿದ್ದ ಇಬ್ಬರು ಪೊಲೀಸ್ ಸಿಬಂದಿ ಮೇಲೆ ಕುಡಿದ ಮತ್ತಿನಲ್ಲಿದ್ದ ಇಬ್ಬರು ಮೈಗೆ ಕೈಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ನಗರದ ಯೆಯ್ಯಾಡಿಯಲ್ಲಿ ನಡೆದಿದೆ. 

Photo credits : Headline Karnataka

ಮಂಗಳೂರು, ಜ.21 : ಕರ್ತವ್ಯ ಮುಗಿಸಿ ವಸತಿ ಗೃಹಕ್ಕೆ ತೆರಳುತ್ತಿದ್ದ ಇಬ್ಬರು ಪೊಲೀಸ್ ಸಿಬಂದಿ ಮೇಲೆ ಕುಡಿದ ಮತ್ತಿನಲ್ಲಿದ್ದ ಇಬ್ಬರು ಮೈಗೆ ಕೈಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ನಗರದ ಯೆಯ್ಯಾಡಿಯಲ್ಲಿ ನಡೆದಿದೆ. 

ಪ್ರಕರಣ ಸಂಬಂಧಿಸಿ ಡ್ಯಾನಿ ಪೌಲ್ (39) ಮತ್ತು ಮ್ಯಾಕ್ಸಿ ಜೋಸೆಫ್ ನೊರೊನ್ಹಾ (54) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ‌ಜ.18 ರಂದು ರಾತ್ರಿ 10.30 ಕ್ಕೆ ಕದ್ರಿ ಠಾಣೆಯ ಶಿವಾನಂದ ಡಿ.ಟಿ. ಮತ್ತು ಬೀರೇಂದ್ರ ಮೇಟಿ ಎಂಬ ಸಿಬಂದಿ ಕರ್ತವ್ಯ ಮುಗಿಸಿ ಬೈಕಿನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿದ್ದ ಮ್ಯಾಕ್ಸಿ ಮತ್ತು ಡ್ಯಾನಿ, ಬೈಕನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ‌

ಅಲ್ಲದೆ, ಸಿಬಂದಿಯ ಬೈಕಿನ ಕೀ ತೆಗೆದು ನೀವು ರೋಲ್ ಕಾಲ್ ಮಾಡುತ್ತಿದ್ದೀರಿ ಎಂದು ಹೇಳಿ ಅವಾಚ್ಯ ಪದಗಳಿಂದ ನಿಂದಿಸಿ ಸಮವಸ್ತ್ರ ಎಳೆದು ಹಲ್ಲೆಗೆ ಯತ್ನಿಸಿದ್ದಾರೆ. ಇದಲ್ಲದೆ, ನಿಮ್ಮನ್ನು ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಒಡ್ಡಿದ್ದಾಗಿ ಸಿಬಂದಿ ದೂರು ನೀಡಿದ್ದಾರೆ.  ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

Mangalore Two arrested for assault on Kadri Police constables. The arrested are identified as Dani Paul and Joseph Noronha.