ಬ್ರೇಕಿಂಗ್ ನ್ಯೂಸ್
29-01-22 03:42 pm HK Desk news ಕ್ರೈಂ
ಮಂಡ್ಯ, ಜ 29: ಗಂಡನೇ ಪತ್ನಿಯ ಕತ್ತು ಕೊಯ್ದು ನಂತರ ತಲೆಯ ಮೇಲೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಜರುಗಿದೆ.
ರಾಗಿಮುದ್ದನಹಳ್ಳಿಯ ಶಾಲಿನಿ (32) ಕೊಲೆಯಾಗಿರುವ ಪತ್ನಿಯಾಗಿದ್ದು, ಸುರೇಶ್ (40) ಕೊಲೆ ಮಾಡಿದ ಪತಿಯಾಗಿದ್ದಾನೆ. ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಲಿನಿ ಹಾಗೂ ಸುರೇಶ್ ಒಂದೇ ಗ್ರಾಮದವರಾಗಿದ್ದು, ಶಾಲಿನಿ ಕಾಲೇಜಿಗೆ ಹೋಗುವ ವೇಳೆ ಆಕೆಯನ್ನು ಪ್ರೀತಿಸಿ ಸುರೇಶ್ ಮದುವೆಯಾಗಿದ್ದ. ಕೆಲವು ವರ್ಷ ಅನ್ಯೋನ್ಯವಾಗಿದ್ದ ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಆದರೆ ಕೆಲ ವರ್ಷಗಳ ನಂತರ ಸುರೇಶ್ ತನ್ನ ಕ್ರೌರ್ಯ ಬುದ್ಧಿಯನ್ನು ಪ್ರದರ್ಶಿಸಿ ಶಾಲಿನಿಗೆ ಹಿಂಸೆ ಮಾಡುತ್ತಿದ್ದ. ಸುರೇಶ್ ಕುಡಿದು ಬಂದು ಶಾಲಿನಿಗೆ ಹೊಡೆಯುವುದು ಮನೆಯಲ್ಲಿ ಪ್ರತಿ ದಿನ ಗಲಾಟೆ ಮಾಡುತ್ತಿದ್ದ. ಇವರಿಗೆ ಎರಡನೇ ಮಗು ಹುಟ್ಟಿದ್ದಾಗ, ಹೆಣ್ಣು ಮಗು ಎಂಬ ಕಾರಣಕ್ಕೆ ಶಾಲಿನಿಗೆ ಸುರೇಶ್ ಮತ್ತಷ್ಟು ಹಿಂಸೆ ಕೊಡುತ್ತಿದ್ದನು. ಜೊತೆಗೆ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಮೂರು ಬಾರಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದನು.

ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿ ಸುರೇಶ್‍ನನ್ನು ಶಾಲಿನಿ ಜೈಲಿಗೆ ಕಳಿಸಿದ್ದಳು. ಜೈಲಿನಿಂದ ಬಂದ ಬಳಿಕ ಮತ್ತೆ ಶಾಲಿನಿಗೆ ಸುರೇಶ್ ಹಿಂಸೆ ಕೊಡಲು ಪ್ರಾರಂಭಿಸಿದ್ದ. ಈ ಹಿನ್ನೆಲೆಯಲ್ಲಿ 4 ವರ್ಷದ ಹಿಂದೆ ಈ ದಂಪತಿ ವಿಚ್ಛೇದನ ಪಡೆದಿದ್ದರು. ನಂತರ ಶಾಲಿನಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಂದೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ತನ್ನನ್ನು ಬಿಟ್ಟು ಜೀವನ ಸಾಗಿಸುತ್ತಿದ್ದಾಳೆ ಎಂದು ಸುರೇಶ್ ಖಿನ್ನತೆ ಒಳಗಾಗಿದ್ದಾನೆ.
ನಿನ್ನೆ ಶಾಲಿನಿ ಗಾಮೆರ್ಂಟ್‍ನಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಆಕೆಯನ್ನು ಎಳೆದುಕೊಂಡು ಹೋಗಿ ಮೊದಲಿಗೆ ಕತ್ತು ಕೊಯ್ದು ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಸುರೇಶ್ ಇದೀಗ ಪರಾರಿಯಾಗಿದ್ದು, ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿಯನ್ನು ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳು ಕಣ್ಣೀರಿಡುತ್ತಿದ್ದಾರೆ.
Mandya Wife killed by throwing stone on her head by Alcoholic husband. It was a love marriage.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm