ಬ್ರೇಕಿಂಗ್ ನ್ಯೂಸ್
30-01-22 05:38 pm HK Desk news ಕ್ರೈಂ
ಚಿಕ್ಕಮಗಳೂರು, ಜ.30 : ಅಪ್ರಾಪ್ತ ಹುಡುಗನೊಬ್ಬ ತಾನು ಪ್ರೀತಿಸುತ್ತಿದ್ದ ಅಪ್ರಾಪ್ತ ಹುಡುಗಿಯನ್ನು ಸಿಟ್ಟಿನ ಭರದಲ್ಲಿ ಹೊಡೆದು ಕೊಂದು ಬಿಟ್ಟಿದ್ದಲ್ಲದೆ, ಆಬಳಿಕ ಆಘಾತಕ್ಕೊಳಗಾಗಿ ಆಕೆಯ ಶವದ ಜೊತೆಗೇ ರಾತ್ರಿ ಕಳೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಜಡಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಒಂದೇ ಗ್ರಾಮದವರಾದ ಹುಡುಗ ಮತ್ತು ಹುಡುಗಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಈ ವಿಚಾರ ಎರಡು ಮನೆಯವರಿಗೂ ತಿಳಿದಿತ್ತು. ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ಮದುವೆ ಮಾಡಿಸುವ ಭರವಸೆಯನ್ನೂ ನೀಡಿದ್ದರು. ಆದರೆ, ಶುಕ್ರವಾರ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದೆಯೆಂದು ಹೇಳಿ ತನ್ನ ಹುಡುಗಿಯನ್ನು ಜೊತೆಗೆ ಕರೆದೊಯ್ದಿದ್ದ.
ಅಲ್ಲಿಂದ ಹಿಂತಿರುಗುವ ಸಂದರ್ಭದಲ್ಲಿ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ, ಯುವತಿ ಮದುವೆಗೂ ಮುನ್ನ ಈ ರೀತಿಯ ಸಂಬಂಧ ಬೇಡವೆಂದು ನಿರಾಕರಿಸಿದ್ದಾಳೆ. ಈ ವೇಳೆ ಯುವಕ ಬಲವಂತದಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗುತ್ತಿದೆ. ಇದರಿಂದ ಸಿಟ್ಟಿಗೆದ್ದ ಯುವತಿ, ಈ ಬಗ್ಗೆ ಮನೆಯವರಿಗೆ ತಿಳಿಸುವುದಾಗಿ ಗದರಿಸಿದ್ದಾಳೆ. ಇದೇ ವಿಚಾರದಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದ್ದು ಯುವಕ, ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ, ಹೊಡೆದ ಏಟಿನಿಂದಾಗಿ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಮತ್ತೆ ಏಳಲೇ ಇಲ್ಲ. ಇದರಿಂದ ದಿಗ್ಭ್ರಾಂತನಾದ ಯುವಕ ರಾತ್ರಿ ಏನೂ ಮಾಡಲಾಗದೇ ಅಲ್ಲಿಯೇ ಉಳಿದಿದ್ದಾನೆ. ಯುವತಿ ಬಿದ್ದ ಜಾಗದಲ್ಲೇ ಹೆಣವಾಗಿದ್ದಾಳೆ. ರಾತ್ರಿಯಿಡೀ ಕಾಡಿನ ಮಧ್ಯೆ ಶವದ ಜೊತೆಗೇ ಯುವಕ ಕಾಲ ಕಳೆದಿದ್ದು, ಬೆಳಗ್ಗೆ ಬಿಸಿಲೇರಿದಾಗ ಜನರು ನೋಡಿ ಗಾಬರಿಗೊಂಡಿದ್ದಾರೆ. ವಿಷಯ ಕೇಳಿದಾಗ, ಆಗಿರುವ ಪ್ರಮಾದವನ್ನು ಯುವಕ ಹೇಳಿಕೊಂಡಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Chikmagalur Minor youth kills lover girlfriend, spends whole night with the dead body. It is said that he took the girl to a isolated place and tried to rape her for which the girl objected. Angered by her behavior he killed her. The youth has been arrested by the Police.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 10:47 pm
HK News Desk
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
23-09-26 09:28 pm
HK News Staffer
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm
ಶಾರ್ಜಾದಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಬರ್ಬರ ಹತ್ಯ...
23-09-26 09:22 pm
sudarshan jain, murder, manglore: ಮೂಡುಬಿದ್ರೆ...
23-09-26 08:12 pm
ಪತ್ನಿಯ ಮೃತದೇಹ ಕೆರೆಯಲ್ಲಿ ಪತ್ತೆ ಬೆನ್ನಲ್ಲೇ ಪತಿ ನ...
23-09-26 05:12 pm