ಬ್ರೇಕಿಂಗ್ ನ್ಯೂಸ್
27-01-22 12:30 pm HK Desk news ಕ್ರೈಂ
ನವದೆಹಲಿ, ಜ.27 : ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನವೇ ಮಹಿಳೆಯೊಬ್ಬಳನ್ನು ಅಪಹರಿಸಿ, ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಲ್ಲದೆ ಹಲ್ಲೆಗೈದು ವಿಕೃತವಾಗಿ ನಡೆದುಕೊಂಡ ಘಟನೆ ನಡೆದಿದ್ದು, ಪ್ರಕರಣ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮಹಿಳೆಯ ಬಗ್ಗೆ ವೈಯಕ್ತಿಕ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಮಹಿಳೆಯನ್ನು ಅಪಹರಿಸಿದ ತಂಡ, ಗ್ಯಾಂಗ್ ರೇಪ್ ನಡೆಸಿದ್ದಲ್ಲದೆ, ಆಕೆಯ ತಲೆಗೂದಲನ್ನು ಕತ್ತರಿಸಿ ಕುತ್ತಿಗೆಗೆ ಚಪ್ಪಲಿಯ ಹಾರ ತೊಡಿಸಿ ರಸ್ತೆಯಲ್ಲಿ ನಡೆದು ಹೋಗುವಂತೆ ಮಾಡಿದ್ದಾರೆ. ದೆಹಲಿಯ ಶಾರದಾ ಜಿಲ್ಲೆಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಘಟನೆ ನಡೆದಿದೆ.
ಮಹಿಳೆಗೆ ಮದುವೆಯಾಗಿದ್ದು, ಒಂದು ಮಗುವನ್ನು ಹೊಂದಿದ್ದಾಳೆ. ಆದರೆ ಆಕೆಯನ್ನು ಚುಡಾಯಿಸುತ್ತಾ ಬೆನ್ನು ಬಿದ್ದಿದ್ದ ಸ್ಥಳೀಯ ಯುವಕನೊಬ್ಬ ಕಳೆದ ನವೆಂಬರ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಾವಿಗೆ ಯುವತಿ ಮತ್ತು ಆಕೆಯ ಮನೆಯವರೇ ಕಾರಣ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದರು. ಇದೀಗ ಅದೇ ಮಹಿಳೆಯನ್ನು ಅಪಹರಿಸಿರುವ ಅಲ್ಲಿಯದ್ದೇ ಯುವಕರ ತಂಡ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಆಕೆಯ ಮಾನ ಹರಾಜು ಹಾಕುವ ದೃಷ್ಟಿಯಿಂದ ಕೂದಲನ್ನು ಕತ್ತರಿಸಿ, ಚಪ್ಪಲಿ ಹಾರ ಹಾಕಿ ಮನೆಗೆ ತೆರಳುವಂತೆ ಕಳಿಸಿಕೊಟ್ಟಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ದುರದೃಷ್ಟಕರ ಘಟನೆ ನಡೆದಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಂತ್ರಸ್ತ ಮಹಿಳೆಯನ್ನು ಕೌನ್ಸಿಲಿಂಗ್ ಒಳಪಡಿಸುತ್ತೇವೆ. ಆಕೆಯ ದೂರಿನಂತೆ ಗ್ಯಾಂಗ್ ರೇಪ್, ಹಲ್ಲೆ ಕೃತ್ಯದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
The Delhi Police has arrested four accused after a woman was allegedly kidnapped, gang-raped and assaulted in the Vivek Vihar area of the national capital on Republic Day. The incident is suspected to be the result of the woman's personal enmity with the accused, police said. The woman's hair was chopped, she was garlanded with shoes and made to walk the streets by the accused as the locals cheered on.
30-07-25 11:40 am
Bangalore Correspondent
Durgaamba Bus Accident, Shivamogga: ಮಂಗಳೂರಿನಿ...
30-07-25 10:33 am
Kerala Nurse Nimisha Priya: ಕೇರಳ ನರ್ಸ್ ನಿಮಿಷ...
29-07-25 01:31 pm
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
30-07-25 09:06 am
HK News Desk
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
30-07-25 09:04 am
Mangalore Correspondent
No Evidence, Dharmasthala Burial, SIT: ಹೆಣ ಹೂ...
29-07-25 09:56 pm
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
30-07-25 11:37 am
HK News Desk
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm