ಬ್ರೇಕಿಂಗ್ ನ್ಯೂಸ್
26-01-22 09:17 pm Mangalore Correspondent ಕ್ರೈಂ
Photo credits : Headline Karnataka
ಉಳ್ಳಾಲ, ಜ.26 : ತಲಪಾಡಿ ಗಡಿಯಲ್ಲಿ ಅಕ್ರಮ ಮರಳು ದಂಧೆ ಅತಿರೇಕಕ್ಕೆ ಹೋಗಿದ್ದು ಮಂಗಳವಾರ ನಡುರಾತ್ರಿ ಎರಡು ಮಾಫಿಯಾ ತಂಡಗಳು ತಲವಾರು ಹಿಡಿದು ಬೀದಿ ಕಾಳಗವನ್ನೇ ನಡೆಸಿವೆ. ಸಾನು ಶೆಟ್ಟಿ ಎಂಬ ಬಿಜೆಪಿ ಬೆಂಬಲಿಗನ ಮೇಲೆ ಮತ್ತೋರ್ವ ಮಾಫಿಯಾ ಕುಳ, ಶಾಸಕ ಯುಟಿ ಖಾದರ್ ಆಪ್ತ ವೈಭವ್ ಶೆಟ್ಟಿ ಕಡೆಯವರು ತಲವಾರು ದಾಳಿ ನಡೆಸಿದ್ದು ಇದೆಲ್ಲವೂ ಪೊಲೀಸರ ಮುಂದೆಯೇ ನಡೆದಿದ್ದರೂ ಬಿಜೆಪಿ ಮುಖಂಡರು ಸೇರಿ ಪ್ರಸಂಗವನ್ನ ರಾಜಿಯಲ್ಲಿ ಇತ್ಯರ್ಥಗೊಳಿಸಿದ್ದಾರೆ.
ಉಳ್ಳಾಲದಲ್ಲಿ ಪೊಲೀಸ್ ವ್ಯವಸ್ಥೆ ಇದೆಯೋ, ಇಲ್ಲವೋ ಎಂದು ಜನರು ಆಡಿಕೊಳ್ಳುವ ಮಟ್ಟದಲ್ಲಿ ಗಡಿ ಪ್ರದೇಶ ತಲಪಾಡಿಯಲ್ಲಿ ಮರಳು ಮಾಫಿಯಾ ರಾಜಾರೋಷ ಎನ್ನುವಂತಾಗಿದೆ. ಉಳ್ಳಾಲದಲ್ಲಿ ಮರಳು ಲೂಟಿ ಮಾಡಿ ಕೋಟ್ಯಾಧೀಶ್ವರರಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಇಬ್ಬರು ಮರಳು ಪುಢಾರಿಗಳ ನಡುವೆ ನಿನ್ನೆ ನಡುರಾತ್ರಿ ಬೀದಿ ಕಾಳಗ ನಡೆದಿದೆ.
ತಲಪಾಡಿಯಲ್ಲಿ ಮರಳುಗಾರಿಕೆ ನಡೆಸುತ್ತಿರುವ ಶಾಸಕ ಯು.ಟಿ ಖಾದರ್ ಆಪ್ತ, ತಲಪಾಡಿ ಗ್ರಾಮ ಪಂಚಾಯತ್ ಸದಸ್ಯ ವೈಭವ್ ಶೆಟ್ಟಿ ತನ್ನ ಅಕ್ರಮ ಮರಳಿಗೆ ಡಿಮಾಂಡ್ ಹೆಚ್ಚಿಸಲೆಂದು ಎದುರಾಳಿ ಬಿಜೆಪಿ ಪಕ್ಷದ ಸಾನು ಶೆಟ್ಟಿಯ ಮರಳು ಲಾರಿಗಳನ್ನ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ನಿರಂಜನ್ ಮುಖೇನ ಜಪ್ತಿ ಮಾಡಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವನ್ನ ಮುಂದಿಟ್ಟು ಸಾನು ಶೆಟ್ಟಿ ಮಂಗಳವಾರ ನಡುರಾತ್ರಿ ತಲಪಾಡಿ ಟೋಲ್ ಗೇಟಲ್ಲಿ ಕಾದು ಕುಳಿತು ವೈಭವ್ ಶೆಟ್ಟಿ ಸಾಗಿಸುತ್ತಿದ್ದ ಮರಳು ಟಿಪ್ಪರನ್ನ ಅಡ್ಡ ಹಾಕಿದ್ದು ಪುಡಿಗೈದಿದ್ದಾನೆ. ಈ ವೇಳೆ ವೈಭವ್ ಶೆಟ್ಟಿ ಆಪ್ತ ಕೇರಳದ ಕುಂಜತ್ತೂರಿನ ಸುಪ್ರೀತ್ ಎಂಬಾತ ಸಾನು ಶೆಟ್ಟಿಯ ಮೇಲೆ ತಲವಾರು ಬೀಸಿದ್ದು ಸಾನು ಅಪಾಯದಿಂದ ತಪ್ಪಿಸಿಕೊಂಡಿದ್ದಾನೆ. ಇದರ ಮಧ್ಯದಲ್ಲಿ ವೈಭವ್ ಶೆಟ್ಟಿ, ಎದುರಾಳಿ ಸಾನು ಶೆಟ್ಟಿ ಬೆಂಬಲಿಗರಾದ ಮೂವರ ಮೇಲೆ ತನ್ನ ಕಾರನ್ನು ಹರಿಸಿದ್ದು ಉದ್ರಿಕ್ತ ಸಾನು ಬೆಂಬಲಿಗರು ವೈಭವ ಶೆಟ್ಟಿಯನ್ನು ಹಿಡಿದು ಥಳಿಸಿ ಹಲ್ಲೆ ನಡೆಸಿದ್ದಾರೆ.
ಗಾಯಗೊಂಡ ವೈಭವ್ ಶೆಟ್ಟಿ ತೊಕ್ಕೊಟ್ಟಿನ ಸಹಾರಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಇತ್ತ ವೈಭವನಿಂದ ಕಾರು ಡಿಕ್ಕಿ ಹೊಡೆಸಿ ಗಾಯಗೊಂಡ ಮೂವರು ಯುವಕರು ತೊಕ್ಕೊಟ್ಟಿನ ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಇಂದು ಮಧ್ಯಾಹ್ನ ನೇತಾಜಿ ಆಸ್ಪತ್ರೆಗೆ ಮುಡಿಪು ಭಾಗದ ಪ್ರಭಾವಿ ಬಿಜೆಪಿ ಮುಖಂಡ ಭೇಟಿ ನೀಡುತ್ತಿದ್ದಂತೆಯೇ ತಲವಾರು ದಾಳಿ ಪ್ರಸಂಗವು ರಾಜಿ ಪಂಚಾಯತಿಯಲ್ಲಿ ಇತ್ಯರ್ಥಗೊಂಡಿದೆ. ಆಮೂಲಕ ಅಕ್ರಮ ಮರಳುಗಾರಿಕೆಗೆ ಪಕ್ಷ ಬೇಧವಿಲ್ಲ ಎನ್ನುವುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಸಾಬೀತು ಮಾಡಿದ್ದಾರೆ.
ಉಳ್ಳಾಲ ಮತ್ತು ಸೋಮೇಶ್ವರ ಕಡಲ ತೀರಗಳಲ್ಲಿ ರಾತ್ರಿ ಹಗಲೆನ್ನದೆ ಲೂಟಿಗೈದ ಮರಳನ್ನ ತಲಪಾಡಿಯಲ್ಲಿ ಕೇರಳ ಗಡಿ ದಾಟಿಸುವಲ್ಲಿ ತಲಪಾಡಿ ಗ್ರಾ.ಪಂ. ಸದಸ್ಯ ಶಾಸಕ ಯು.ಟಿ ಖಾದರ್ ಆಪ್ತನಾಗಿರುವ ವೈಭವ್ ಶೆಟ್ಟಿ ನಿಸ್ಸೀಮನಾಗಿ ಬೆಳೆದಿದ್ದಾನೆ ಎನ್ನುವ ಮಾತಿದೆ. ಈ ಹಿಂದೆ ಮಾಮೂಲಿ ಫೋಟೋಗ್ರಾಫರ್ ಆಗಿದ್ದ ವೈಭವ್ ಇಂದು ಮರಳು ಲೂಟಿಗೈದ ಕಾಸಿನಲ್ಲೇ ಕೋಟ್ಯಾಧೀಶನಾಗಿದ್ದು ದಿನ ಒಂದಕ್ಕೆ ಲಕ್ಷಾಂತರ ರೂಪಾಯಿ ಮರಳು ಧಂದೆ ನಡೆಸುವಷ್ಟು ಪ್ರಬಲನಾಗಿ ಬೆಳೆದಿದ್ದಾನೆ. ಅದೇ ತಲಪಾಡಿ ಭಾಗದ ಸಾನು ಶೆಟ್ಟಿ ಎಂಬಾತ ತಲಪಾಡಿಯಲ್ಲಿ ಮರಳುಗಾರಿಕೆ ನಡೆಸುತ್ತಿರುವ ಮತ್ತೊಂದು ಹೆಸರು. ತಲಪಾಡಿಯ ವಿಜಯಾ ಬ್ಯಾಂಕ್ ಬಳಿಯ ನದಿ ತೀರದಿಂದ ಅಕ್ರಮವಾಗಿ ಮರಳನ್ನ ಲೂಟಿಗೈದು ಕೇರಳಕ್ಕೆ ಸಾಗಿಸುವುದನ್ನೇ ದಂಧೆ ಮಾಡಿಕೊಂಡಿದ್ದಾನೆ.
ತಲಪಾಡಿ ಭಾಗದ ಮರಳು ಮಾಫಿಯಾಗಳಾಗಿರುವ ವೈಭವ್ ಶೆಟ್ಟಿ ಮತ್ತು ಸಾನು ಶೆಟ್ಟಿ ಕಾಂಗ್ರೆಸ್, ಬಿಜೆಪಿಯಲ್ಲಿ ಗುರುತಿಸಿಕೊಂಡವರಾಗಿದ್ದು ಇವರ ನಡುವೆ ದಂಧೆ ವಿಚಾರದಲ್ಲಿ ವೈಷಮ್ಯ ಹುಟ್ಟಿಕೊಂಡಿದ್ದರೂ ಅದನ್ನು ಶಾಸಕ ಖಾದರ್ ಮತ್ತು ಬಿಜೆಪಿ ಪುಢಾರಿಗಳು ಎಡ್ಜಸ್ಟ್ ಮೆಂಟಿನಲ್ಲಿ ನಡೆಸಿಕೊಂಡು ಹೋಗುತ್ತಿರುವುದು ಹಳೆಯ ವಿಚಾರ. ಆದರೆ ಈ ವೈಷಮ್ಯ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳನ್ನು ನಿಯಂತ್ರಿಸಿ, ಮತ್ತೊಬ್ಬನ ಮೇಲೆ ಛೂಬಿಡುವ ಹಂತಕ್ಕೆ ಹೋಗಿದೆ. ಅಷ್ಟೇ ಅಲ್ಲ, ಎರಡು ಮಾಫಿಯಾ ತಂಡಗಳು ಪೊಲೀಸರ ಸಮ್ಮುಖದಲ್ಲೇ ತಲವಾರು ಬೀಸುವುದಕ್ಕೂ ಮುಂದಾಗಿದ್ದು ಉಳ್ಳಾಲದಲ್ಲಿ ಪೊಲೀಸ್ ವ್ಯವಸ್ಥೆ ಮರಳು ಮಾಫಿಯಾಕ್ಕೆ ಮಂಡಿಯೂರಿ ಮಕಾಡೆ ಮಲಗಿದೆಯೋ ಎಂದು ಜನರು ಆಡಿಕೊಳ್ಳುವಂತಾಗಿದೆ.
ಈ ಹಿಂದೆ ಕೇಸರಿ ಪಾಳಯದಲ್ಲೇ ಇದ್ದ ವೈಭವ್ ಶೆಟ್ಟಿ ಮರಳು ದಂಧೆಗಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಎನ್ನುವ ಮಾತನ್ನು ಸ್ಥಳೀಯರು ಹೇಳುತ್ತಾರೆ. ಕಳೆದ ಬಾರಿ ತಲಪಾಡಿ ಗ್ರಾಪಂ ಚುನಾವಣೆಯಲ್ಲಿ ಮರಳು ದಂಧೆಯಲ್ಲಿ ತೊಡಗಿಸಿರುವ ವೈಭವ್ ಮತ್ತು ಸಾನು ಶೆಟ್ಟಿ ಪರಸ್ಪರ ಎದುರಾಳಿಗಳಾಗಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಸಾನು ಶೆಟ್ಟಿಯನ್ನ ಕಾಂಗ್ರೆಸಿನ ವೈಭವ್ ಶೆಟ್ಟಿ ಸೋಲಿಸಿ ಗ್ರಾಮ ಪಂಚಾಯತ್ ಸದಸ್ಯನಾಗಿದ್ದಲ್ಲದೇ, ಮರಳು ಮಾಫಿಯಾದಲ್ಲಿ ಪ್ರಭಾವ ಹೆಚ್ಚಿಸಿಕೊಂಡಿದ್ದ.
