ಬ್ರೇಕಿಂಗ್ ನ್ಯೂಸ್
25-01-22 10:13 pm Mangalore Correspondent ಕ್ರೈಂ
ಮಂಗಳೂರು, ಜ.25 : ಒಳ್ಳೆ ಉದ್ಯೋಗ ತೆಗೆಸಿಕೊಡುವುದಾಗಿ ಹೇಳಿ ಯುವಕನೊಬ್ಬನಿಂದ 25 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಲಪಟಾಯಿಸಿದ ಪ್ರಕರಣ ನಡೆದಿದ್ದು, ಈ ಬಗ್ಗೆ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ವ್ಯಕ್ತಿ ಆರೋಪಿಗಳನ್ನು ಅಂಕುರ್ ದೇಸಾಯಿ, ಅನಾಮಿಕ ಶರ್ಮಾ, ಅನುರಾಧ, ಸೋನಿಯಾ, ಪ್ರಿಯಾಂಕ ರೆಡ್ಡಿ, ರಾಜೀವ್, ಪೂಜಾ, ಲಕ್ಷ್ಮೀ ಮತ್ತು ಪಲ್ಲವಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉದ್ಯೋಗ ಅರಸುತ್ತಿದ್ದ ವ್ಯಕ್ತಿ ಆನ್ಲೈನಲ್ಲಿ ಸೈನ್ ಡಾಟ್ ಕಾಮ್ ಎಂಬ ವೆಬ್ ಸೈಟ್ ನಲ್ಲಿ ತನ್ನ ಕುರಿತ ವಿವರ ಹಾಕಿದ್ದ. ಈ ಬಗ್ಗೆ ತಿಳಿದ ಅಂಕುರ್ ದೇಸಾಯಿ ಎಂಬಾತ ಕರೆ ಮಾಡಿದ್ದು, ಸೆಕ್ಯುರ್ ಕ್ಯಾರಿಯರ್ ಎಂಬ ವೆಬ್ ಸೈಟಿನಲ್ಲಿ ವಿವರ ಅಪ್ಲೋಡ್ ಮಾಡುವಂತೆ ಸಲಹೆ ನೀಡಿದ್ದಾನೆ.
ಅಲ್ಲದೆ, 2358 ರೂಪಾಯಿ ನೀಡಿ, ತನ್ನ ಹೆಸರನ್ನು ರಿಜಿಸ್ಟರ್ ಮಾಡುವಂತೆ ಸೂಚಿಸಿದ್ದಾನೆ. ಆತನ ಸೂಚನೆಯಂತೆ, ಅದೇ ರೀತಿ ರಿಜಿಸ್ಟರ್ ಮಾಡಿದಾಗ, ವಿದ್ಯಾರ್ಹತೆ ಆಧರಿಸಿ ಹಲವು ಕಂಪೆನಿಗಳ ಲಿಸ್ಟ್ ಬಂದಿತ್ತು. ಆನಂತರ, ಈತನ ದಾಖಲಾತಿ ಪರಿಶೀಲನೆ ಎಂದು ಹೇಳಿ 4130 ರೂಪಾಯಿ ಸಂದಾಯ ಮಾಡುವಂತೆ ತಿಳಿಸಿದ್ದರು. ಅದನ್ನೂ ತನ್ನ ಐಸಿಐಸಿಐ ಬ್ಯಾಂಕಿನಿಂದ ಪಾವತಿ ಮಾಡಿದ್ದಾನೆ.
ಇದೇ ರೀತಿ ಹಲವು ಕಂಪನಿಗಳಿಗೆ ಅರ್ಜಿ ಸಲ್ಲಿಕೆ ನೆಪದಲ್ಲಿ ಹಣವನ್ನು ಕೇಳಿದ್ದು ವ್ಯಕ್ತಿ 10,65,065 ರೂಪಾಯಿ ಪಾವತಿ ಮಾಡಿದ್ದಾನೆ. ಹಲವು ಯುವತಿಯರು ಫೋನ್ ಮಾಡಿ, ಮನವೊಲಿಕೆ ಮಾಡುತ್ತಿದ್ದರು. ನೀವು ಈಗ ಪಾವತಿ ಮಾಡಿರುವ ಹಣವನ್ನು ಆನಂತರ ಉದ್ಯೋಗ ದೊರೆತ ಬಳಿಕ ಹಿಂತಿರುಗಿಸಲಾಗುವುದು ಎಂದು ಹೇಳುತ್ತಿದ್ದರು. ಹೇಗೂ ಇಷ್ಟು ಹಣ ಪಾವತಿ ಆಗಿದ್ಯಲ್ಲ, ದೊಡ್ಡ ಸಂಬಳದ ಉದ್ಯೋಗ ಸಿಕ್ಕಲ್ಲಿ ಆಮೇಲೆ ಡಿಪಾಸಿಟ್ ಇಟ್ಟ ಹಣವೂ ರಿಟರ್ನ್ ಆಗುತ್ತೆ ಎಂದು ನಂಬಿ ಸರದಿಯಂತೆ ಹಣವನ್ನು ನೀಡಿದ್ದಾನೆ.
ಕೊನೆಗೆ ಬರೋಬ್ಬರಿ 25,49,079 ರೂಪಾಯಿ ಹಣವನ್ನು ನೀಡಿದ್ದು ಇಷ್ಟು ಹಣ ಖಾಲಿಯಾದ ಬಳಿಕ ತಾನು ಮೋಸ ಹೋಗಿದ್ದಾಗಿ ಅರಿವಿಗೆ ಬಂದಿದೆ. ಸುರತ್ಕಲ್ ಎಸ್ ಬಿಐ ಮತ್ತು ಐಸಿಐಸಿಐ ಬ್ಯಾಂಕಿನಿಂದ ಹಣ ಪಾವತಿ ಮಾಡಿದ್ದು, ವ್ಯಕ್ತಿ ಉದ್ಯೋಗದ ಆಸೆಯಿಂದ ನಂಬಿ ಹಣ ಕೊಟ್ಟು ಕೆಟ್ಟಿದ್ದ. ಇದೀಗ ತನ್ನ ಹಣ ಹೋಗಿರುವ ಬಗ್ಗೆ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Mangalore Youth looses around 25 lakhs after falling prey to Job opportunity. Case has been registered against seven people at cyber crime police station.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm