ಬ್ರೇಕಿಂಗ್ ನ್ಯೂಸ್
24-01-22 08:52 pm Mangalore Correspondent ಕ್ರೈಂ
ಮಂಗಳೂರು, ಜ.24 : ಕೆಎಸ್ಆರ್ ಪಿ ವಿಭಾಗದಲ್ಲಿ ಪೊಲೀಸ್ ಹುದ್ದೆ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿದ್ದ ನಿವೃತ್ತ ಯೋಧನೊಬ್ಬ ತನ್ನ ಸೇವೆಯ ಕುರಿತ ದಾಖಲಾತಿಯಲ್ಲಿ ಫೋರ್ಜರಿ ಮಾಡಿರುವುದು ಕಂಡುಬಂದಿದ್ದು, ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ವಿಭಾಗದ ಕೆಎಸ್ಆರ್ ಪಿ ಯೂನಿಟ್ ಅಸೈಗೋಳಿಯಲ್ಲಿದ್ದು, ಅಲ್ಲಿನ ಕೇಂದ್ರಕ್ಕೆ ಸೇರ್ಪಡೆಯಾಗಲು ಚಿತ್ರದುರ್ಗದ ವಸಂತ ಕುಮಾರ್ ಎಂಬ ವ್ಯಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಜೊತೆಗೆ ತನ್ನ ಸೇವಾವಧಿ, ಶಿಕ್ಷಣ ಇನ್ನಿತರ ದಾಖಲಾತಿಗಳನ್ನು ನೀಡಿದ್ದ.
ಆಯ್ಕೆ ಪ್ರಕ್ರಿಯೆ ವೇಳೆ ಆತ ನೀಡಿದ್ದ ದಾಖಲಾತಿಗಳನ್ನು ಆಯಾ ವಿಭಾಗಕ್ಕೆ ಪರಿಶೀಲನೆಗಾಗಿ ಕಳಿಸಿಕೊಡಲಾಗಿತ್ತು. ಈ ವೇಳೆ, ವಸಂತ ಕುಮಾರ್ ತಾನು ಸಿಆರ್ ಪಿಎಫ್ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾಗಿನ ಅವಧಿಯ ನಿರ್ವಹಣಾ ಪತ್ರದಲ್ಲಿ ಪೋರ್ಜರಿ ಮಾಡಿದ್ದು ಕಂಡುಬಂದಿದೆ. ಸೇವಾವಧಿಯಲ್ಲಿ ಕುಡಿತದ ಚಟ ಹೊಂದಿದ್ದರಿಂದ ಬ್ಯಾಡ್ ಎಂದು ನಮೂದಿಸಿದ್ದನ್ನು ತಿದ್ದಿ ಗುಡ್ ಎಂದು ಮಾಡಿಕೊಂಡಿದ್ದ.
ಸರಕಾರಿ ದಾಖಲೆಯನ್ನು ತಿದ್ದಿ ಪೋರ್ಜರಿ ಮಾಡಿದ್ದಲ್ಲದೆ, ಸರಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಮೋಸ ಎಸಗಿದ ವಿಚಾರದಲ್ಲಿ ಕೆಎಸ್ಆರ್ ಪಿ ಕಮಾಂಡೆಂಟ್ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಕೊಣಾಜೆ ಠಾಣೆಯಲ್ಲಿ ಆತನ ಪೋರ್ಜರಿ ದಾಖಲೆ ಬಗ್ಗೆ ಎಫ್ಎಸ್ ಎಲ್ ಮಾಡಲು ನೀಡಲಾಗಿದ್ದು ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
Mangalore Ex Military Man forges conduct certificate to Join KSRP Police department, FIR has been filed against Vasant Kumar native of Chitradura at Konaje Police Station. He had forged the conduct certificate issued by the Military Department. His conduct was issued as bad which he tried to forge as good.
08-01-25 09:26 pm
Bangalore Correspondent
ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು ಸೇರಿ ರಾಜ್ಯದಾದ್...
08-01-25 03:39 pm
VHMP virus, CM Siddaramaiah: ಎಚ್ಎಂಪಿವಿ ಆತಂಕಾರ...
08-01-25 11:43 am
No emergecy in China, Virus News Kannada; ಚೀನ...
06-01-25 09:41 pm
Chamarajanagar, Heart Attack School Student:...
06-01-25 06:53 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
08-01-25 09:51 pm
Mangalore Correspondent
Surathkal Beach, Drowning, Mangalore; ಸುರತ್ಕಲ...
08-01-25 06:13 pm
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
Mangalore University, Phd Admission: ಮಂಗಳೂರು...
07-01-25 10:22 pm
09-01-25 01:26 pm
Mangaluru Correspondent
Vamanjoor Misfire, Mangalore Crime, Police; ಪ...
09-01-25 11:27 am
Fraud, Mangalore, QR Scan; ಪೆಟ್ರೋಲ್ ಪಂಪ್ ನಲ್ಲ...
08-01-25 10:57 pm
Ullal Crime, Mangalore: ಉಳ್ಳಾಲದಲ್ಲಿ ವಲಸೆ ಕಾರ್...
08-01-25 05:58 pm
Cyber Fruad, CBI, Udupi, Karkala: ಸಿಬಿಐ ಹೆಸ್ರ...
08-01-25 03:14 pm