ಮರಳು ಮಾಫಿಯಾಕ್ಕೆ ಉಳ್ಳಾಲ ಇನ್ಸ್ ಪೆಕ್ಟರ್ ಸಾಥ್ !
ಜನವರಿ ಆರಂಭದಲ್ಲಿ ದಕ್ಷಿಣ ಉಪವಿಭಾಗಕ್ಕೆ ನೂತನ ಎಸಿಪಿಯಾಗಿ ಬಂದಿದ್ದ ಐಪಿಎಸ್ ಅಧಿಕಾರಿಯೊಬ್ಬರು ಉಳ್ಳಾಲದ ಮರಳು ಮಾಫಿಯಾದ ಬಗ್ಗೆ ಪ್ರಶ್ನೆ ಮಾಡಿದ್ದಲ್ಲದೆ, ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಅವರಿಗೆ ಖಡಕ್ ವಾರ್ನಿಂಗ್ ಮಾಡಿದ್ದರು. ಆದರೆ ಆ ಎಸಿಪಿಯನ್ನ ಎರಡೇ ದಿನದಲ್ಲಿ ಇಲ್ಲಿಂದ ಎತ್ತಂಗಡಿ ಮಾಡಿದ್ದು ಮರಳು ಮಾಫಿಯಾದ ಕೈವಾಡದಿಂದ ಆಗಿತ್ತು ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ. ಉಳ್ಳಾಲದಲ್ಲಿ ಕಳೆದ ಒಂದೂವರೆ ವರುಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಇನ್ಸ್ ಪೆಕ್ಟರ್ ಸಂದೀಪ್ ಈ ಭಾಗದ ಅಕ್ರಮ ಮರಳು ಮಾಫಿಯಾದೊಂದಿಗೆ ಶಾಮೀಲಾಗಿರುವ ಬಗ್ಗೆ ಮೊದಲಿನಿಂದಲೂ ಆರೋಪ ಇದೆ. ವಶಪಡಿಸಿದ ಅಕ್ರಮ ಮರಳನ್ನ ಜೇಡಿ ಮಣ್ಣೆಂದು ಬಿಂಬಿಸಿ ಬಿಟ್ಟು ಕಳುಹಿಸುವಷ್ಟು ಜಾಣತನವನ್ನು ಅಲ್ಲಿನ ಇನ್ಸ್ ಪೆಕ್ಟರ್ ಮೈಗೂಡಿಸಿಕೊಂಡಿದ್ದಾರೆ ಎಂಬ ಮಾತುಗಳನ್ನು ಉಳ್ಳಾಲ ಪೊಲೀಸ್ ಠಾಣೆಯ ಗೋಡೆಗಳೂ ಹೇಳತೊಡಗಿವೆ.
ಆದರೆ, ಪೊಲೀಸರ ನಿರ್ಲಕ್ಷ್ಯ ಧೋರಣೆ, ಮಾಮೂಲಿ ಪಡೆದು ಮೌನ ವಹಿಸುವ ಚಾಳಿಯಿಂದಾಗಿ ಮುಂದೊಂದು ದಿನ ಇದೇ ಮರಳು ಮಾಫಿಯಾಗಳು ತಲವಾರು ಹಿಡಿದು ಗಡಿಭಾಗದಲ್ಲಿ ಹೆಣ ಉರುಳಿಸುವಷ್ಟರ ಮಟ್ಟಿಗೆ ಬೆಳೆದು ನಿಂತರೆ ಅದಕ್ಕೆ ಉಳ್ಳಾಲ ಮತ್ತು ಮಂಗಳೂರಿನ ಪೊಲೀಸ್ ವ್ಯವಸ್ಥೆಯೇ ಕಾರಣ ಎನ್ನುವುದನ್ನು ಹೇಳಲೇಬೇಕಾಗುತ್ತದೆ.
Ullal Dispute in illegal Sand Mining at Talapady, BJP member Sanu Shetty attacked by Congress member and close associate of U T Khader Vaibhav Shetty using the sword at midnight in the presence of Police inspector, Ullal station. Sanu Shetty has been hospitalized. But no FIR has been registered by the police. Illegal sand mining is taking place without any fear of police or law.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 12:31 pm
Mangalore Correspondent
Brahmavara Police Station, Udupi: ಪೊಲೀಸರ ವಶದ...
26-11-24 11:23 pm
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm