ಮಕ್ಕಳ ಪೋರ್ನೋ ವಿಡಿಯೋ ಜಾಲ ; ಕೇರಳದಲ್ಲಿ ವಿಶೇಷ ಪೊಲೀಸ್ ಕಾರ್ಯಾಚರಣೆ, ಹತ್ತು ಮಂದಿ ಸೆರೆ, 161 ಕೇಸು ದಾಖಲು 

23-01-22 09:09 pm       HK Desk news   ಕ್ರೈಂ

ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಮಕ್ಕಳ ಪೋರ್ನೋ ವಿಡಿಯೋ ಪ್ರಸಾರದ ಪ್ರಕರಣ ಸಂಬಂಧಿಸಿ ಕೇರಳ ಪೊಲೀಸರು ಪಿ- ಹಂಟ್ ಹೆಸರಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದು ರಾಜ್ಯಾದ್ಯಂತ ಹತ್ತು ಮಂದಿಯನ್ನು ಬಂಧಿಸಿದ್ದಾರೆ. 

ತಿರುವನಂತಪುರ, ಜ.23 : ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಮಕ್ಕಳ ಪೋರ್ನೋ ವಿಡಿಯೋ ಪ್ರಸಾರದ ಪ್ರಕರಣ ಸಂಬಂಧಿಸಿ ಕೇರಳ ಪೊಲೀಸರು ಪಿ- ಹಂಟ್ ಹೆಸರಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದು ರಾಜ್ಯಾದ್ಯಂತ ಹತ್ತು ಮಂದಿಯನ್ನು ಬಂಧಿಸಿದ್ದಾರೆ. 

ಜ.16 ರಂದು ವಿಶೇಷ ಕಾರ್ಯಾಚರಣೆ ನಡೆದಿದ್ದು ಸುಮಾರು 161 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅಲ್ಲದೆ, 186 ಮೊಬೈಲ್ ಇನ್ನಿತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. 

ಎಡಿಜಿಪಿ ಮನೋಜ್ ಅಬ್ರಹಾಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ವಿವಿಧ ಮಕ್ಕಳ ಪೋರ್ನೋ ವಿಡಿಯೋ ಪ್ರಸಾರದ ಜಾಲಗಳನ್ನು ಪತ್ತೆ ಮಾಡಲಾಗಿದೆ. ‌ಪೊಲೀಸರು ನಕಲಿ ಹೆಸರುಗಳ ಮೂಲಕ ಈ ಪೋರ್ನೋ ವಿಡಿಯೋ ಜಾಲದ ಒಳಕ್ಕೆ ನುಗ್ಗಿದ್ದು ಆಮೂಲಕ ಅದರ ಒಳಸುಳಿಯನ್ನು ತಿಳಿದುಕೊಂಡಿದ್ದರು. ನಿರಂತರ ಕಾರ್ಯಾಚರಣೆಯಿಂದ ಈ ರೀತಿಯ ಅಪರಾಧ ಕೃತ್ಯ ಹೊರಬಂದಿತ್ತು. 

ವಶಕ್ಕೆ ಪಡೆಯಲಾದ ಮೊಬೈಲ್ ಇನ್ನಿತರ ಉಪಕರಣಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ವಿಡಿಯೋ ಪತ್ತೆಯಾಗಿದೆ. ಮಕ್ಕಳ ಮೇಲೆ ರೇಪ್, ಮನೆ, ಸ್ವಿಮ್ಮಿಂಗ್ ಪೂಲ್, ವಾಟರ್ ಪಾರ್ಕ್, ಮಾಲ್, ರೆಸಾರ್ಟ್, ಹೊಟೇಲ್ ಗಳಲ್ಲಿ ಮಕ್ಕಳ ಮೇಲೆ ಎಸಗುವ ಹಲ್ಲೆ ಇನ್ನಿತರ ಕಿರುಕುಳದ ವಿಡಿಯೋಗಳಿದ್ದವು. ಈ ರೀತಿಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಗ್ರೂಪ್ ಗಳಲ್ಲಿ ನಿಗೂಢ ರೀತಿಯಲ್ಲಿ ಷೇರ್ ಮಾಡುತ್ತಿದ್ದರು. 

ಮಕ್ಕಳ ಪೋರ್ನೋ ವಿಡಿಯೋಗಳನ್ನು ನೋಡುವುದು, ಷೇರ್ ಮಾಡುವುದು, ಮೊಬೈಲ್ ನಲ್ಲಿ ಇಟ್ಟುಕೊಳ್ಳುವುದು ಅಪರಾಧವಾಗಿದ್ದು ಈ ರೀತಿಯ ಕೃತ್ಯಗಳಿಗೆ ಕಾನೂನಿನಲ್ಲಿ ಐದು ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ.

As many as ten people were arrested as part of operation P-Hunt by the Kerala Police to tackle child pornography and child sexual exploitation in the state. The tenth edition of the drive was held on January 16 and over 161 cases were registered and 186 devices were seized during the drive.